ಇಂದಿನಿಂದ 14 ದಿನಗಳ ಕೊರೊನ ಕಫ್ರ್ಯೂ..!!

ಮೈಸೂರು:ಏ:28: ನಗರದಲ್ಲಿ ಇಂದಿನಿಂದ 14 ದಿನಗಳ ಕಫ್ರ್ಯೂ ಜಾರಿಯಾಗಿರುವ ಹಿನ್ನಲೆಯಲ್ಲಿ ಇಡೀ ನಗರವೇ ಖಾಲಿ ಖಾಲಿಯಾಗಿದೆ.
ನಗರದಲ್ಲಿನ ಬಂಡಿಪಾಳ್ಯ ಮಾರುಕಟ್ಟೆ, ಪ್ರಮುಖ ರಸ್ತೆಗಳಲ್ಲಿಮ ಅಂಗಡಿ ಮುಂಗಟ್ಟುಗಳು ಎಲ್ಲ ಕಡೆ ನಿಗದಿತ ಸಮಯಕ್ಕೂ ಮುನ್ನ ಬಾಗಿಲು ಮುಚ್ಚಿದ್ದು, ಕಫ್ರ್ಯೂಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ.
ಎಂದಿನಂತೆ ಕಾರ್ಯನಿರ್ವಹಿಸುತ್ತಿರುವ ತರಕಾರಿ, ದಿನಸಿ ಅಂಗಡಿಗಳು ಜನರಿಲ್ಲದೆ ಬಿಖೋ ಎನ್ನುತ್ತಿದ್ದು, ಗ್ರಾಮೀಣ ಭಾಗದ ಜನರು ವ್ಯಾಪಾರಕ್ಕೆ ಬಾರದ ಹಿನ್ನೆಲೆ ಬಹುತೇಕ ಚಟುವಟಿಕೆಗಳು ಡಲ್. ಕೇವಲ 10 ಗಂಟೆ ಒಳಗೆ ವ್ಯಾಪಾರ ಮಾಡಬೇಕಿರುವುದರಿಂದ ಗ್ರಾಹಕರನ್ನೇ ಎದುರು ನೋಡುತ್ತಿದ್ದರು.
ನಗರಿಯಲ್ಲಿ ರಸ್ತೆಗಿಳಿಯದ ಜನ: ಕಫ್ರ್ಯೂ ಹಿನ್ನಲೆಯಲ್ಲಿ ನಗರದ ಬಹುತೇಕ ಬಡಾವಣೆಗಳಲ್ಲಿ ಜನರು ಮನೆಯಿಂದ ಹೊರ ಬಾರದ ಪ್ರಯುಕ್ತ ಎಲ್ಲಾ ರಸ್ತೆಗಳು ಸಂಪೂರ್ಣ ಸ್ಥಬ್ದಗೊಂಡಿದ್ದು ಇಂದಿಗೆ ಅವಶ್ಯವಿರುವ ಸರಕು-ಸಾಮಾಗ್ರಿಗಳನ್ನು ಮುಂಚೆಯೇ ಅಗತ್ಯವಸ್ತುಗಳನ್ನ ಖರೀದಿಸಿದ್ದರು.
ನಂಜನಗೂಡು ರಸ್ತೆಯಲ್ಲಿ ವಾಹನಗಳ ಸಂಚಾರ:
ಕಾರ್ಯ ನಿಮಿತ್ತ, ಗ್ರಾಮೀಣ ಭಾಗಕ್ಕೆ ಬೈಕ್ ಕಾರು, ಆಟೋ ಗಳ ಮೂಲಕ ತೆರಳುತ್ತಿದ್ದು, 10 ಗಂಟೆ ಯಾಗುತ್ತಿದ್ದಂತೆ ಮೈಸೂರು ನಂಜನಗೂಡು ರಸ್ತೆ ಬಂದ್ ಆಯಿತು. ಮೈಸೂರಿನ ರಿಂಗ್ ರಸ್ತೆಗೆ ಸಂಪರ್ಕ ಹೊಂದಿರುವ ನಂಜನಗೂಡು ಮೈಸೂರು ರಿಂಗ್ ರೋಡ್ ಜಂಕ್ಷನ್, ಮುಖ್ಯರಸ್ತೆ, ರಿಂಗ್ ರಸ್ತೆಗಳಿಗೂ ಪೆÇಲೀಸರ ನಿಯೋಜನೆಗೊಳಿಸಿ ಅನಗತ್ಯವಾಗಿ ಓಡಾಡುವವರ ಮೇಲೆ ಪೆÇಲೀಸರು ನಿಗಾ ಇಟ್ಟಿದ್ದರು.
ಬಾರ್‍ಗಳಿಗೆ ಬೀಗ:
ಬೆಳಗ್ಗೆ 6 ರಿಂದ 10ಗಂಟೆಯ ವರಗೆ ಪಾರ್ಸಲ್ ವ್ಯವಸ್ಥೆಗೆ ಸರ್ಕಾರ ಅನುಮತಿ ನೀಡಿದ್ದ ಹಿನ್ನಲೆಯಲ್ಲಿ ಮದ್ಯಪಾನ ಪ್ರಿಯರು ತಮಗೆ ಅವಶ್ಯವಿರು ಮದ್ಯವನ್ನು ಖರೀದಿಸಿ ಸ್ಟೋರ್ ಮಾಡಿಕೊಂಡರು. 10 ಗಂಟೆಯ ನಂತರ ವಹಿವಾಟು ನಡೆಸುತ್ತಿದ್ದ ಬಾರ್‍ಗಳನ್ನು ಅಬಕಾರಿ-ಪೊಲೀಸ್ ಸಿಬ್ಬಂಧಿಗಳು ಮುಚ್ಚಿಸಿದರು. ಇದಕ್ಕೆ ಕೆಲವು ಮಾಲೀಕರು ಆಕ್ಷೇಪವನ್ನು ವ್ಯಕ್ತಪಡಿಸಿದರು.
ಒಟ್ಟಾರೆ ಇದೇ ರೀತಿಯ ಬೆಂಬಲ ಮುಂದಿನ 13 ದಿನಗಳು ದೊರೆತಲ್ಲಿ ಕೊರೊನಾ ಸೋಂಕನ್ನು ಕೊಂಚ ಮಟ್ಟಿಗಾದರೂ ತಡೆಗಟ್ಟಲು ಸಾಧ್ಯ.