ಕಲಬುರಗಿ,ಏ.15-ಇಂದಿನ ಆಧುನಿಕತೆಯ ದಿನಗಳಲ್ಲಿ ಪುರಾಣ ಮತ್ತು ಪ್ರವಚನಗಳು ಹೆಚ್ಚು ಪ್ರಸ್ತುತವಾಗಿವೆ. ಈ ಕಾರ್ಯಕ್ರಮಗಳಲ್ಲಿ ಹೆಚ್ಚು ಜನರು ಭಾಗವಹಿಸಬೇಕು. ಇದರಿಂದ ನಾವು ಧರ್ಮ, ಸಂಸ್ಕøತಿ, ಸಂಸ್ಕಾರ, ಮಹಾತ್ಮರ ಮತ್ತು ಶರಣರ ತತ್ವ ಸಿದ್ಧಾಂತಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ದಂಡಗುಂಡ ಬ್ರಹನ್ಮಠದ ಸಂಗನಬಸವ ಶಿವಾಚಾರ್ಯರು ಹೇಳಿದರು.
ನಗರದ ವಲಯದಲ್ಲಿರುವ ಕೋಟನೂರ(ಡಿ) ಗ್ರಾಮದ ಸಾಧು ಶಿವಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ 9ನೇ ವರ್ಷದ ಜಾತ್ರಾ ಮಹೋತ್ಸವದ 9ನೇ ದಿನ ಕಾರ್ಯಕ್ರಮ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
“ಸಾಧು ಶಿವಲಿಂಗೇಶ್ವರರ ಜೀವನದ ಚರಿತ್ರೆ ಕೇಳುವುದರಿಂದ ಮತ್ತು ಓದುವುದರಿಂದ ಜೀವನ ಪಾವನವಾಗುತ್ತದೆ ಪುರಾಣ ಹಾಗೂ ಪ್ರವಚನ ಕೇಳುವುದರಿಂದ ಕೆಟ್ಟ ವಿಚಾರಗಳು ದೂರವಾಗಿ, ಒಳ್ಳೆಯ ಭಾವನೆಗಳು ಮನಸ್ಸಲ್ಲಿ ಮೂಡುತ್ತವೆ” ಎಂದು ಪುರಾಣ ಪ್ರವಚನಕಾರಾದ ಸುಂಟನೂರ ಸಂಸ್ಥಾನ ಹಿರೇಮಠದ ಬಂಡಯ್ಯ ಸ್ವಾಮಿಗಳು ಪ್ರವಚನ ನೀಡಿದರು.
ಮಠದ ಒಡೆಯರಾದ ಪೂಜ್ಯ ಸಿದ್ದು ಮುತ್ಯಾನವರು, ಹಿರಿಯರಾದ ಬಸವಂತರಾಯ ಮಾಲಿ ಪಾಟೀಲ್. ವಿದ್ಯಾಸಾಗರ ಮಾಲಿ ಪಾಟೀಲ್ ಉಪಸ್ಥಿತರಿದ್ದರು. ಕಲಾವಿದರಾದ ಸಂಗಮೇಶ ಸ್ವಂತ ನೀಲಾ, ಸಂತೋಷ ಕೊಡ್ಲಿ ಅವರಿಂದ ಸಂಗೀತ ನೆರವೇರಿತು. ಕೆಸರಟಗಿ, ಇಟಗಾ, ನಂದೂರು, ನಾಗನಹಳ್ಳಿ ,ಕೋಟನೂರ, ಖಣದಾಳ ಗ್ರಾಮದ ಸದ್ಭಕ್ತ ಭಾಗವಹಿಸಿದ್ದರು