ಇಂದಿರಾ ಕ್ಯಾಂಟಿನ್ ಅಕ್ರಮ ಬಯಲಿಗೆ ಎಳೆದ ತಹಶೀಲ್ದಾರ್

ದಾವಣಗೆರೆ.ಮೇ.30 : ನಗರದ ಹೈಸ್ಕೂಲ್ ಮೈದಾನದಲ್ಲಿರುವ ಇಂದೀರಾ ಕ್ಯಾಂಟಿನ್ ಮೇಲೆ ತಹಶೀಲ್ದಾರ್ ಗಿರೀಶ್  ದಾಳಿ ನಡೆಸಿದ್ದಾರೆ.
ದಾವಣಗೆರೆಯ ಹೈಸ್ಕೂಲ್ ಮೈದಾನದ ಇಂದಿರಾ ಕ್ಯಾಂಟೀನ್ ನಲ್ಲಿಸುಳ್ಳುದಾಖಲೆ ಸೃಷ್ಠಿಸಿ ಸರ್ಕಾರಕ್ಕೆ ವಂಚಿಸಲು ಯತ್ನ ನಡೆಸಲಾಗಿತ್ತು ಈ ಅಕ್ರಮ ಅವ್ಯವಹಾರವನ್ನು   ತಹಶೀಲ್ದಾರ್ ಪತ್ತೆ ಹಚ್ಚಿದ್ದಾರೆ.ಜನರು ಊಟ  ಮಾಡದಿದ್ದರು ಸುಳ್ಳು ಹೆಸರು ಹಾಗೂ ಲೆಕ್ಕ ಸೃಷ್ಟಿಸಲಾಗಿದೆ ದಿನಕ್ಕೆ 500 ಮಂದಿ ಮೇಲ್ಪಟ್ಟು  ಊಟ ಮಾಡಿದ ಲೆಕ್ಕವನ್ನು ಇಂದೀರಾ ಕ್ಯಾಂಟಿನ್ ಉಸ್ತುವಾರಿ ವಹಿಸಿದ್ದವರು ತೊರಿಸಿದ್ದಾರೆ.ಈ ವೇಳೆ ಸುಳ್ಳು ಮಾಹಿತಿ ನೀಡಿರುವುದು ಬೆಳಕಿಗೆ ಬಂದಿದೆ. ಈ ವೇಳೆತಹಶೀಲ್ದಾರ್ ಗೀರಿಶ್  ಕ್ಯಾಂಟಿನ್ ಉಸ್ತುವಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.