ಇಂದಿನಿಂದ ರುದ್ರಾಕ್ಷಿ ಪ್ರದರ್ಶನ, ಮಾರಾಟ

ಕಲಬುರಗಿ,ಆ 29: ನಗರದ ಕನ್ನಡಭವನದಲ್ಲಿ ಇಂದಿನಿಂದ ಸಪ್ಟೆಂಬರ್ 4 ರವರೆಗೆ ನೇಪಾಳ ದಿವ್ಯ ರುದ್ರಾಕ್ಷ ಅವರ ವತಿಯಿಂದ ರುದ್ರಾಕ್ಷಿ ಪ್ರದರ್ಶನ ಮತ್ತು ಮಾರಾಟವನ್ನು ಆಯೋಜಿಸಲಾಗಿದೆ.
ಪ್ರದರ್ಶನದಲ್ಲಿ ಅಪರೂಪವಾದ ಏಕಮುಖಿ ರುದ್ರಾಕ್ಷಿ, ಚತುರ್ದಶ ಗೌರಿಶಂಕರ,ಗಣೇಶ ರುದ್ರಾಕ್ಷಿ,ಸ್ಫಟಿಕ ಮಾಲಾ,ನವರತ್ನ ಮಾಲಾ,ತುಳಸಿಮಾಲಾ,ಗಂಧಮಾಲಾ,ರುದ್ರಾಕ್ಷಿ ಮತ್ತು ವಿವಿಧ ತರಹದ ಸಾಲಿಗ್ರಾಮಗಳು( ವಿಷ್ಣುಚಕ್ರ,ಲಕ್ಷ್ಮೀ ನರಸಿಂಹ ಮುಂತಾದವುಗಳು)ಹರ್ಬಲ್ ಹೇರ್ ಆಯಿಲ್,ಪೇನ್ ರಿಲೀಫ್ ಆಯಿಲ್ ಹಾಗೂ ಜಪಮಾಲಾಗಳು ಸಿಗಲಿವೆ. ಈ ವಸ್ತು ಪ್ರದರ್ಶನ ನೋಡಲು ಬಂದ ನಾಗರಿಕರಿಗೆ ಪಂಚಮುಖಿ ರುದ್ರಾಕ್ಷಿಯನ್ನು ಉಚಿತವಾಗಿ ನೀಡಲಾಗುವದು ಎಂದು ನೇಪಾಳ ದಿವ್ಯ ರುದ್ರಾಕ್ಷ ಪ್ರದರ್ಶನ ಮತ್ತು ಮಾರಾಟದ ಆಯೋಜಕರು ತಿಳಿಸಿದ್ದಾರೆ.