ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು – ಕೆ.ಎಸ್. ಚನ್ನಬಸಪ್ಪ


ಸಂಜೆವಾಣಿ ವಾರ್ತೆ
ಸಂಡೂರು: ಅ:10  ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎನ್ನುವ ಅಂಶವನ್ನು ಗಮನದಲ್ಲಿಟ್ಟುಕೊಂಡ ವೆಸ್ಕೋ ಗಣಿಕಂಪನಿ ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ, ಕಲಿಕಾ ಸಾಮಾಗ್ರಿ ಹಾಗೂ ಶಾಲಾ ಶುಲ್ಕವನ್ನು ಭರಿಸುವ ಮೂಲಕ ಉತ್ತಮ ಶಿಕ್ಷಿತ ಪ್ರಜೆಗಳನ್ನು ಬೆಳೆಸುವಂತಹ ಮಹತ್ತರ ಕಾರ್ಯಮಾಡುತ್ತಿದ್ದು ಅದನ್ನು ಪೂರ್ಣಪ್ರಮಾಣದಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವೆಸ್ಕೋ ಗಣಿ ಕಂಪನಿಯ ವ್ಯವಸ್ಥಾಪಕರಾದ ಕೆ.ಎಸ್. ಚನ್ನಬಸಪ್ಪ ತಿಳಿಸಿದರು.
ಅವರು ಇಂದು ತಾಲೂಕಿನ ಸಿದ್ದಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ನೋಟ್‍ಪುಸ್ತಕ, ಬ್ಯಾಗ್ ಹಾಗೂ ಇತರ ಕಲಿಕಾ ಸಾಮಾಗ್ರಿಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಇಂದು ಪ್ರತಿಯೊಂದು ಮಗುವೂ ಸಹ ಶಿಕ್ಷಣ ಪಡೆಯಬೇಕು, ಅದರಲ್ಲೂ ಬಡಮಕ್ಕಳು ಶಿಕ್ಷಣ ಪಡೆದರೆ ಉತ್ತಮ ಸಮಾಜ ನಿರ್ಮಾಣಕ್ಕೆ ನಾಂದಿಯಾಗುತ್ತದೆ, ಅದ್ದರಿಂದ ಕಂಪನಿಯು ನಿರಂತರವಾಗಿ ನೀಡುತ್ತಿದ್ದು ಅದರ ಪೂರ್ಣ ಸದುಪಯೋಗವನ್ನು ಪಡೆದು ಸಮಾಜದ ಸೇವೆ ಮಾಡುವ ಗುಣ ವಿದ್ಯಾರ್ಥಿಗಳಿಗೆ ಬರಲಿ ಅವರು ದೇಶದ ಉತ್ತಮ ಪ್ರಜೆಗಳಾಗಲಿ ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರುಗಳಾದ ಜಂಬಣ್ಣ ಅವರು ಮಾತನಾಡಿ ಬಡ ಮಕ್ಕಳು ಎಷ್ಟೋ ಬಾರಿ ಕಲಿಕೆಯ ಸಾಮಾಗ್ರಿಗಳ ಕೊರತೆಯಿಂದ ಕಲಿಕೆಯಲ್ಲಿ ಹಿಂದೆ ಬೀಳುತ್ತಿದ್ದರೂ, ಅದರೆ ತಾಲೂಕಿನ ಬಹಳಷ್ಟು ಗಣಿ ಕಂಪನಿಗಳು ಈ ರೀತಿಯ ಪ್ರೋತ್ಸಾಹ ಮತ್ತು ಸಹಾಯ ನೀಡುತ್ತಿದ್ದು ಅದರಲ್ಲೂ ವೆಸ್ಕೋ ಕಂಪನಿ ಈ ಕಾರ್ಯ ಮಾಡುವ ಮೂಲಕ ಬಡ ಕಾರ್ಮಿಕರ ಮಕ್ಕಳೂ ಸಹ ಖಾಸಗಿ ಶಾಲೆಯ ವಿದ್ಯಾರ್ಥಿಗಳ ರೀತಿಯಲ್ಲಿ ಉತ್ತಮ ಶಿಕ್ಷಣ ಪಡೆಯಲು ಸಹಕಾರಿಯಾಗಿದೆ ಎಂದರು.
ವೆಸ್ಕೋ ಕಂಪನಿಯ ಅಧಿಕಾರಿ ಬೊಮ್ಮಯ್ಯ ಅವರು ಪ್ರಸ್ತಾವಿಕವಾಗಿ ಮಾತನಾಡಿ ವೆಸ್ಕೋ ಗಣಿ ಕಂಪನಿಯು ಮಾಜಿ ಸಂಸದರು, ವೆಸ್ಕೋ ಫೌಂಡೇಷನ್ ದಿವಂಗತ ಕೆ.ಎಸ್. ವೀರಭದ್ರಪ್ಪನವರ ಸ್ಮರಣೆಯೊಂದಿಗೆ ಪ್ರತಿ ವರ್ಷ ತಾಲೂಕಿನಾದ್ಯಂತ ಶಿಕ್ಷಣ ಕಲಿಕೆಗೆ ಸಹಕಾರಿ ನೀಡುತ್ತಾ ಬಂದಿದೆ, ಈ ವರ್ಷ ತಾಲೂಕಿನ 50 ಶಾಲೆಗಳಿಗೆ 5541 ವಿದ್ಯಾರ್ಥಿಗಳಿಗೆ 31971 ನೋಟ್ ಪುಸ್ತಕಗಳನ್ನು 5541 ವಿದ್ಯಾರ್ಥಿಗಳಿಗೆ ಬ್ಯಾಗ್ಸ್, ಕಂಪಾಸ್ , ಇತರ ಕಲಿಕಾ ಸಾಮಾಗ್ರಿಗಳನ್ನು ನೀಡಿದ್ದೇವೆ ಒಟ್ಟು ರೂ. 2498682/- ಮೊತ್ತದ ಹಣವನ್ನು ಕಂಪನಿ ವ್ಯಯಿಸಿದ್ದು ಅದರ ಪೂರ್ಣ ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳು ಪ್ರಗತಿಯನ್ನು ಸಾಧಿಸಬೇಕು ಎಂದರು.
