ಇಂದಿನ ಯುವಜನಾಂಗವು ಸ್ವಾವಲಂಬಿ ಜೀವನ ನಡೆಸುವುದು ಬಹಳ ಮುಖ್ಯ :ಪ್ಯಾಟಿ

ಕಲಬುರಗಿ:ನ.30:ಮಹಾತ್ಮ ಗಾಂಧೀಜಿಯವರು ಬರೆದಿದ್ದ “ಸೆಲ್ಫ್ ಹೆಲ್ಪ್” ಪಾಠದಿಂದ ಯುವಕರು ತುಂಬಾ ಕಲಿತು ಲರ್ನ್ ವಿಥ ಅರ್ನ್ ಎಂಬ ಅರ್ಥದಲ್ಲಿ ಸಾಗಿದರೆ ಭವಿಷ್ಯವು ಉಜ್ವಲವಾಗುತ್ತದೆ ಎಂದು ಹಿರಿಯ ಚಿಂತಕರು ಹಾಗೂ ಶಿಕ್ಷಣ ಪ್ರೇಮಿ ಶಾಮರಾವ ಪ್ಯಾಟಿ ಯುವಕರಲ್ಲಿ ಮನವಿ ಮಾಡಿದರು. ಇಂದು ಜೆಪಿ ಪ್ರೌಢಶಾಲೆಯಲ್ಲಿ ಆಯೋಜಿಸಿದ ಪಾಲಕರ ಸಭೆಯಲ್ಲಿ ಮಾತನಾಡುತ್ತ ಪ್ರಪಂಚದ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಕರು ಕೌಶಲ್ಯದೊಂದಿಗೆ ಅಭ್ಯಾಸ ಮುಂದುವರಿಸಿದರೆ ಸ್ವಾವಲಂಬಿ ಬದುಕು ಖಾತ್ರಿಯಾಗುತ್ತದೆ .

ಹಿರಿಯರು ಹೇಳುವ ಹಾಗೆ “ಹಣವಿಲ್ಲದ ವ್ಯಕ್ತಿ ಹೆಣಕ್ಕಿಂತ ಕೀಳು” ಆದ್ದರಿಂದ ನನ್ನ ಜೀವ ನನ್ನ ಜೀವನವು ಬೇರೆಯವರಿಗೆ ಆದರ್ಶವಾಗಬೇಕು. ಒಬ್ಬ ಯುವಕ ಒಬ್ಬ ಅಗರ್ಭ ಶ್ರೀಮಂತ ವ್ಯಕ್ತಿಯನ್ನು ಕಂಡು ನಿಮ್ಮ ಈ ಭವ್ಯ ಬಂಗಲೇ ನೂರಾರು ಎಕರೆ ಜಮೀನು ಆಳುಕಾಳುಗಳು ಇಟ್ಟುಕೊಂಡು ಸುಮ್ಮನೆ ಏಕೆ ಕುಳಿತಿದ್ದೀರಿ ಎಂದು ಕೇಳಿದನು ಆಗ ಶ್ರೀಮಂತ ವ್ಯಕ್ತಿ ಯುವಕನಿಗೆ ಹೇಳುತ್ತಾ ನಮ್ಮಪ್ಪ ಗಳಿಸಿದ ನನ್ನ ಎಲ್ಲಾ ಆಸ್ತಿ ಪಾಸ್ತಿ ಭವ್ಯ ಬಂಗಲೇ ಐಷಾರಾಮಿ ಕಾರು ನಿನಗೆ ಕೊಡುತ್ತೇನೆ ನಿನ್ನ ಕಣ್ಣುಗಳು ನನಗೆ ಕೊಡುವೆ ಎಂದು ಕೇಳಿದಾಗ ನೀವು ಕುರುಡರೇ ಹೌದು ನಾನು ಕುರುಡ ನನಗೆ ನನ್ನ ಭವ್ಯ ಬಂಗಲೆ ನೋಡಲು ಆಗುತ್ತಿಲ್ಲ ಸುಮ್ಮನೆ ಕುಳಿತಿದ್ದನೆ.

ವಿಪರ್ಯಾಸ ಈ ಪ್ರಪಂಚದಲ್ಲಿ ಆನಂದದಾಯಕ ವಿಷಯವೆಂದರೆ ಯಶಸ್ಸು ನಿರಂತರ ಶ್ರಮದಿಂದ ಯಶಸ್ಸು ಸಾಧಿಸಿದರೆ ಆನಂದವಾಗಿ ಕಾಲಕಳೆಯಬಹುದು. ಅಪ್ಪ ಮಗನಿಗೆ ಆಸ್ತಿಪಾಸ್ತಿಗಳು ಗಳಿಸಿ ಇಡುವುದಕ್ಕಿಂತ ಒಂದು ಕಣ್ಣು ಕೊಟ್ಟಿದ್ದರೆ ಮಗ ತೃಪ್ತಿಯಿಂದ ಬದುಕುತ್ತಿದ್ದ . ಈಗ “ಸ್ಟಾರ್ಟ್ ಅಪ್ ಯುಗ” ನ್ಯಾಯ, ನೀತಿ ಸಮ್ಮತವಾಗಿ, ಶ್ರದ್ಧೆಯಿಂದ ವಿದ್ಯೆ, ಮತ್ತು ಕಲೆ ಯನ್ನು ಯುವಕರು ಡಾ. ಬಿ ಆರ್ ಅಂಬೇಡ್ಕರ್ ರಂತೆ ವಿದ್ಯಾ ಕಲಿಯಬೇಕು. ನರೇಂದ್ರ ಮೋದಿ ಹಾಗೆ ಕಲೆ ಕಲಿಯಬೇಕು ಎಂದು ಪ್ಯಾಟಿ ಯುವಕರಲ್ಲಿ ಕರೆಕೊಟ್ಟರು. ಈ ಸಂದರ್ಭದಲ್ಲಿ ಪ್ರೌಢಶಾಲೆಯ ಮುಖ್ಯಗುರುಗಳಾದ ಎಸ್ ವಿ ಸೋಲಾಪುರ, ಆರತಿ ಬೆಳಮಗಿ , ಶಿಕ್ಷಕ ಸಿಬ್ಬಂದಿ ವರ್ಗದವರು ಹಾಜರಿದ್ದರು.