ಇಂದಿನಿಂದ ವಚನ ಮಹಾಂತ ದರ್ಶನ ಪ್ರವಚನ

ಅಥಣಿ: ಅ.20:ಇಲ್ಲಿನ ಸುಕ್ಷೇತ್ರ ಶ್ರೀ ಗೋಟಖಿಂಡಿಮಠದ ಲಿo. ಮಹಾಂತ ಶಿವಯೋಗಿಗಳ ಲಿಂಗೈಕ ಶತಮಾನೋತ್ಸವದ ಅಂಗವಾಗಿ ಇಂದು ಶುಕ್ರವಾರ ದಿ. 20 ರಿಂದ 24ರ ವರೆಗೆ ಪ್ರತಿದಿನ ಸಾಯಂಕಾಲ 6:30ಕ್ಕೆ ವಚನ ಮಹಾಂತ ದರ್ಶನ ಪ್ರವಚನ ಕಾರ್ಯಕ್ರಮ ಜರುಗಲಿದೆ.
ಈ ಪ್ರವಚನ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ಇಂಗಳೇಶ್ವರದ ಚನ್ನಬಸವ ಮಹಾಸ್ವಾಮಿಜಿ, ಹಾಗೂ ನಿಡಸೋಸಿಯ ಜಗದ್ಗುರು ನಿಜಲಿಂಗೇಶ್ವರ ಮಹಾಸ್ವಾಮಿಜಿ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಗಚ್ಚಿನ ಮಠದ ಶಿವಬಸವ ಸ್ವಾಮೀಜಿ ಉದ್ಘಾಟಿಸಲಿದ್ದು, ಈ ಸಂದರ್ಭದಲ್ಲಿ ಶೆಟ್ಟರ ಮಠದ ಶ್ರೀಗಳು. ಪ್ರವಚನಕಾರರಾದ ಭೂಕೈಲಾಸ ಮಂದಿರದ ಮಹಾದೇವ ಮಹಾರಾಜರರು ಉಪಸ್ಥಿತಿಯಲ್ಲಿ ಸಮಾಜ ಸೇವಕರಿಗೆ ಮತ್ತು ಸೇವಾರ್ಥಿಗಳಿಗೆ ಸನ್ಮಾನ ಜರುಗಲಿದೆ ಎಂದು ಕಾರ್ಯಕ್ರಮದ ನೇತೃತ್ವ ವಹಿಸಿರುವ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಪ್ರಕಟಣೆಗೆ ತಿಳಿಸಿದ್ದಾರೆ,