ಇಂದಿನಿಂದ 1 ರಿಂದ 5 ನೇ ತರಗತಿ ಮಕ್ಕಳಿಗೆ ಬಿಸಿಯೂಟ

ಶಿವಮೊಗ್ಗ, ನ. 2: ರಾಜ್ಯಾದ್ಯಂತ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಅಭ್ಯಾಸ
ಮಾಡುತ್ತಿರುವ 1 ರಿಂದ 5 ನೇ ತರಗತಿ ಮಕ್ಕಳಿಗೆ, ಮಂಗಳವಾರ ಮಧ್ಯಾಹ್ನದಿಂದ ಬಿಸಿಯೂಟ
ವ್ಯವಸ್ಥೆಗೆ ಚಾಲನೆ ದೊರಕಲಿದೆ.
ಕಳೆದ ಅಕ್ಟೋಬರ್ 25 ರಿಂದ 1 ರಿಂದ 5 ನೇ ತರಗತಿ ಮಕ್ಕಳಿಗೆ ತರಗತಿಗಳನ್ನು ಸರ್ಕಾರ
ಆರಂಭಿಸಿತ್ತು. ಪ್ರಾರಂಭಿಕವಾಗಿ ಮಧ್ಯಾಹ್ನದವರೆಗೆ ಮಾತ್ರ ಕ್ಲಾಸ್ ಗಳು
ನಡೆಯುತ್ತಿದ್ದವು. ಈ ಕಾರಣದಿಂದ ಆ ಮಕ್ಕಳಿಗೆ ಬಿಸಿಯೂಟ ವ್ಯವಸ್ಥೆ ಕಲ್ಪಿಸಿರಲಿಲ್ಲ.
ಮಂಗಳವಾರದಿಂದ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4.30 ರವರೆಗೆ ತರಗತಿಗಳು
ನಡೆಯುತ್ತಿವೆ. ಈ ಕಾರಣದಿಂದ 1 ರಿಂದ 5 ನೇ ತರಗತಿ ಮಕ್ಕಳಿಗೂ ಬಿಸಿಯೂಟ ವ್ಯವಸ್ಥೆ
ಮಾಡಲಾಗುತ್ತಿದೆ.
ಇದಕ್ಕಾಗಿ ಶಿಕ್ಷಣ ಇಲಾಖೆ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ. ಅಗತ್ಯ ಆಹಾರ
ಸಾಮಗ್ರಿಗಳನ್ನು ಶಾಲೆಗಳಿಗೆ ರವಾನಿಸಿದೆ. ಪ್ರಸ್ತುತ 5 ರ ನಂತರ ತರಗತಿ
ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಬಿಸಿಯೂಟ ಕಲ್ಪಿಸಲಾಗುತ್ತಿದೆ.