ಇಂದಿರಾ ಕ್ಯಾಂಟಿನ್ ಲ್ಲಿ ಉಚಿತ ಊಟ

ಕೊಪ್ಪಳ ಮೇ 16 : ಕೊಪ್ಪಳ ಇಂದಿರಾ ಕ್ಯಾಂಟೀನ್ ನಲ್ಲಿ ಊಟ-ಉಪಹಾರ ಉಚಿತವಾಗಿ ನೀಡಲಾಗುತ್ತಿದೆ.
ರಾಜ್ಯದಲ್ಲಿ ಲಾಕ್‌ಡೌನ್ ನಿಮಿತ್ತ, ಕೊನೆಗೂ ರಾಜ್ಯ ಸರ್ಕಾರ ಇಂದಿರಾ ಕ್ಯಾಂಟಿನ್‌ನಲ್ಲಿ ರಾಜ್ಯಾದ್ಯಂತ ಉಚಿತವಾಗಿ ಜನರಿಗೆ ಊಟವನ್ನು ನೀಡಲು ಆದೇಶಿಸಿದ ಹಿನ್ನಲೆಯಲ್ಲಿ ಉಚಿತ ಊಟದ ವ್ಯವಸ್ಥೆ ಮಾಡಲಾಗಿದ್ದು ಕೊಪ್ಪಳದಲ್ಲಿ ಅಷ್ಟೊಂದು ಜನಸಾಂದ್ರತೆ ಕಾಣಸಿಗಲಿಲ್ಲ. ಕೇವಲ ಬೆರಣಿಕೆಯಷ್ಟು ಜನರು ಇಂದಿರಾ ಕ್ಯಾಂಟಿನ್ ಮುಂದೆ ಇದ್ದದ್ದು ಮಾತ್ರ ಗೋಚರಿಸಿತು. ನಗರ ಪ್ರದೇಶದಲ್ಲಿ ಮಾತ್ರ ಇಂದಿರಾ ಕ್ಯಾಂಟಿನ್ ಇದ್ದ ಪರಿಣಾಮವಾಗಿ, ಅಷೊಂದು ಜನರ ದಟ್ಟಣೆ ಇರದ ಕಾರಣ, ಕೊಂಚ ಬಿಕೋ ಎನ್ನುವಂತಿತ್ತು.