
ವಿಜಯಪುರ, ಜು.31-ನಗರದ ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯ ಸ್ನಾತಕೋತ್ತರ ವಾಣಿಜ್ಯ ವಿಭಾಗವು ಹಮ್ಮಿಕೊಂಡಿದ್ದ ‘ಪೇಸ್ಟೋ-ಕಾಂ-2ಕೆ22’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿ ಜೀವನ ಬಂಗಾದ ಜೀವನ ಎಂದು ಹೇಳುವ ದಿನ ಈಗ ಇಲ್ಲ. ಇಗೇನಿದ್ದರೂ ವಿದ್ಯಾರ್ಥಿ ಜೀವನ ಸ್ಪರ್ಧಾತ್ಮಕ ಜೀವನ ಬರುವ ಎಲ್ಲ ಸವಾಲುಗಳನ್ನು ಎದುರಿಸಬೇಕು. ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವ್ಯವಸ್ಥಾಪನೆ ವಿಭಾಗದ ಮುಖ್ಯಸ್ಥರಾದ ಪ್ರೊ.ಮಲ್ಲಿಕಾರ್ಜುನ ಎನ್.ಎಲ್. ಹೇಳಿದರು.
ಎಮ್.ಕಾಂ ವಿಭಾಗದ ಮುಖ್ಯಸ್ಥರಾದ ಪ್ರೋ.ಕೆ.ಆಯ್ ಹಿರೇಮಠ ಮಾತನಾಡಿ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೊರಹಾಕುವ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದೇ ಮುಖ್ಯವಾಗಿದೆ. ಹೊರತು ಸೋಲು-ಗೆಲವು ಮುಖ್ಯವಲ್ಲ. ಪ್ರತಿಭೆಗೆ ಸೂಕ್ತ ವೇದಿಕೆ ಒದಗಿಸುವುದು ಅವಶ್ಯ ಎಂದರು.
ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯರಾದ ಪ್ರೊ.ಎಸ್.ಜಿ.ರೂಡಗಿ ಮಾತನಾಡಿ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಮೂಲಕ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸುವ ಇಂತಹ ಕಾರ್ಯಕ್ರಮಗಳನ್ನು ಪ್ರತಿವರ್ಷ ಹಮ್ಮಿಕೊಳ್ಳಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ರಸಪ್ರಶ್ನೆ, ಉತ್ತಮ ವ್ಯವಸ್ಥಾಪಕ, ನೃತ್ಯ ಸ್ಪರ್ಧೇಗಳನ್ನು ಹಾಗೂ ವಿವಿಧ ಸ್ಪರ್ಧೇಗಳನ್ನು ಆಯೋಜಿಸಲಾಗಿದ್ದು ಮತ್ತು ವಿವಿಧ ಕಾಲೇಜುಗಳಿಂದ ಸುಮಾರು 300 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಅರ್ಪೂವ ಕುಲಕರ್ಣಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪ್ರೊ.ಅನ್ನಪೂರ್ಣ ತುಪ್ಪದ ಸ್ವಾಗತಿಸಿದರು. ಕುಮಾರಿ. ಶ್ವೇತಾ ಜೈನ ನಿರೂಪಿಸಿದರು. ಪ್ರೊ.ಐ.ಬಿ.ಜಾಬಾ ವಂದಿಸಿದರು.