ಇಂದಿರಾನಗರ ಶಾಲೆಯಲ್ಲಿಉಚಿತ ಆರೋಗ್ಯ ತಪಾಸಣೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಫೆ.13. ನಗರದ 35ನೇ ವಾರ್ಡಿನ ಇಂದಿರಾನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ  ಉಚಿತ ಆರೋಗ್ಯ ತಪಾಸಣೆ ಮತ್ತು   ಆರೋಗ್ಯ ಅರಿವು ಕಾರ್ಯಕ್ರಮ ಇಂದು ಹಮ್ಮಿಕೊಂಡಿತ್ತು.
ಮಹಾನಗರ ಪಾಲಿಕೆ ಸದಸ್ಯ ವಿ. ಶ್ರೀನಿವಾಸುಲು ಮಿಂಚು ಕಾರ್ಯಕ್ರಮದಲ್ಲಿ ಮಾತನಾಡಿ,     ಜನರ ಹಿತ ದೃಷ್ಟಿಯಿಂದ ಪ್ರತಿ ಇಲಾಖೆಯಿಂದ ಈ ರೀತಿ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಏರ್ಪಡಿಸಿದರೆ ಬಡ ಜನರಿಗೆ ಅನುಕೂಲವಾಗಲಿದೆಂದು  ಹೇಳಿದರು
ಕೊಳಗೇರಿ  ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರ ವಿ. ತಿಮ್ಮಣ್ಣ ಹಾಗೂ ಪ್ರಕಾಶ್, ಶಾಲೆಯ ಮುಖ್ಯೋಪಾಧ್ಯಾಯಿನಿ ಹನುಮಕ್ಕ,ದೈಹಿಕ ಶಿಕ್ಷಕಿ ಮಲ್ಲಿಕಾ ಬೇಗಂ, ಎಸ್ ಡಿ ಎಂ ಸಿ ಅಧ್ಯಕ್ಷ ಮಾರುತಿ, ವೈದ್ಯರಾದ ಮಂಜುನಾಥ ಮತ್ತು  ಸಂಗೀತಾ,  ಸ್ಥಳೀಯರಾದ ರಮೇಶ್,ಹಂಪಿ ಮಲ್ಲಿ,ಶಶಿಕುಮಾರ್,ನಾಗರಾಜ್ ಮೊದಲಾದವರು ಉಪಸ್ಥಿತರಿದ್ದರು.
ಅನೇಕ ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.