ಇಂದಿನಿಂದ ಸುಧಾರಿತ ಸಂಚಾರ ನಿಯಂತ್ರಣಾ ಸೂಚಿ ಜಾರಿ

ಮೈಸೂರು,ಏ.1:- ಮೈಸೂರು ನಗರದಲ್ಲಿ ಟ್ರಾಫಿಕ್ ಪೆÇಲೀಸರ ಕರ್ತವ್ಯವನ್ನು ಜನಸ್ನೇಹಿ’’ಯಾಗಿಸಲು ಮತ್ತು ಪಾರದರ್ಶಕವಾಗಿಸಲುಸುಧಾರಿತ ಸಂಚಾರ ನಿಯಂತ್ರಣಾ ಸೂಚಿ’’ ಇಂದಿನಿಂದ ಜಾರಿಯಾಗಲಿದೆ.
ಮೈಸೂರು ನಗರದಲ್ಲಿ ಟ್ರಾಫಿಕ್ ಪೆÇಲೀಸರ ಕರ್ತವ್ಯವನ್ನು ಜನಸ್ನೇಹಿಯಾಗಿಸಲು ಮತ್ತು ಪಾರದರ್ಶಕ ವಾಗಿಸಲು ಒಂದು ನೂತನ ಮಾರ್ಗಸೂಚಿಯನ್ನು ಹೊರಡಿಸುವ ಅವಶ್ಯಕತೆ ಕಂಡುಬಂದಿರುತ್ತದೆ. ಆ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ಮಾಧ್ಯಮಗಳ ಮೂಲಕ ಪಡೆದ ಸಲಹೆಗಳನ್ನು ಅಳವಡಿಸಿಕೊಂಡು ಒಂದು ಸುಧಾರಿತ ಸಂಚಾರ ನಿಯಂತ್ರಣಾ ಸೂಚಿ’’ ಯನ್ನು ಸಿದ್ದಪಡಿಸಿದ್ದು ಇಂದಿನಿಂದ ಪ್ರಾಯೋಗಿಕವಾಗಿ ಜಾರಿಗೆ ತರಲಾಗುವುದು ಎಂದು ನಗರ ಪೆÇಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದರು. ನೂತನ ಸುಧಾರಿತ ಸಂಚಾರ ನಿಯಂತ್ರಣಾ ಸೂಚಿಯ ವಿಶೇಷತೆ: ಸ್ವಯಂ ಪ್ರೇರಿತ ತಪಾಸಣಾ ಕೇಂದ್ರ 01-ಏಪ್ರಿಲ್-2021 ರಿಂದ ಒಂದು ತಿಂಗಳ ಅವಧಿಗೆ ಪ್ರಾಯೋಗಿಕವಾಗಿ ಮೈಸೂರು ನಗರದಲ್ಲಿ ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಸಂಚಾರ ನಿಯಮಗಳ ಉಲ್ಲಂಘನೆಯ ಬಾಕಿಯಿರುವ ಹಳೆಯ ಪ್ರಕರಣಗಳ ಮಾಹಿತಿ ಪಡೆಯುವಿಕೆ, ದಂಡ ಪಾವತಿ ಮತ್ತು ದಾಖಲಾತಿ ಪರಿಶೀಲನೆಗೆ ಅವಕಾಶ ಕಲ್ಪಿಸಲು ಈ ಕೆಳಕಂಡ ಸ್ವಯಂಪ್ರೇರಿತ ತಪಾಸಣಾ ಕೇಂದ್ರಗಳ ಸ್ಥಳಗಳನ್ನು ನಿಗದಿಪಡಿಸಲಾಗಿರುತ್ತದೆ. ಹೊಸ ನಿಯಂತ್ರಣಾ ಸೂಚಿಯಂತ್ರ ವಾಹನಗಳ ತಪಾಸಣೆ ಪ್ರತಿದಿನ ಬೆಳಗ್ಗೆ 10:30 - 12:30ವರೆಗೆ, ಮತ್ತೆ ಮಧ್ಯಾಹ್ನ 03:00 - 5:00 ಗಂಟೆಯವರೆಗೆ ನಡೆಯಲಿದೆ. ರಿಂಗ್ ರಸ್ತೆಯಲ್ಲಿ ಅತಿವೇಗದ ಚಾಲನೆ ಮತ್ತು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ತಪಾಸಣೆ ಎಂದಿನಂತೆ ಮುಂದುವರಿಯಲಿದದೆ. ಈ ತಪಾಸಣಾ ಕಾರ್ಯವು ಎಎಸ್‍ಐಗಿಂತ ಮೇಲ್ಪಟ್ಟ ಅಧಿಕಾರಿಗಳಿಂದ ನಡೆಯಲಿದೆ. ತಪಾಸಣಾ ಕೇಂದ್ರಗಳು: ಅಟಲ್ ಬಿಹಾರಿ ವಾಜಪೇಯಿ ವೃತ್ತ ವಿ.ವಿ.ಪುರಂ ಸಂಚಾರ ಠಾಣೆ, ಶ್ರೀರಾಂಪುರ ಜಂಕ್ಷನ್ ಕೆ.ಆರ್.ಸಂಚಾರ ಠಾಣೆ, ರಾಮಸ್ವಾಮಿ ವೃತ್ತ ಕೆ.ಆರ್.ಸಂಚಾರ ಠಾಣೆ, ಚಾಮರಾಜ ಒಡೆಯರ್ ವೃತ್ತ ದೇವರಾಜ ಸಂಚಾರ ಠಾಣೆ, ನಾಡಪ್ರಭು ಕೆಂಪೇಗೌಡ ವೃತ್ತ ಎನ್.ಆರ್.ಸಂಚಾರ ಠಾಣೆ, ದೇವೇಗೌಡ ವೃತ್ತ ಸಿದ್ದಾರ್ಥನಗರ ಸಂಚಾರ ಠಾಣೆ, ಡಾ: ಎ.ಪಿ.ಜೆ ಅಬ್ದುಲ್ ಕಲಾಂ ವೃತ್ತ ಕೆ.ಆರ್.ಸಂಚಾರ ಠಾಣೆ, ಎಸ್.ಲಿಂಗಣ್ಣ ವೃತ್ತ ಸಿದ್ದಾರ್ಥನಗರ ಸಂಚಾರ ಠಾಣೆ, ಬೆಳವಾಡಿ ಜಂಕ್ಷನ್ ವಿ.ವಿ.ಪುರಂ ಸಂಚಾರ ಠಾಣೆ, ವಿವೇಕಾನಂದ ವೃತ್ತ ಕೆ.ಆರ್.ಸಂಚಾರ ಠಾಣೆ ಈ ಸ್ಥಳಗಳಲ್ಲಿ ಮಾಹಿತಿ ಪಡೆಯಲು ಆಗಮಿಸುವವರಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ ಎಲ್ಲಾ ಮಾಹಿತಿಯನ್ನು ಒದಗಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಈ ಕೇಂದ್ರಗಳ ಬಳಿ ಯಾವುದೇ ರೀತಿಯಲ್ಲಿ ವಾಹನ ಸವಾರರನ್ನು ತಡೆದು ನಿಲ್ಲಿಸದಂತೆ ಸೂಚನೆಗಳನ್ನು ನೀಡಲಾಗಿದೆ. ಜಂಕ್ಷನ್/ವೃತ್ತಗಳನ್ನು ಸುಧಾರಣಾ ಕ್ರಮ: ಮೈಸೂರು ನಗರದ ಪ್ರಮುಖ ವೃತ್ತ/ಜಂಕ್ಷನ್ ಗಳಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ಬೇಕಾಗುವ ಎಲ್ಲ ರೀತಿಯ ಕ್ರಮಗಳನ್ನು ಏರ್ಪಾಡು ಮಾಡಲು ಎ.ಎಸ್.