ಇಂದಿನಿಂದ ರಾಘವೇಂದ್ರ ಶ್ರೀಗಳ ಪಟ್ಟಾಭಿಷೇಕ ಉತ್ಸವ

ಬಾಗಲಕೋಟೆ: ಮಾ 15 : ಮಂತ್ರಾಲಯ ಪ್ರಭು ಶ್ರೀ ರಾಘವೇಂದ್ರ ಸ್ವಾಮಿಗಳ 400ನೇ ಪಟ್ಟಾಭಿಷೇಕ ಉತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ದಿ. 15 ರಿಂದ ನಡೆಯಲಿದ್ದು ವಿದ್ಯಾಗಿರಿಯ ವಿಪ್ರ ಅಭಿವೃದ್ಧಿ ಸಂಘ, ಶ್ರೀ ಸುಭುದೇಂದ್ರತೀರ್ಥ ಪ್ರತಿಷ್ಠಾನ ಜಂಟಿಯಾಗಿ e್ಞÁನಸತ್ರ ಕಾರ್ಯಕ್ರಮ ಆಯೋಜಿಸಿದೆ.
ದಿ. 15 ರಂದು ಬೆಳಿಗ್ಗೆ ರಥೋತ್ಸವ ನಡೆಯಲಿದ್ದು ಸಂಜೆ ಪಂ. ರಘೋತ್ತಮಾಚಾರ್ಯ ನಾಗಸಂಪಗಿ ಅವರು ಗುರುಗುಣ ಸ್ತವನ, ದಿ. 16 ರಂದು ಪಂ. ನವೀನಾಚಾರ್ಯ ಜೋಶಿ ಅವರಿಂದ ನದಿ ತಾರತಮ್ಯ ಸೊÂ್ತೀತ್ರ, ದಿ. 17 ರಂದು ಪಂ. ಭೀಮಸೇನಾಚಾರ್ಯ ಪಾಂಡುರಂಗಿ ಅವರಿಂದ ರಾಯರ ಸೊÂ್ತೀತ್ರದಲ್ಲಿ ಶ್ರೀ ರಾಯರ ಮಹಿಮೆ, ದಿ. 18 ರಂದು ಪಂ. ಬಿ.ಎನ್. ಶ್ರೀನಿವಾಸಾಚಾರ್ಯ ಅವರಿಂದ ರಾಮಚಾರಿತ್ರ್ಯ ಮಂಜರಿ, ದಿ. 19 ರಂದು ಪಂ. ಬಿಂದುಮಾಧವಾಚಾರ್ಯ ನಾಗಸಂಪಗಿ ಅವರಿಂದ ಪ್ರಾತಃ ಸಂಕಲ್ಪ ಗದ್ಯ ಪ್ರವಚನ ನಡೆಯಲಿದೆ.
e್ಞÁನಸತ್ರ ಕಾರ್ಯಕ್ರಮ ಪ್ರತಿನಿತ್ಯ ಸಂಜೆ 6.30 ರಿಂದ 7.15 ರವರೆಗೆ ನಡೆಯಲಿದ್ದು ನಂತರ ಸಾನಿಧ್ಯ ವಹಿಸುವ ಶ್ರೀ ವಿದ್ಯಾತ್ಮತೀರ್ಥ ಶ್ರೀಪಾದಂಗಳವರಿಂದ ಅನುಗ್ರಹ ಸಂದೇಶ ನಡೆಯಲಿದೆ.
ನವನಗರದ ಶ್ಯಾಮಾಚಾರ್ಯ ಇಂಗಳೆ ಅವರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ, ಕಿಲ್ಲೆಯಲ್ಲಿರುವ ಶ್ರೀ ಮಂತ್ರಾಲಯ ಶಾಖಾ ಮಠದಲ್ಲಿ ಕೂಡ ಪಟ್ಟಾಭಿಷೇಕ ಮಹೋತ್ಸವ ನಡೆಯಲಿದೆ.