ಇಂದಿನಿಂದ ಹುಣಸಿಹಡಗಿಲ್ ಜಾತ್ರೆ

ಕಲಬುರಗಿ.ಆ 26: ತಾಲೂಕಿನ ಹುಣಸಿಹಡಗಿಲ್ ಗ್ರಾಮದ ಪೂಜ್ಯ ಬಸವಲಿಂಗಪ್ಪ ಅಪ್ಪಾಜಿ ಅವರ 19 ನೇ ವರ್ಷದ ಮೂರು ದಿನಗಳ ಜಾತ್ರಾ ಮಹೋತ್ಸವ ಇಂದಿನಿಂದ ಆ.28 ರವರೆಗೆ ನಡೆಯಲಿದೆ.
ಜಾತ್ರಾ ಮಹೋತ್ಸವವು ವೀರಮಹಾಂತ ಶಿವಾಚಾರ್ಯರ ಅಧ್ಯಕ್ಷತೆಯಲ್ಲಿ ಮತ್ತು ಗುಂಡುರಾವ್ ಅಪ್ಪಾಜಿ ಅವರ ಸಾನಿಧ್ಯದಲ್ಲಿ ,ಬಸವರಾಜಪ್ಪ ಅಪ್ಪಾಜಿ ನೇತೃತ್ವದಲ್ಲಿ ರಥೋತ್ಸವ ನಡೆಯಲಿದೆ.
ಇಂದು ರಾತ್ರಿ 8 ಕ್ಕೆ ಉಚ್ಚಾಯಿ ಕಾರ್ಯಕ್ರಮ ನೆರವೇರಲಿದೆ. ನಂತರ ಸಂಗೀತ ಕಾರ್ಯಕ್ರಮ ಭಜನೆ ನಡೆಯಲಿದೆ.ನಾಳೆ ( ಆ.27) ಸಂಜೆ 6 ಗಂಟೆಗೆ ರಥೋತ್ಸವ ಜರುಗಲಿದೆ.ನಂತರ ಧಾರ್ಮಿಕ ಸಭೆ ನಡೆಯಲಿದೆ.ಆ.28 ರಂದು ಮಧ್ಯಾಹ್ನ 2 ಗಂಟೆಗೆ ಜಂಗಿಕುಸ್ತಿ ನಡೆಯಲಿದೆ.ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಹಣಮಂತರಾವ ಬಿ. ಮಂಗಾಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.