ಇಂದಿರಾ ಕ್ಯಾಂಟಿನ್ ಮೂಲ ಭೂತ ಸೌಲಭ್ಯ ಸಮಸ್ಯೆಗಳ ಅಗರ

ಕೋಲಾರ,ಆ.೬ ನಾಗರೀಕರಿಗೆ ಕಡಿಮೆ ದರದಲ್ಲಿ ಊಟ,ತಿಂಡಿ ಸಿಗಲಿದೆ ಎಂಬ ದೆಸೆಯಲ್ಲಿ ಸರ್ಕಾರವು ಇಂದಿರಾ ಕ್ಯಾಂಟಿನ್ ಅನುಷ್ಠಾನಕ್ಕೆ ತರಲಾಗಿದೆ, ಇದೊಂದು ಲಾಭ ರಹಿತವಾದ ಸಂಸ್ಥೆಯಾಗಿ ನಡೆಸಲು ಸರ್ಕಾರವು ಅನುದಾನಿತ ಕಡಿಮೆ ವೆಚ್ಚದ ಅಹಾರಗಳನ್ನು ಪೂರೈಕೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷದ ಸಿದ್ದರಾಮಯ್ಯ ಸರ್ಕಾರ ಆಡಳಿತಕ್ಕೆ ಬಂದ ನಂತರ ಕಳೆದ ೪ ತಿಂಗಳಿಂದ ನಗರದ ಹಳೇ ಬಸ್ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟಿನ್‌ಗೆ ಚಾಲನೆ ನೀಡಲಾಗಿದೆ.
ಕಳೆದ ಜೂನ್ ೧೨ ರಂದು ಸಿದ್ದರಾಮಯ್ಯ ನೇತ್ರತ್ವದಲ್ಲಿ ಗೃಹ ಕಚೇರಿ ಕೃಷ್ಣದಲ್ಲಿ ನಡೆದ ಸಭೆಯಲ್ಲಿ ಇಂದಿರಾ ಕ್ಯಾಂಟಿನ್ ವಿಚಾರವಾಗಿ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಸುದೀರ್ಘವಾದ ಚರ್ಚೆ ನಡೆಸಿ ಮಹಾನಗರ ಪಾಲಿಕೆ ಮತ್ತು ರಾಜ್ಯ ಸರ್ಕಾರದಿಂದ ಸಮಪಾಲಿನ ಅನುದಾನ ನೀಡಲು ನಿರ್ಧರಿಸಲಾಯಿತು, ಉಳಿದ ಕಡೆ ಸರ್ಕಾರದಿಂದ ಶೇ ೭೦ ರಷ್ಟು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಶೇ ೩೦ ರಷ್ಟು ಹೊಣೆಗಾರಿಕೆ ಭರಿಸಲು ಸೂಚಿಸಲಾಗಿದೆ, ಇದಕ್ಕೆ ಪೂರಕವಾಗಿ ಸ್ಥಳೀಯ ಸಂಸ್ಥೆಗಳು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಯಿತು.
ಹೊಸ ಟೆಂಡರ್, ಆಹಾರ ಶುದ್ಧತೆ, ಆಹಾರ ಗುಣಮಟ್ಟ ಪರಿಸರ ಸ್ವಚ್ಚತೆಗೆ ಅದ್ಯತೆ ನೀಡ ಬೇಕೆಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿ ಈ ವಿಷಯದಲ್ಲಿ ಯಾವುದೇ ರಾಜೀ ಮನೋಭಾವ ಬೇಡ ಎಂದು ಅಧಿಕಾರಿಗಳಿಗೆ ತಿಳಿಸಿಲಾಗಿದೆ. ಸಚಿವರು ಹಾಗೂ ಶಾಸಕರು ಅಗಾಗ್ಗೆ ಭೇಟಿ ನೀಡಲು ಆಹ್ವಾನಿಸ ಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ
ಸ್ಥಳೀಯ ಸಂಸ್ಥೆಗಳ ಕಾರ್ಮಿಕರು, ಕಾಲೇಜು ವಿದ್ಯಾರ್ಥಿಗಳು, ಕೊಲಿ ಕಾರ್ಮಿಕರು, ಬೀದಿ ವ್ಯಾಪಾರಿಗಳು ಹೆಚ್ಚಾಗಿ ಇರುವ ಕಡೆ ಇಂದಿರಾ ಕ್ಯಾಂಟಿನ್‌ಗಳು ಸ್ಥಾಪಿಸಲು ಸರ್ಕಾರ ಸ್ವಷ್ಟವಾಗಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ನಗರದಲ್ಲಿ ಇಂದಿರಾ ಕ್ಯಾಂಟಿನ್ ಅವ್ಯವಸ್ಥೆಗಳ ಅಗರ
ಅದರೆ ಕೋಲಾರದಲ್ಲಿ ಇವುಗಳನ್ನು ಗಾಳಿಗೆ ತೋರಲಾಗಿದೆ. ಇಂದಿರಾ ಕ್ಯಾಂಟಿನ್ ಅವರಣ ಸ್ವಚ್ಚತೆ, ನೀರು ಪೂರೈಕೆ, ಶೌಚಾಲಯ ಸುವ್ಯವಸ್ಥೆಗಳು ಮಾಡ ಬೇಕಾದ ನಗರ ಸಭೆ ಕೂಗಳೆತೆ ದೂರದಲ್ಲಿ ಇದ್ದರೂ ಸಹ ಇತ್ತ ಕಡೆ ತಲೆ ಹಾಕುತ್ತಿಲ್ಲ. ಬಡಜನತೆಯ ಪಾಲಿಗೆ ಫೈವ್ ಸ್ಟಾರ್ ಹೋಟೆಲ್ ಅಗಿರುವಂತ ಇಂದಿರಾ ಕ್ಯಾಂಟಿನ್‌ಗೆ ಕನಿಷ್ಟ ಕುಡಿಯುವ ನೀರು ಹಾಗೂ ಬಳಕೆಯ ನೀರು ಪೂರೈಕೆ ಮಾಡುತ್ತಿಲ್ಲ. ಶೌಚಾಲಯದಲ್ಲಿ ನೀರಿನ ವ್ಯವಸ್ಥೆಗಳಿಲ್ಲದೆ ಅವ್ಯವಸ್ಥೆ ಉಂಟಾಗಿದೆ. ಪ್ರತಿ ದಿನ ಕುಡಿಯುವ ನೀರಿಗಾಗಿ ೧೫ ಕ್ಯಾನ್‌ಗಳನ್ನು ಹಾಗೂ ಸಾರ್ವಜನಿಕರ ಬಳಕೆಗೆ ಟ್ಯಾಂಕರ್ ನೀರನ್ನು ಸಹ ಖರೀದಿಸ ಬೇಕಾದ ದುಸ್ಥಿತಿ ಉಂಟಾಗಿದೆ. ಕ್ಯಾಂಟಿನ್ ಅವರಣದಲ್ಲಿ ಸ್ವಚ್ಚತೆದೆ ರೋಗ ರುಜಿನುಗಳಿಗೆ ಆಹ್ವಾನ ನೀಡುವಂತಾಗಿದೆ.
