ಇಂದಿನಿಂದ ಸರಕಾರಿ ನೌಕರರಿಂದ ಅನಿರ್ಧಿಷ್ಟಾವಧಿ ಮುಷ್ಕರ

ಲಿಂಗಸುಗೂರ,ಮಾ.೦೧- ಕರ್ನಾಟಕ ರಾಜ್ಯ ಸರಕಾರಿ ನೌಕರರ ಕೇಂದ್ರ ಸಂಘ ತಾಲೂಕ ಶಾಖೆ ವತಿಯಿಂದ
ನೌಕರರ ಬಹು ದಿನಗಳ ಬೇಡಿಕೆಗಳಾದ ಸರಕಾರಿ ನೌಕರರ ಮುಂದಿನ ಭವಿಷ್ಯಕ್ಕಾಗಿ ನಮ್ಮ ನ್ಯಾಯುತವಾದ ಹಕ್ಕುಗಳ ಬೇಡಿಕೆಗಳಿಗಾಗಿ ಓPS ರದ್ದು ಮಾಡಿ ಔPS ಮುಂದವರಿಸಬೇಕು ಮತ್ತು ೭ನೇ ವೇತನ ಪೇಸ್ಕೇಲ್ ಅನ್ನು ಕೂಡಲೇ ಜಾರಿಗೊಳಿಸಲು.೧/೩/೨೩/ರಂದು ಮುಷ್ಕರ ಹಮ್ಮಿಕೊಂಡಿದ್ದು, ಪ್ರಯುಕ್ತ ಪೂರ್ವಬಾವಿ ಸಭೆಯನ್ನು ಎಲ್ಲಾ ವೃಂದ ನೌಕರರು ತಮ್ಮ ತಮ್ಮ ಇಲಾಖೆ ಕಚೇರಿಗಳ ಮುಂದೆ ಕರ್ತವ್ಯಕ್ಕೆ ಗೈರು ಹಾಜರು ಆಗುವ ಮೂಲಕ ಸರಕಾರದ ನಡೆಯನ್ನು ಖಂಡಿಸಿ ಪ್ರತಿಭಟಿಸಿದರು.
ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ತುರ್ತು ಪರಿಸ್ಥಿತಿ ಇರುವರಿಗೆ ಮಾತ್ರ ಸೇವೆ. ಲಿಂಗಸುಗೂರ ಸರಕಾರಿ ನೌಕರರ ಮುಷ್ಕರದಿಂದ ಸರಕಾರಿ ಆಸ್ಪತ್ರೆ ಬಿಕೋ ಎನ್ನುತ್ತಿದೆ. ಒಳ ರೋಗಿಗಳ ಚಿಕಿತ್ಸೆಗೆ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಡಾ.ಹರ್ತಿಕ ಪಾಟೀಲ್ ಸಂಜೆವಾಣಿ ವರದಿಗಾರರು ಭೇಟಿ ನೀಡಿದಾಗ ಮಾಹಿತಿಯನ್ನು ನೀಡಿದರು. ಓ.ಪಿ.ಡಿ.ರೋಗಿಗಳಗೆ ತೊಂದರೆಯಾಗದಂತೆ ಕರ್ತವ್ಯ ನಿರ್ವಹಿಸಲಾಗುವುದು ಎಂದು ಹೇಳಿದರು.
ತಾಲೂಕಿನ ಸರಕಾರಿ ಪ್ರೌಢ ಮತ್ತು ಶಾಲೆಗಳು ಬಂದ ತಾಲೂಕಿನಲ್ಲಿ ೩೫೨ ಪ್ರಾಥಮಿಕ ಶಾಲೆಗಳು ೪೫ ಪ್ರೌಢ ಶಾಲೆಗಳು ಬಂದ್ ಮಾಡುವ ಮೂಲಕ ಬೇಡಿಕೆಯನ್ನು ಒತ್ತಾಯಿಸಿ, ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಪೌರ ಕಾರ್ಮಿಕರ ಬೆಂಬಲಿಸಿದರು. ಈ ಸಂದರ್ಭದಲ್ಲಿ ಬಸವರಾಜ ಕರಡಿ, ರಂಗಣ್ಣ ದೇವರಮನಿ, ಗಿರೀಶ, ಶಿವಪುತ್ರ, ಬೀದರ ಇನ್ನಿತರರು ಇದ್ದರು.