ಇಂದಿರಾಗಾಂಧಿ ಹೊಸ ಭಾರತಕ್ಕೆ ಅಡಿಗಲ್ಲು ಹಾಕಿದ್ದರು

ನರೇಗಲ್ಲ,ನ.20: ಇಂದಿರಾ ಗಾಂಧಿ ಹೊಸ ಭಾರತಕ್ಕೆ ಅಡಿಗಲ್ಲು ಹಾಕಿದವರು. ದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ಇಂದಿರಾ ಗಾಂಧಿ ಜಾಣ್ಮೆಯಿಂದ ಹೊಸತನದ ಭಾರತಕ್ಕೆ ಅಡಿಗಲ್ಲು ಹಾಕಿದವರು. ಎ0ದು ಡಾ. ಆರ್ ಬಿ ಬಸವರಡ್ಡೇರ ಅಭಿಪ್ರಾಯಪಟ್ಟರು.
ಸಮೀಪದ ಅಬ್ಬಿಗೇರಿ ಗ್ರಾಮದ ಕಾಂಗ್ರೆಸ್ ಕಮಿಟಿ ವತಿಯಿಂದ ಇಲ್ಲಿನ ವಿರುಪಾಕ್ಷೇಶ್ವರ ದೇವಸ್ಥಾನದಲ್ಲಿ ನಡೆದ ಭಾರತದ ಉಕ್ಕಿನ ಮಹಿಳೆ ಇಂದಿರಾ ಗಾಂಧಿಯವರ 107ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಸಿರು ಕ್ರಾಂತಿ, ಖಾಸಗಿ ಬ್ಯಾಂಕುಗಳ ರಾಷ್ಟ್ರೀಕರಣ, ಶಿಮ್ಲಾ ಒಪ್ಪಂದ, ಬಾಂಗ್ಲಾ ವಿಮೋಚನೆ, ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸುವ ಅವರ ದೂರದೃಷ್ಟಿಯ ಆಲೋಚನೆ, ವಿದೇಶಿ ನೀತಿಗಳು ಅವರ ಚಾಣಾಕ್ಷ ರಾಜಕಾರಣಕ್ಕೆ ಸಾಕ್ಷಿಯಾಗಿವೆ ಎಂದು ಡಾ. ಬಸವರಡ್ಡೇರ ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗುರುನಾಥ ಅವರಡ್ಡಿ ಮಾತನಾಡಿದರು. ಈ ಸಂದರ್ಭದಲ್ಲಿ ಎಮ್ ಡಿ ಬಸವರಡ್ಡೇರ, ಎಂ ಎಸ್ ಕಂಬಳಿ, ಬಸವರಾಜ ತಳವಾರ, ಶಿವಣ್ಣ ಗುಗ್ಗರಿ, ಶಂಭು ಶಾಸ್ತ್ರಿ ಮಾಳಶೆಟ್ಟಿ. ಚನ್ನಬಸು ಹೂಗಾರ. ಬಾಬು ಬನ್ನಿಕೊಪ್ಪ, ರವಿ ಅಡ್ನೂರ, ಸಂಗಪ್ಪ ಉಪಾದ್ಯ . ಸುರೇಶ ಕಟ್ಟಿಮನಿ. ಎ ಕೆ ಮಳಗಿ, ಮಂಜು ಚಿತ್ತರಗಿ, ಮಂಜು ಪಸಾರದ. ಮಂಜು ಗುಜಮಾಗಡಿ. ಎಚ್ ಟಿ ದ್ವಾಸಲ. ಶಿವಪುತ್ರ ಕೆಂಗಾರ . ಲಕ್ಷ್ಮಣ ಹಿರೇಮನಿ, ಸೋಮು ವಡವಿ. ಸಂತೋಷ ಕಲ್ಲೇಶ್ಯಾಣಿ. ಶರಣು ಭೋಪಳಾಪೂರ. ಚಿಕ್ಕು ವಗ್ಗರ , ಶಂಕ್ರಪ್ಪ ಹೊಂಬಳ್ಳಿ . ಮುತ್ತಪ್ಪ ಕೆಂಗಾರ. ಸಿದ್ದು ಹನುಮನಾಳ, ಸೋಮು ಶಿರೋಳ, ಮಲ್ಲು ಯಲ್ಲರಡ್ಡಿ ಅಂದಪ್ಪ ಹಲಕುರ್ಕಿ, ಮುಂತಾದವರು ಉಪಸ್ಥಿತರಿದ್ದರು. ಬಸವರಾಜ ಪಲ್ಲೇದ ಕಾರ್ಯಕ್ರಮ ರೂಪಿಸಿದರು. ದುರುಗೇಶ ಬಂಡಿವಡ್ಡರ ವಂದಿಸಿದರು.