ನಗರಸಭೆಯ ಪೌರಕಾರ್ಮಿಕರು ದಿನ ನಿತ್ಯ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಊಟಕ್ಕೆ ಇಂದಿರಾ ಕ್ಯಾಂಟಿನ್‌ಗೆ ಬರುತ್ತಾರೆ. ಹಳೆ ಬಸ್ ನಿಲ್ದಾಣದ ಬೀದಿಬದಿ ವ್ಯಾಪಾರಿಗಳು, ಕಾಲೇಜು ವಿದ್ಯಾರ್ಥಿಗಳು, ಬಡಕೊಲಿ ಕಾರ್ಮೀಕರು ಇಂದಿರಾ ಕ್ಯಾಂಟಿನ್‌ಗೆ ಅಗಮಿಸುತ್ತಾರೆ. ಅಲ್ಲದೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಕಾರ್ಯಕ್ರಮಗಳಿಗೆ ಊಟ ತಿಂಡಿ ಪೂರೈಕೆಯ ವ್ಯವಸ್ಥೆಗಳಿಗೆ ಬಹುತೇಕ ಇಂದಿರಾ ಕ್ಯಾಂಟಿನ್‌ಗೆ ಆದೇಶ ನೀಡಲಾಗುತ್ತಿದ್ದರೂ ಸಹ ಇಲ್ಲಿನ ಅವ್ಯವಸ್ಥೆಗಳನ್ನು ಹಾಗೂ ಸಮಸ್ಯೆಗಳನ್ನು ಮಾತ್ರ ಪರಿಹರಿಸಲು ಯಾರೂ ಮುಂದಾಗುತ್ತಿಲ್ಲ. ಸಂಬಂಧ ಪಟ್ಟ ಅಧಿಕಾರಿಗಳಿಗೆ ಅನೇಕ ಬಾರಿ ದೂರಿದರೂ ಸಹ ಪ್ರಯೋಜನವಿಲ್ಲವಾಗಿದೆ ಎಂಬುವುದು ಕ್ಯಾಂಟಿನ್ ಸಿಬ್ಬಂದಿಗಳ ಆಳಲು ಅಗಿದೆ, ಕೆಲವು ಸಿಬ್ಬಂದಿಗಳಿಗೆ ಟೆಂಡರ್‌ದಾರ ಬೆಂಗಳೂರಿನ ಶಿವಕುಮಾರ್ ೫ ತಿಂಗಳ ವೇತನ ಬಾಕಿ ಇರಿಸಿ ಕೊಂಡಿದ್ದಾರೆ ಎನ್ನಲಾಗಿದೆ. ಸ್ಥಳೀಯವಾಗಿ ಕ್ಯಾಂಟಿನ್ ವ್ಯವಸ್ಥಾಪಕರಾಗಿ ನಸ್ಸೀರ್ ಎಂಬುವರು ವಹಿಸಿ ಕೊಂಡಿದ್ದು ಅಸಹಾಯಕತೆಯನ್ನು ವ್ಯಕ್ತ ಪಡೆಸುತ್ತಾರೆ.
ಇಂದಿರಾ ಕ್ಯಾಂಟಿನ್ ಮೆನು ಪ್ರಕಾರವೇ, ಬೆಳಗ್ಗೆ ತಿಂಡಿಗಳನ್ನು ಮಧ್ಯಾಹ್ನ ಊಟ ಮತ್ತು ರಾತ್ರಿ ಊಟ ಸಿದ್ದಪಡೆಸಿ ಸಾರ್ವಜನಿಕರಿಗೆ ನಿಗಧಿ ಪಡೆಸಿದ ದರಗಳಲ್ಲಿಯೇ ನೀಡಲಾಗುತ್ತಿದೆ. ಇದರಲ್ಲಿ ಯಾವೂದೇ ಲೋಪಗಳಿಲ್ಲ ಅದರೆ ಮೂಲ ಭೂತ ಸೌಲಭ್ಯಗಳಿಂದ ಸಾರ್ವಜನಿಕರು ವಂಚಿತರಾಗಿದ್ದಾರೆ. ರಾತ್ರಿ ಊಟಕ್ಕೆ ಕಡಿಮೆ ಜನ ಬರುತ್ತಾರೆ ಅದರೆ ಬೆಳಿಗ್ಗೆ ಮತ್ತು ಮಧ್ಯಾಹ್ನದ ವೇಳೆ ಹೆಚ್ಚಿನ ಜನರು ಬರುತ್ತಾರೆಂದು ಕ್ಯಾಂಟಿನ್ ಸಿಬ್ಬಂದಿಗಳು ತಿಳಿಸುತ್ತಾರೆ.
ಈ ಸಂಬಂಧವಾಗಿ ಬಡವರ ಫೈವ್ ಸ್ಟಾರ್ ಹೋಟೆಲ್ ಇಂದಿರಾ ಕ್ಯಾಂಟಿನ್‌ಗೆ ಒಮ್ಮೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ, ಸಂಬಂಧ ಪಟ್ಟ ಅಧಿಕಾರಿಗಳ ನಿರ್ಲಕ್ಷತೆಯನ್ನು ವೀಕ್ಷಿಸುವ ಮೂಲಕ ಸಾರ್ವಜನಿಕರಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳ ಬೇಕೆಂಬುವುದು ಸಾರ್ವಜನಿಕರ ಮನವಿಯಾಗಿದೆ