ಶಿಕ್ಷಣ ಇಲಾಖೆಯ ಸಿ.ಅರ್.ಪಿ ಶೇಖರಗೌಡ ಪಾಟೀಲ್ ಮಾತನಾಡಿ ಪುರುಷರಿಗಿಂತ ಸ್ತ್ರೀಯರೇ ಎಲ್ಲಾ ರಂಘದಲ್ಲೂ ಮುಂಚೂಣಿಯಲ್ಲಿದ್ದಾರೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ವಾಕ್ಯದಂತೆ  ನೂತನ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಕರಡಿಲತಾ ಅಯ್ಕೆಯಾಗಿರುವುದು ಸಂತಸವಾಗಿದೆ. ಒಬ್ಬ ಮಹಿಳೆಯಿಂದ ಮನುಕುಲವೆಲ್ಲಾ ಉದ್ಧಾರವಾಗಲು ಸಾಧ್ಯ, ಮಹಿಳೆಯೊಬ್ಬರಿಗೆ ಅಧಿಕಾರ ನೀಡಿರುವುದು ಉತ್ತಮ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದಂತ ಕೀರ್ತಿ ಸಲ್ಲುತ್ತದೆ ಎಂದು ತಿಳಿಸಿದರು.
ಮುಖ್ಯಗುರುಗಳಾಧ ಜಂಬಣ್ಣ ಮಾತನಾಡಿ ಶೈಕ್ಷಣಿಕ ಅಭಿವೃದ್ದಿಗಾಗಿ ಶ್ರಮಿ ಮುಖ್ಯ ಉತ್ತಮ ಕೆಲಸಗಳನ್ನು ಮಾಡಲು ಕೆಲವು ಶ್ರೀಮಂತರಿಗೆ ಶಕ್ತಿಯನ್ನು ಕೊಟ್ಟಿರುತ್ತಾನೆ. ಪ್ರಪಂಚವನ್ನೇ ಗೆದ್ದ ಅಲ್ಸಂಡರ್ ಅಚಿತಿಮವಾಗಿ ನನ್ನ ಶವದ ಪೆಟ್ಟಿಯ ಹೊರಗೆ ಕಾಲಿ ಕೈ ಇರಲಿ ಎಂದು ಹೇಳಿದ್ದು ಕಾರಣ ಅದನ್ನು ಪ್ರಜೆಗಳು ನೋಡಲಿ ಎಂದು, ಕಾರಣ ಸತ್ತಾಗ ರಾಜನಾದರೂ ಸಹ ಏನನ್ನು ತೆಗೆದುಕೊಂಡು ಹೋಗಲಾರ ಎನ್ನುವ ತತ್ವವನ್ನು ಅಳವಡಿಸಿಕೊಂಡ ಕಂಪನಿಯಾದ ವೆಸ್ಕೋ ಹಾಗೂ ಚೌಗಲೇ ಕಂಪನಿಯವರು ಶಾಲೆಗೆ ಪೂರ್ಣಪ್ರಮಾಣದಲ್ಲಿ ಸಹಕಾರ ಮತ್ತು ದಾನವನ್ನು ನೀಡಿದ್ದಾರೆ, ಇನ್ನೂ ಶಾಲೆ ಜಿಲ್ಲಾ ಉತ್ತಮ ಶಾಲೆ ಪ್ರಶಸ್ತಿಪಡೆದುಕೊಳ್ಳುವ ಮೂಲಕ ಇನ್ನೂ ಹೆಚ್ಚು ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹುಲುಗಪ್ಪ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಹುಲಿಕುಂಟೆಪ್ಪ, ಸದಸ್ಯ ಹೊನ್ನೂರಪ್ಪ, ಬಡ್ತಿ ಮುಖ್ಯಗುರುಗಳಾದ ಗಂಗಾಭವಾನಿ, ಶ್ರೀನಿವಾಸ್, ದೇವರಮನಿ ನಾಗಪ್ಪ, ಸುಭಾನ್ ಸಾಹೇಬ್, ರಾಜಣ್ಣ, ಅನಿತಾ, ಶಕೀಲಾ ಅಕ್ತಾರ್, ಎಂ. ಹುಲಿಗೆಮ್ಮ, ವಾಲ್ಮೀಕಿ ಸಂಘದ ಅಧ್ಯಕ್ಷ ರಾಮಶೇಖರ್ ಮಾತನಾಡಿದರು, ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್‍ಪುಸ್ತಕ ಹಾಗೂ ಕಲಿಕಾ ಸಾಮಾಗ್ರಿಗಳನ್ನು ವೆಸ್ಕೋ ಕಂಪನಿ ಸಿಬ್ಬಂದಿಗಳು ವಿತರಿಸಿದರು.
ಶಿಕ್ಷಕಿ ರೇಸ್ಮಾ ನಿರೂಪಿಸಿದರು, ಟಿ.ಜಂಭಣ್ಣ ಸ್ವಾಗಿತಿಸಿದರು. ಸಂಗೀತಾ ಹೆಚ್. ವಂದಿಸಿದರು. ಸ್ಪಂದನಾ ಮತ್ತು ತಂಡದವರು ಪ್ರಾರ್ಥಿಸಿದರು.

One attachment • Scanned by Gmail