
ಬೀದರಃಮೆ.5: ಇಂದಿನ ವೈಜ್ಞಾನಿಕ ವಿದ್ಯಾಮನಾಗಳು ಒಂದುಗೂಡಿಸುವ ಕೆಲಸ ಮಾಡಬೇಕು. ಜೀವನ ಧರ್ಮ, ಅಥರ್À ಮಾಡಿಕೊಂಡು ಸಮಜದಲ್ಲಿ ಒಂದಾಗಿ ಬದುಕುವಂತಾಗಬೇಕು, ಭಾಷೆ ಬೇರೆ ಬೇರೆಯಾದರೂ ತತ್ವ ಒಂದಾಗಿರಬೇಕು. ಡಾನ್ ಬಾಸ್ಕೋ ಸೂಸೈಯಿಟಿ ನಿರ್ದೆಶಕರಾದ ಶ್ರೀ ಜೇಮ್ಸ್ ಪಾಲ್ ಅವರು ನುಡಿದರು.
ಅವರು ಇಂದು ದಿ. 5-5-2023 ರಂದು ಡಾನ್ ಬಾಸ್ಕೊ ಕೈಗಾರಿಕಾ ತರಬೇತಿ ಸಂಸ್ಥೆ ಚಿಕ್ಕಪೇಟನಲ್ಲಿ ಬೀದರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ 109ನೇ ಸಂಸ್ಥಾಪನಾ ದಿನಾಚನೆಯ ಕಾರ್ಯಕ್ರಮದ ಉದ್ಘಾಟನೆಯನ್ನು ನೇರವೇರಿಸಿ ಮಾತನಾಡಿದರು.
ಉಪನ್ಯಾಸಕರಾಗಿ ಆಗಮಿಸಿದ ಸಾಹಿತಿಗಳಾದ ಶ್ರೀಮತಿ ಪಾರ್ವತಿ ವಿ. ಸೋನಾರೆ ಅವರು ಮಾತನಾಡಿ ಇಂದು ನಾವು ಪರಭಾಷೆಯ ವ್ಯಾಮೋಹಕ್ಕೆ ಒಳಗಾಗಿದ್ದೇವೆ, ಕನ್ನಡದಲ್ಲಿ ಬಳಸುವ ಎಷ್ಟೋ ಪದಗಳು ಮಾಯವಾಗುತ್ತಿವೆ. ಕೇವಲ ಪ್ರತಿಷ್ಠೆಗಾಗಿ ಪgಭಾಷೆಗೆ ಮಾರುಹೋಗಿದ್ದೇವೆ. ಕನ್ನಡ ಭಾಷೆ ಉಳಿಸಬೇಕಾದರೆ ಸಾಹಿತಿ ಆಗಬೇಕಾಗಿಲ್ಲ, ಪುಸ್ತಕ ಬರೆಯಬೇಕಾಗಿಲ್ಲ, ದಿನಿತ್ಯದ ಬದುಕಿನಲ್ಲಿ ಕನ್ನಡ ಭಾಷೆ ಬಳಸಬೇಕು ಎಂದು ಕನ್ನಡ ಅಸ್ಮೀತೆ-ಕನ್ನಡ ಸಾಹಿತ್ಯ ಪರಿಷತ್ತು ಕುರಿತು ಮಾತನಾಡಿದರು.
ವಿಶ್ವೇಶ್ವರಯ್ಯನವರು ದಿವಾನರಾಗಿದ್ದ ಸಂದರ್ಭದಲ್ಲಿ ಈ ನಾಡು ಸಮೃದ್ಧಿಯಾಗಿ ಮಾಡಲು ಕನ್ನಡ ಅಕಾಡೆಮಿ ಮೈಸುರು ವಿವಿ ಸ್ಥಾಪನೆ ಮಾಡಿದರು. ಕನ್ನಡ ಸಾಹಿತ್ಯ ಕೃಷಿಗೆ ಆದ್ಯತೆ, ಕನ್ನಡ ಮಾತಾಡುವ ಪ್ರದೇಶಗಳಲ್ಲಿ ಗ್ರಂಥಾಲಯ ಸ್ಥಾಪಿಸುವುದು, ಸಮ್ಮೇಳನ, ಕವಿಗೋಷ್ಠಿ, ಪುಸ್ತಕ ಪ್ರಕಟಣೆ, ದತ್ತಿ ಕಾರ್ಯಕ್ರಮ, ಮನೆ ಮನೆಗೂ ಕನ್ನಡ ದೀಪ ಹೀಗೆ ಹತ್ತು-ಹಲವಾರು ಕಾರ್ಯಕ್ರಮಗಳು ಇಂದು ಕೇಂದ್ರ, ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತುಗಳು ನಡೆಸಿಕೊಂಡು ಬರುತ್ತಿವೆ ಎಂದರು.
ಡಾನ್ ಬಾಸ್ಕೋ ಸೂಸೈಟಿಯ ಆಡಳಿತ ಅಧಿಕಾರಿಗಳಾದ ಶ್ರೀ ಬಿಬಿನ್ ಜೋಷ್ ಮುಖ್ಯಅತಿಥಿಗಳಾಗಿ ಆಗಮಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶ್ರೀ ಎಂ. ಎಸ್. ಮನೋಹರ ವಹಿಸಿದರು. ಜಿಲ್ಲಾ ಕಸಾಪ ಕೋಶಾಧ್ಯಕ್ಷ ಶಿವಶಂಕರ ಟೋಕರೆ ಆಶಯ ನುಡಿ ನುಡಿದರು. ಆರ್ಬಿಟ್ ಸಂಸ್ಥೆಯ ಅವಿನಾಶ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಜಗನ್ನಾಥ ಕಮಲಾಪುರೆ ಸ್ವಾಗತಿಸಿದರು. ಕೊನೆಯಲ್ಲಿ ಸೀಮಪ್ಪ ವಂದಿಸಿದರು. ತಾಲ್ಲೂಕು ಕಸಾಪ ಉಪಾಧ್ಯಕ್ಷರಾದ ರಾಘವೇಂದ್ರ ಮುತ್ತಂಗಿ, ಸಿದ್ಧಾರೂಢ ಭಾಲ್ಕೆ, ಕೋಶಾಧ್ಯಕ್ಷ ಅಶೊಕ ದಿಡಗೆ, ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ವಿಜಯಕುಮಾರ ಸೋನಾರೆ, ಸಾಹಿತಿಗಳಾದ ವಿದ್ಯಾವತಿ ಹಿರೇಮಠ, ಶ್ರೀದೇವಿ ಪಾಟೀಲ, ಬೆನಗಲ್ ಭಾಸ್ಕರ, ರಾಜಕುಮಾರ ಖದೆಪುರೆ, ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.