ಇಂದಿನಿಂದ ರಮ್ಮನಹಳ್ಳಿಯಲ್ಲಿ ಕುಸ್ತಿ ಟೂರ್ನಿ

ಸಂಜೆವಾಣಿ ನ್ಯೂಸ್
ಮೈಸೂರು:ಮಾ.31:- ರಮ್ಮನಹಳ್ಳಿಯಲ್ಲಿ ಮಾರಮ್ಮ ದೇವಿ ಜಾತ್ರೆ ಪ್ರಯುಕ್ತ ಮಾರ್ಚ್ 31 ಮತ್ತು ಏಪ್ರಿಲ್ 1ರಂದು ಕುಸ್ತಿ ಟೂರ್ನಿ ಆಯೋಜಿಸಲಾಗಿದೆ ಎಂದು ವ್ಯವಸ್ಥಾಪಕ ಪೈ.ಶಿವು ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ 31ರಂದು ಬೆಳಿಗ್ಗೆ 7ರಿಂದ ಪಾಯಿಂಟ್ ಕುಸ್ತಿ ತಯಾರಿ ನಡೆಯಲಿದ್ದು, ಸುಮಾರು 500 ಮಂದಿ ಭಾಗವಹಿಸುವರು. ಏಪ್ರಿಲ್ 1ರಂದು ನಾಡ ಕುಸ್ತಿ ಟೂರ್ನಿ ನಡೆಯಲಿದ್ದು, 30 ಜೋಡಿಗಳು ಭಾಗವಹಿಸುವವು. ಒಂದು ಜೊತೆ ಮಹಿಳಾ ತಂಡವು ಸ್ಪರ್ಧಿಸಲಿದೆ. ಸರ್ವರಿಗೂ ಉಚಿತ ಪ್ರವೇಶವಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ರವಿ, ಅಮೃತ್ ಪುರೋಹಿತ್, ಕುಮಾರ್, ರಮೇಶ್, ಮಧು ಉಪಸ್ಥಿತರಿದ್ದರು.