ಇಂದಿರಾ ಕ್ಯಾಂಟಿನಲ್ಲಿ ಉಚಿತ ಊಟದ ವ್ಯವಸ್ಥೆ

ಜಗಳೂರು.ಮೇ.೨೦; ಕೋವಿಡ್ -19 ಎರಡನೇ ಅಲೆಯ ನಿಯಂತ್ರಣಕ್ಕಾಗಿ ಸರ್ಕಾರ ಲಾಕ್ ಡೌನ್ ಎಂಬ ಅಸ್ತ್ರವನ್ನು ಪ್ರಯೋಗ ಮಾಡಿದ ಬೆನ್ನಲ್ಲೇ ಹೋಟೆಲ್ ಗಳು ಬಾಗಿಲು ಮುಚ್ಚಿವೆ ತೆಗೆದಿರುವ ಕೆಲವು ಹೋಟೆಲ್ ಮಾತ್ರ ಸೀಮಿತ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತದೆ ಈ ಸಂಕಷ್ಟದಲ್ಲಿ ಹಲವು ಜನರು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಒಂದಲ್ಲಒಂದು ಸಮಸ್ಯೆಗಳಿಗೆ ಸಿಲುಕಿದ್ದು ಊಟ ತಿಂಡಿಗೂ ಪರದಾಡುತ್ತಿದ್ದಾರೆ. ಸರ್ಕಾರ ಮೇ 24 ರ ವರೆಗೆ ಲಾಕ್ ಡೌನ್ ಹೇರಿರುವ ಹಿನ್ನೆಲೆಯಲ್ಲಿ ಆಹಾರ ಸಿಗದೆ ಹಸಿದವರ ಹಸಿವು ನೀಗಿಸಲು ರಾಜ್ಯ ಮೇ 11 ರಿಂದ  ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ನಲ್ಲಿ   ಪ್ರತಿನಿತ್ಯ ಉಚಿತವಾಗಿ ಬಡವರಿಗೆ ಪೌರಕಾರ್ಮಿಕರಿಗೆ ಕೂಲಿಕಾರ್ಮಿಕರಿಗೆ ಕಟ್ಟಡ ಕಾರ್ಮಿಕರಿಗೆ ನಿರ್ಗತಿಕರಿಗೆ ಉಪಹಾರ ಹಾಗೂ ಮಧ್ಯಾಹ್ನ ರಾತ್ರಿ ಊಟವನ್ನು ಉಚಿತವಾಗಿ ನೀಡಲು ಪೌರಾಡಳಿತ ನಿರ್ದೇಶಕರಿಗೆ ಸರ್ಕಾರ ಆದೇಶ ಜಾರಿ ಮಾಡಿದ್ದು ಹಿಂದೆ ತಿಂಡಿಗೆ 5 ಊಟಕ್ಕೆ10ರೂಪಾಯಿ ಪಾವತಿಸಬೇಕಾಗಿತ್ತು ಆದರೆ ಈಗ ಸರ್ಕಾರದ ಆದೇಶದಂತೆ ಇಂದಿರಾ ಕ್ಯಾಂಟೀನ್ ನಲ್ಲಿ ವಾರದ 7 ದಿನಗಳು ಮೆನು ಪಟ್ಟಿಯಲ್ಲಿ ನಮೂದಿಸಿರುವ ಅಹಾರಗಳನ್ನು 3  ಹೊತ್ತು ಉಚಿತವಾಗಿ  ನೀಡಲಾಗುತ್ತದೆ.ಈ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯತಿ ವತಿಯಿಂದ ಪಟ್ಟಣದಲ್ಲಿರುವ ಇಂದಿರಾ ಕ್ಯಾಂಟೀನ್ನಲ್ಲಿ ಉಚಿತವಾಗಿ ಮುಂಜಾನೆ ಉಪಹಾರ ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆಯನ್ನು ಮಾಡಲಾಗಿದ್ದು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಪ್ರತಿನಿತ್ಯ ಇಂದಿರಾ ಕ್ಯಾಂಟೀನ್ ಭೇಟಿ ನೀಡಿ ಆಹಾರದ ಗುಣಮಟ್ಟವನ್ನು ಪರೀಕ್ಷಿಸುತ್ತಿದ್ದಾರೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನರು ಇದರ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಉಚಿತವಾಗಿ ಊಟವನ್ನು ಮಾಡುತ್ತಿದ್ದಾರೆ ಎಂದು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ರಾಜು ಡಿ ಬಣಕಾರ್ ತಿಳಿಸಿದರು.