ಇಂದಿರಾ ಕ್ಯಾಂಟಿನ್ ಸ್ವಚ್ಛತಾ ಸಿಬ್ಬಂದಿಗೆ ವೇತನ ವಿಳಂಬ

ಇಂದಿರಾ ಕ್ಯಾಂಟೀನ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ಕಳೆದ ಮೂರು ತಿಂಗಳಿನಿಂದ ಸರ್ಕಾರ ಸಂಬಳ ನೀಡದಿರುವುದರಿಂದ ಇವರ ಗೋಳು ಕೇಳುವವರು ಯಾರು ಇಲ್ಲವೇ?

ಬೆಂಗಳೂರು, ಮೇ.೨೮- ರಾಜಧಾನಿ ಬೆಂಗಳೂರು ವ್ಯಾಪ್ತಿಯ ಇಂದಿರಾ ಕ್ಯಾಂಟಿನ್‌ನಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿರುವ ಸ್ವಚ್ಛತಾ ಸಿಬ್ಬಂದಿಗೆ ವೇತನ ಬಿಡುಗಡೆ ಗದೆ, ಸಂಕಷ್ಟಕ್ಕೆ ಸಿಲುಕಿರುವ ಆರೋಪ ಕೇಳಿಬಂದಿದೆ.ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು ಅಂದಾಜು ೧೭೫ ಇಂದಿರಾ ಕ್ಯಾಂಟಿನ್ ಪೈಕಿ, ಆದರಲ್ಲಿ ೧೬೩ ಇಂದಿರಾ ಕ್ಯಾಂಟಿನ್ಚಾ ಲ್ತಿಯಲ್ಲಿವೆ. ಆದರೆ, ಈ ಕ್ಯಾಂಟೀನ್ ಗಳಲ್ಲಿ ಕಾರ್ಯ ನಿರ್ವಹಿಸುವ ಸ್ವಚ್ಚತಾ ಸಿಬ್ಬಂದಿಗೆ ಕಳೆದ ಮೂರು ತಿಂಗಳಿನಿಂದ ವೇತನ ಕೈ ಸೇರಿಲ್ಲ. ಇದರಿಂದ ಜೀವನ ನಿರ್ವಹಣೆಯೇ ಕಷ್ಟಕರ ಎಂದು ಹಲವಾರು ಅಳಲು ತೋಡಿಕೊಂಡಿದ್ದಾರೆ.ಇನ್ನೂ, ಈ ವೇತನ ಸಮಸ್ಯೆಯಿಂದ ತಮ್ಮ ಮನೆಯಲ್ಲಿ ಎಷ್ಟೇ ಹಣಕಾಸಿನ ತೊಂದರೆ ಇದ್ದರು ಪ್ರತಿ ದಿನ ಕೆಲಸಕ್ಕೆ ಬರುತ್ತಿದ್ದಾರೆ. ಇಂದಿಲ್ಲಾ ನಾಳೆ, ವೇತನ ಬರಬಹುದೆಂಬ ನಿರೀಕ್ಷೆಯಲ್ಲಿ ಇದ್ದಾರೆ. ಆದರೆ, ವೇತನ ಮಂಜೂರಾಗುತ್ತಿಲ್ಲ. ಹಲವು ಮಂದಿ ಕೈಸಾಲ ಮಾಡಿ ಜೀವನ ನಡೆಸುತ್ತಿದ್ದಾರೆ. ಇದರಿಂದ ಹೊರಗೆ ಬರಲು ಹಲವು ಮಂದಿ ಕೆಲಸ ಬಿಟ್ಟು ಹೋಗಿದ್ದಾರೆ.ಇದು, ಕಾರ್ಮಿಕರ ಗೋಳಾಗಿದ್ದರೆ, ಕ್ಯಾಂಟಿನ್‌ಗಳಿಗೆ ದಿನಸಿ ಪದಾರ್ಥ ಹಾಗೂ ತರಕಾರಿ ಸರಬರಾಜು, ಪಾತ್ರೆ ಸ್ವಚ್ಛ ಮಾಡುವವರ ಗೋಳು ಹೇಳತೀರದು. ಇವರು ಕೂಡ ಚಾತಕ ಪಕ್ಷಿಯಂತೆ ಬಾಕಿ ವೇತನಕ್ಕಾಗಿ ಕಾಯುತ್ತಿದ್ದಾರೆ.
ಇಲ್ಲಿಗೆ ೧೦ ರೂ.ಗೆ ಊಟ, ೫ ರೂ.ಗೆ ತಿಂಡಿ ಸೇವಿಸಲು ಬರುವವರು ಬಡವರು. ಹೀಗಾಗಿ ಅವರಿಗೆ ತೊಂದರೆ ಆಗಬಾರದು ಎಂಬ ಕಳಕಳಿಯೂ ನಮಗಿದೆ. ಹೀಗಾಗಿಯೇ, ನಾವು ವೇತನ ಇಲ್ಲದಿದ್ದರೂ, ಕೆಲಸ ಮುಂದುವರೆಸಿದ್ದೇವೆ ಎಂದು ಸಿಬ್ಬಂದಿಯೊಬ್ಬರು ನುಡಿದರು.
ಒಟ್ಟಿನಲ್ಲಿ ರಾಜ್ಯ ಸರ್ಕಾರ ಜೂ.೧ ರಿಂದ ಬೆಂಗಳೂರಿನ ಇಂದಿರಾ ಕ್ಯಾಂಟಿನ್‌ಗಳಿಗೆ ಮರು ಜೀವ ನೀಡಲು ಮುಂದಾಗಿದೆ. ಇದರ ಜೊತೆಗೆ ಸಿಬ್ಬಂದಿಗಳ ಸಮಸ್ಯೆ ಬಗೆಹರಿಸಿದರೆ ಅಷ್ಟೇ ಸಾಕು ಎನ್ನುತ್ತಾರೆ ಕ್ಯಾಂಟಿನ್ ಸಿಬ್ಬಂದಿ.