ಇಂದಿನ ಯುವಕರು ಶ್ರೀ ರಾಮನ ಆದರ್ಶಗಳನ್ನು ಪಾಲಿಸಬೇಕು

ಅಥಣಿ : ಏ.18:ರಾಮ ನವಮಿ ಅಂಗವಾಗಿ ಸ್ಥಳೀಯ ಶ್ರೀರಾಮ ಮಂದಿರದಲ್ಲಿ ವಿಜ್ರಂಭಣೆಯಿಂದ ಶ್ರೀರಾಮ ಜನ್ಮೋತ್ಸವನ್ನು ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ಆಚರಿಸಲಾಯಿತು. ಮುಂಜಾನೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಆನಂತರ 11 ಗಂಟೆಗೆ ವಾದಿರಾಜ ಆಚಾರ್ಯ ಇವರಿಂದ ಹರಿ ಕೀರ್ತನೆ ನಡೆಯಿತು ಮಧ್ಯಾಹ್ನ 12 ಗಂಟೆಗೆ ಬಾಲ ರಾಮನನ್ನು ತೊಟ್ಟಿಲಲ್ಲಿ ಇಟ್ಟು ಶ್ರೀರಾಮ ಜನ್ಮೋತ್ಸವ ಆಚರಿಸಲಾಯಿತು.
ಶ್ರೀರಾಮನ ಭಾವ ಚಿತ್ರದ ಪೂಜಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಸಂಜೀವ ಕುಲಕರ್ಣಿ, ಶ್ರೀರಾಮ ಜನ್ಮ ತಾಳಿದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಭಾರತೀಯರಾದ ನಾವು 500 ವರ್ಷಗಳವರೆಗೆ ಕಾಯಬೇಕಾಯಿತು ಎಂದ ಅವರು ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪದ ಪರಿಣಾಮ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಿ ಉದ್ಘಾಟನೆಯಾಗಿರುವುದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ ಎಂದರು.
ಬರೀ ರಾಮ ಮಂದಿರದ ನಿರ್ಮಾಣದಿಂದ ಮಾತ್ರ ರಾಮನ ಸಂಕಲ್ಪ ಸಿದ್ಧಿಯಾಗುವುದಿಲ್ಲ ಇಂದಿನ ಯುವಕರು ರಾಮನ ಆದರ್ಶ ಪಾಲಿಸಿಕೊಂಡು ಹೋಗಬೇಕು ಆಗ ಮಾತ್ರ ಶ್ರೀರಾಮನ ಸಂಕಲ್ಪ ಈಡೇರುತ್ತದೆ ಎಂದ ಅವರು 500 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಬಾಲರಾಮನ ಜನ್ಮೋತ್ಸವ ಅಯೋಧ್ಯೆಯಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತಿರುವುದು ಸಂತೋಷದ ಸಂಗತಿ ಎಂದರು.
ಈ ಸಂದರ್ಭದಲ್ಲಿ ಲಕ್ಷ್ಮಣ ರಾಮದಾಸಿ, ಗುರು ಬಾದರಾಯಣಿ, ಸಂದೇಶ ಕುಲಕರ್ಣಿ, ನಾರಾಯಣ ದೇಶಪಾಂಡೆ, ಸುಧೀಂದ್ರ ಬಾದರಾಯಣಿ, ಲಕ್ಷ್ಮೀ ಬಾದರಾಯಣಿ, ಸಚೀನ್ ಕುಲಕರ್ಣಿ, ಆದಿತ್ಯ ಮಾಶಾಳ, ಗಿರೀಶ ಕುಲಕರ್ಣಿ, ಸೌರಭ ಮಾಶಾಳ, ರೋಹಿತ ಹೆರಕಲ್ಲ, ಪ್ರವೀಣ ಗೊಠೆ, ಪ್ರವೀಣ ರಾಮದಾಸಿ ಸೇರಿದಂತೆ ಸಾವಿರಾರು ಭಕ್ತರು ಉಪಸ್ಥಿತರಿದ್ದರು.