ಇಂದಿರಾ ಕ್ಯಾಂಟಿನ್ ಪ್ರಾರಂಭಿಸಲು ಜೈಕನ್ನಡಿಗರ ಸೇನೆ ಆಗ್ರಹ

ಕಲಬುರಗಿ,ಫೆ.24- ನಗರದ ಎಲ್ಲಾ ಇಂದಿರಾ ಕ್ಯಾಂಟಿನಗಳನ್ನು ಪುನಃ ಆರಂಭಿಸುವಂತೆ ಜೈ ಕನ್ನಡಿಗರ ಸೇನೆ ಪ್ರತಿಭಟನೆ ಕೈಗೊಂಡು ಸರ್ಕಾರಕ್ಕೆ ಒತ್ತಾಯಿಸಿದೆ.
ಜೈ ಕನ್ನಡಿಗರ ಸೇನೆ ಕಲಬುರಗಿ ಘಟಕದ ನೆತೃತ್ವದಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದರು ಪ್ರತಿಭಟನೆ ಕೈಗೊಂಡು ಜಿಲ್ಲಾಡಳಿತದ ಮುಖಾಂತರ ಮುಖ್ಯಮಂತ್ರಿಗಳಿಗೆ ಬೇಡಿಕೆಯ ಮನವಿ ಪತ್ರ ಸಲ್ಲಿಸಲಾಯಿತು.
ರಾಜ್ಯ ಸೇರಿದಂತೆ ಕಲಬುರಗಿ ನಗರದಲ್ಲಿ ಸುಮಾರು ಕಡೆ ಈ ಹಿಂದೆ ಇಂದಿರಾ ಕ್ಯಾಂಟಿನಗಳು ಆರಂಭಗೊಂಡಿದ್ದು, ಬಡವರ ಪಾಲಿಗೆ ಪ್ರಸಾದ ಕೇಂದ್ರಗಳಾಗಿದ್ದವು, ಆದರೆ ಕಳೆದ ಸುಮಾರು 5-6 ವರ್ಷಗಳಿಂದ ಈ ಕ್ಯಾಂಟಿಗಳು ಸ್ಥಗಿತಗೊಂಡಿವೆ.
ಕÀಲಬುರಗಿ ನಗರದ ಗಂಜ ಪ್ರದೇಶದಲ್ಲಿ ರೈಲ್ವೆ ನಿಲ್ದಾಣದ ಬಳಿ, ಕೇಂದ್ರ ಬಸ್ ನಿಲ್ದಾಣದ ಬಳಿ, ಜಿಲ್ಲಾ ಸರಕಾರಿ ಆಸ್ಪತ್ರೆ ಬಳಿ ಇನ್ನಿತರ ಬೇರೆ ಕಡೆಯಿಂದ ಹಳ್ಳಿಗಳಿಂದ ಬರುವ ಬಡ ಸಾರ್ವಜನಿಕರಿಗೆ ಈ ಕ್ಯಾಂಟಿನ್ ಗಳು ತುಂಬಾ ತೊಂದರೆಯಾಗುತ್ತಿದೆ. ಅಲ್ಲದೆ, ಈ ಹಿಂದೆ ನೀಡಿರುವ ಟೆಂಡರನ್ನು ರದ್ದುಗೊಳಿಸಿ ಹೊಸ ಟೆಂಡರನ್ನು ಕರೆದು ಈ ಕ್ಯಾಂಟೀನ ಸರಿಯಾಗಿ ನಡಿಸಿಕೊಂಡು ಹೋಗುವವರಿಗೆ ನೀಡುವ ಮೂಲಕ ಬಡವರಿಗೆ ನೆರವಾಗಬೇಕು ಎಂದು ಸೇನೆ ಅಧ್ಯಕ್ಷ ದತ್ತು ಎಚ್.ಭಾಸಗಿ ಅವರು ಮನವಿ ಮಾಡಿದ್ದಾರೆ.
ರÉೈತರಿಗೆ, ಗ್ರಾಮೀಣ ನಗರ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.