ಇಂದಿರಾಗಾಂಧಿ ಆಡಳಿತ ಅವಧಿ ಸುವರ್ಣಯುಗ-ಹರಿಪ್ರಸಾದ

ಹುಬ್ಬಳ್ಳಿ, ನ 20-ಸತತ 17 ವರ್ಷಗಳ ಕಾಲ ಒಬ್ಬ ಪ್ರಭುತ್ವ ವಿಶ್ವನೇತಾರೆಯಾಗಿ ಭಾರತವನ್ನು ಸರ್ವ ರಂಗಗಳಲ್ಲಿ ಜಾಗೃತಗೊಳಿಸಿ ವಿಶ್ವದಲ್ಲೇ ಭಾರತ ಸಮರೋಪಾದಿಯಲ್ಲಿ ದಾಪುಗಾಲು ಹಾಕಲು ಕಾರಣಿಭೂತರಾದವರು ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಎಂದು ರಾಜ್ಯಸಭಾ ಮಾಜಿ ಸದಸ್ಯ ಬಿ. ಕೆ. ಹರಿಪ್ರಸಾದ ಹೇಳಿದರು.

ನಗರದ ಹಳೇ ಹುಬ್ಬಳ್ಳಿಯ ಎಸ್.ಎಂ. ಕೃಷ್ಣ ನಗರದಲ್ಲಿ ಉತ್ತರ ಕರ್ನಾಟಕ ಇಂದಿರಾಗಾಂಧಿ ಅಭಿಮಾನಿಗಳ ವೇದಿಕೆ ಹಮ್ಮಿಕೊಂಡಿದ್ದ ಇಂದಿರಾಗಾಂಧಿಯವರ 103 ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.

ಇಂದಿರಾ ಗಾಂಧಿ ಅವರ ಆಡಳಿತ ಅವಧಿ ಸುವರ್ಣಯುಗ. ಎಲ್ಲ ಸ್ಥಳಗಳಲ್ಲಿಯೂ ಅವರು ಮಾಡಿದ ಸುಧಾರಣೆಗಳು ಅಮೋಘವಾಗಿವೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಕ್ಷೇತ್ರಗಳಲ್ಲಿ ಅಪಾರ ಸುಧಾರಣೆಗಳನ್ನು ತಂದು ಮಾದರಿ ಕಾರ್ಯಗಳನ್ನು ಮಾಡಿದ್ದಾರೆ ಎಂದು ಬಣ್ಣಿಸಿದರು.

ಪಾಲಿಕೆಯ ಹಿರಿಯ ಮಾಜಿ ಸದಸ್ಯ ಹಾಗೂ ಹುಬ್ಬಳ್ಳಿಯ ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಅಲ್ತಾಫನವಾಜ್ ಕಿತ್ತೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಇಂದಿರಾಗಾಂಧಿ ಅಭಿಮಾನಿಗಳ ವೇದಿಕೆ ಅಧ್ಯಕ್ಷೆ ತಾರಾದೇವಿ ವಾಲಿ, ಪಾಲಿಕೆ ಮಾಜಿ ಸದಸ್ಯ ದಶರಥ ವಾಲಿ, ವಿಜನಗೌಡ ಪಾಟೀಲ, ಅಕ್ಕಮ್ಮ ಕಂಬಳಿ, ಸಲ್ಮಾ ಮುಲ್ಲಾ, ಗಂಗಾಧರ ದೊಡ್ಡವಾಡ, ರಜತ್ ಉಳ್ಳಾಗಡ್ಡಿಮಠ, ಮಂಜುನಾಥ ಉಪ್ಪಾರ, ಅಜರ್ ಮನಿಯಾರ, ಪುಷ್ಪಾಂಜಲಿ ಅರಳಿಕಟ್ಟಿ, ಶ್ರೇಯಾ ರೋಶನ್, ಶಾಬೀರಾ ನದಾಫ, ವಿಜಯಲಕ್ಷ್ಮಿ ಪಾಟೀಲ, ಗಂಗಾ ಗಸ್ತಿ, ಹೊಂಗೆಮ್ಮ ದೊಡ್ಡಮನಿ, ಬಾಳಮ್ಮ ಜಂಗನವರ, ದೇವೇಂದ್ರ ಇಟಗಿ ಮುಂತಾದವರು ಉಪಸ್ಥಿತರಿದ್ದರು. ರಾಜೇಶ್ವರಿ ಬಿಲಾನಾ ಸ್ವಾಗತಿಸಿದರು. ಕೊನೆಯಲ್ಲಿ ಗಂಗಾಧರ ದೊಡ್ಡವಾಡ ವಂದಿಸಿದರು.