ಇಂದಿನಿಂದ ಶರಣ ಸಂಕುಲದ ನಡಿಗೆ ಮತ್ತೆ ಕಲ್ಯಾಣದತ್ತ

ಲಕ್ಷ್ಮೇಶ್ವರ,ಜು.29: ಇಲ್ಲಿನ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ತ ಇಂದಿನಿಂದ ಆಗಷ್ಟ್ 28ರವರೆಗೆ ಒಂದು ತಿಂಗಳ ಪರ್ಯಾಂತ ಶರಣ ಸಂಕುಲದ ನಡಿಗೆ ಮತ್ತೆ ಕಲ್ಯಾಣದತ್ತ ಎಂಬ ವಿನೂತನ ಕಾರ್ಯಕ್ರಮ ನಡೆಯಲಿದೆ.
ಈ ಕುರಿತು ಬುಧವಾರ ದೇವಸ್ಥಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಲ್.ಎಸ್. ಅರಳಹಳ್ಳಿ ಮಾಹಿತಿ ನೀಡಿದರು.
ಸಿದ್ಧೇಶ್ವರ ಸತ್ಸಂಗ ಬಳಗ, ಜಿಲ್ಲಾ ಕದಳಿ ಮಹಿಳಾ ವೇದಿಕೆ, ತಾಲ್ಲೂಕಾ ಕದಳಿ ಮಹಿಳಾ ವೇದಿಕೆ, ರಾಜ-ರಾಜೇಶ್ವರಿ ಮಹಿಳಾ ಸಾಹಿತ್ಯ ಮತ್ತು ಸಂಸ್ಕøತಿ ವೇದಿಕೆ, ಅಕ್ಕಮಹಾದೇವಿ ಬಳಗ, ಪ್ರೇಮಕ್ಕ ಅಭಿಮಾನಿ ಬಳಗ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮಗಳು ನಡೆಯಲಿವೆ.
ಪ್ರತಿದಿನ ಸಂಜೆ ಸರಿಯಾಗಿ 5.45ಕ್ಕೆ ಕಾರ್ಯಕ್ರಮ ಆರಂಭಗೊಳ್ಳುವುದು. ಇಡೀ ಒಂದು ತಿಂಗಳು ದೇವಸ್ಥಾನದಲ್ಲಿ ಶರಣರ ವಚನಗಳ ಕುರಿತು ಪರಾಮರ್ಷೆ ನಡೆಯಲಿದೆ. ಕಾರಣ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು’ ಎಂದರು.
ಈ ಸಂದರ್ಭದಲ್ಲಿ ಲತಾ ತಟ್ಟಿ, ನಿರ್ಮಲಾ ಅರಳಿ, ರತ್ನ ಕರ್ಕಿ, ಪುರಸಭೆ ಅಧ್ಯಕ್ಷ ಅಶ್ವಿನಿ ಅಂಕಲಕೋಟಿ, ಪ್ರತಿಮಾ ಮಹಾಜನಶೆಟ್ಟರ, ಕವಿತಾ ಅರಳಹಳ್ಳಿ, ಕಾಂಚನಮಾಲಾ ಹಸರೆಡ್ಡಿ, ರೇಖಾ ವಡಕಣ್ಣವರ, ಗಂಗಾಧರ ಅರಳಿ ಇದ್ದರು.