ಇಂದಿರಾ,ಪಟೇಲ್ ಗೆ ನಮನ

ಕಲಬುರಗಿ ;ಅ.31: ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ದೇಶಕಂಡ ಅಪ್ರತಿಮ ಧೀಮಂತ ನಾಯಕಿ ಹಾಗೂ ಏಕೈಕ ಮಹಿಳಾ ಮಾಜಿ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆ ಹಾಗೂ ದೇಶದ ಏಕೀಕರಣದ ಪಿತಾಮಹರಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿ ಅಂಗವಾಗಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಅಶೋಕ ವೀರನಾಯಕ ಅವರು ಪುಷ್ಟಾರ್ಚನೆ ಮಾಡುವ ಮೂಲಕ ಗೌರವಪೂರ್ವಕ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಿವಾನಂದ ಹೊನಗುಂಟಿ, ಈರಣ್ಣಾ ಝಳಕಿ, ಧರ್ಮರಾಜ, ಅಶೋಕ ಘೂಳಿ, ಶಿವು ಚೂರಿ, ದೇವು ರಾಜಾಪೂರ, ಮಲ್ಲು ಬಿರಾದಾರ ಸೇರಿದಂತೆ ಅನೇಕ ಕಾಂಗ್ರೆಸ್ ಯುವ ಮುಖಂಡರು ಭಾಗವಹಿಸಿದ್ದರು