ಐ ಮೇಲ್ಪಟ್ಟು ಇನ್ಸಪೆಕ್ಟರ್ವರೆಗೆ ಪ್ರತಿಯೊಬ್ಬ ಅಧಿಕಾರಿಯು ಒಂದೊಂದು ವೃತ್ತ ಅಥವಾ ಜಂಕ್ಷನ್ ಗಳನ್ನು ದತ್ತು ಪಡೆದು ಅಲ್ಲಿ ವೈಯುಕ್ತಿಕ ಗಮನಹರಿಸಿ ಪ್ರತಿನಿತ್ಯ ಆ ಸ್ಥಳದಲ್ಲಿ ಕನಿಷ್ಠ ಒಂದು ಗಂಟೆಯನ್ನಾದರೂ ವ್ಯಯಿಸಿ ಸುಗಮ ಸಂಚಾರಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಕಲ್ಪಿಸಬೇಕು. ಈ ರೀತಿ ದತ್ತು ಪಡೆದ ವೃತ್ತ/ಜಂಕ್ಷನ್‍ಗಳ ಸಂಪೂರ್ಣ ನಿರ್ವಹಣೆಯ ಜವಾಬ್ದಾರಿ ಸಂಬಂಧಪಟ್ಟ ಅಧಿಕಾರಿಗಳದ್ದಾಗಿರುತ್ತದೆ. ತಿಂಗಳ ಕೊನೆಯಲ್ಲಿ ಉತ್ತಮವಾಗಿ ನಿರ್ವಹಣೆ ಮಾಡಲ್ಪಟ್ಟ ವೃತ್ತ/ಜಂಕ್ಷನ್ ನ ಉಸ್ತುವಾರಿ ಅಧಿಕಾರಿಗೆ ಬಹುಮಾನ ನೀಡಲಾಗುವುದು. ವಾಹನ ದಟ್ಟಣೆ ಸಮಯದಲ್ಲಿ ಸುಗಮ ಸಂಚಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಉದ್ದೇಶಪೂರ್ವಕ ನಿಯಮ ಉಲ್ಲಂಘನೆಗೆ ತಪ್ಪದೇ ಕ್ರಮ ಕೈಗೊಳ್ಳವುದು ಯಾವುದೇ ಕಾರಣಕ್ಕೂ ಚಲಿಸುತ್ತಿರುವ ವಾಹನಗಳನ್ನು ಬರೀ ತಪಾಸಣೆಗೋಸ್ಕರವೇ ಅಡ್ಡಗಟ್ಟಿ ದಾಖಲಾತಿ ಪರಿಶೀಲನೆ ಇತ್ಯಾದಿಗಳನ್ನು ಕೈಗೊಳ್ಳುವಂತಿಲ್ಲ. ಆದರೆ ವಾಹನದಲ್ಲಿ ಚಲಿಸುತ್ತಿರುವ ಸವಾರನು ಈ ಕೆಳಕಂಡ ಸಂಚಾರ ನಿಯಮ ಉಲ್ಲಂಘನೆಗಳನ್ನು ಮಾಡುತ್ತಾ ಚಲಿಸುತ್ತಿದ್ದಲ್ಲಿ (ಗಿisibಟe vioಟಚಿಣioಟಿs)ಆ ಸವಾರನ ವಿರುದ್ಧ ದಿನದ ಯಾವುದೇ ಸಮಯದಲ್ಲಾದರೂ ತಪ್ಪದೇ ಕ್ರಮ ಕೈಗೊಳ್ಳಲಾಗುವುದು. ಮೊಬೈಲ್ ಬಳಸುತ್ತಾ ವಾಹನ ಚಾಲನೆ, ಸೀಟ್ ಬೆಲ್ಟ್ ಧರಿಸದೇ ಇರುವುದು, ಮದ್ಯಪಾನ ಮಾಡಿ ವಾಹನ ಚಾಲನೆ, ಸರಕು ವಾಹನದಲ್ಲಿ ಸಾರ್ವಜನಿಕರ ಸಾಗಾಣಿಕೆ, ಅಪ್ರಾಪ್ತ ಮಕ್ಕಳಿಂದ ವಾಹನ ಚಾಲನೆ, ತ್ರಿಬಲ್ ರೈಡಿಂಗ್, ಟ್ರಾಫಿಕ್ ಸಿಗ್ನಲ್ ಜಂಪ್ ಮಾಡುತ್ತಾ ಚಲಿಸುವುದು, ಏಕಮುಖ ಸಂಚಾರಕ್ಕೆ ವಿರುದ್ಧವಾದ ಚಾಲನೆ, ಸುಗಮ ಸಂಚಾರಕ್ಕೆ ಅಡಚಣೆ, ಕರ್ಕಶವಾದ ಶಬ್ಧ ಹೊರಹೊಮ್ಮುವ ವಾಹನ ಚಾಲನೆ ಇತ್ಯಾದಿ ಇದರಲ್ಲಿ ಸೇರಿವೆ. ಪ್ರವರ್ತನಾ (ಇಟಿಜಿoಡಿಛಿemeಟಿಣ) ಸಮಯದಲ್ಲಿ ವಾಹನ ಸವಾರರ ಸುರಕ್ಷತೆ ಮತ್ತು ಪೆÇಲೀಸ್ ಕಾರ್ಯವೈಖರಿಯ ಪಾರದರ್ಶಕತೆಗೆ ಆದ್ಯತೆ ನೀಡ ಬೇಕು. ಪ್ರವರ್ತನಾ ಕಾರ್ಯದ ಸಮಯದಲ್ಲಿ ಯಾವುದೇ ಕಾರಣಕ್ಕೂ ಚಲಿಸುತ್ತಿರುವ ವಾಹನ ಸವಾರನಿಗೆ ತಪಾಸಣಾ ತಂಡವುದಿಢೀರ್’’ ಎಂದು ಪ್ರತ್ಯಕ್ಷವಾಗಿ ವಾಹನ ತಡೆಯುವುದು, ಚಲಿಸುತ್ತಿರುವ ಸವಾರರನ್ನು ತಡೆಯಲು ತಕ್ಷಣಕ್ಕೆ ಬ್ಯಾರಿಕೇಡನ್ನು ಅಡ್ಡಲಾಗಿ ತಳ್ಳವುದು ಅಥವಾ ಲಾಠಿಯನ್ನು ಬೀಸುವುದು. ವಾಹನದ ಕೀ ಕಸಿದುಕೊಳ್ಳುವುದು. ಏರು ಧ್ವನಿಯಲ್ಲಿ ಸಂಭೋದಿಸುವುದು ಅಥವಾ ಅವಾ ಚ್ಯವಾದ ಶಬ್ದ ಬಳಸುವುದನ್ನು ಮಾಡಲೇ ಬಾರದು ಮತ್ತು ವಾಗ್ವಾದಕ್ಕಿಳಿಯಬಾರದೆಂದು ಸೂಚನೆ ಗಳನ್ನು ನೀಡಲಾಗಿದೆ.
ಪ್ರವರ್ತನಾ ಕಾರ್ಯದ ಸಮಯದಲ್ಲಿ ಯಾವುದಾದರೂ ಸವಾರನು ಅಸಭ್ಯವಾಗಿ ವರ್ತಿಸಿದಲ್ಲಿ ಆತನ ಹೆಸರು ಮತ್ತು ವಾಹನ ಸಂಖ್ಯೆಯನ್ನು ನಮೂದಿಸಿಕೊಂಡು ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ನೂತನ “ಸುಧಾರಿತ ಸಂಚಾರ ನಿಯಂತ್ರಣಾ ಸೂಚಿ’’ಯ ಪ್ರಾಯೋಗಿಕ ಅನುಷ್ಟಾನದ ವೇಳೆಯಲ್ಲಿ ಸಾರ್ವಜನಿಕರಿಂದ ದೊರೆಯುವ ಪರ ಹಾಗೂ ವಿರೋಧದ ಪ್ರತಿಕ್ರಿಯೆಗಳನ್ನು ಗಣನೆಗೆ ತೆಗೆದುಕೊಂಡು ಮೈಸೂರು ನಗರ ಟ್ರಾಫಿಕ್ ಪೆÇೀಲೀಸರನ್ನು ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಈ ನಿಯಂತ್ರಣಾ ಮಾರ್ಗಸೂಚಿಯನ್ನು ಪರಿಷ್ಕರಿಸಲಾಗುವುದು. ಈ ಸುಧಾರಿತ ಸಂಚಾರ ನಿಯಂತ್ರಣ ಸೂಚಿಯ ಬಗ್ಗೆ ಈ ದಿನ ಟ್ರಾಫಿಕ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಕವಾಯತು ನಡೆಸಿ ಸೂಚನೆಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ಸುಗಮ ಮತ್ತು ಸುರಕ್ಷಿತ ಸಂಚಾರವೇ ನಮ್ಮ ಧ್ಯೇಯ, ಸಹ ವಾಹನ ಸವಾರರು ಮತ್ತು ಪಾದಚಾರಿಗಳ ಹಕ್ಕನ್ನು ಗೌರವಿಸುವುದು ಮತ್ತು ಸಂಚಾರ ನಿಯಮ ಪಾಲಿಸುವುದು ಎಲ್ಲರ ಕರ್ತವ್ಯ ಎಂದು ಅವರು ತಿಳಿಸಿದರು.