ಇಂದಿನಿಂದ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆ

ಸಂಜೆವಾಣಿ ವಾರ್ತೆ
ಹನೂರು: ನ.11:- ತಾಲೂಕಿನ ಪ್ರಸಿದ್ದ ಧಾರ್ಮಿಕ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಸೆ.11 ರಿಂದ ದೀಪಾವಳಿ ಜಾತ್ರಾ ಮಹೋತ್ಸವ ಪ್ರಾರಂಭವಾಗಲಿದ್ದು, ಐದು ದಿನಗಳ ಕಾಲಾ ಜಾತ್ರಾ ಮಹೋತ್ಸವವು ಬಹಳ ಅದ್ದೂರಿಯಾಗ ಜರುಗಲಿದ್ದು ಜಾತ್ರಾ ಮಹೋತ್ಸವದ ಮಗಳು ಅಗತ್ಯ ಸಿದ್ಧತೆಗಳ ಬಗ್ಗೆ ಪ್ರಾಧಿಕಾರ ಕಾರ್ಯದರ್ಶಿ ಸರಸ್ವತಿ ಅವರು ಸಭೆ ನಡೆಸಿದರು.
ದೀಪಾವಳಿ ಜಾತ್ರಾ ಮಹೋತ್ಸವದ ಅಂಗವಾಗಿ ಸೆ10 ರಂದು ಮಲೆ ಮಾದೇಶ್ವರ ಸ್ವಾಮಿಗೆ ವಿಷೇಶ ಪೂಜಾ ಪುನಸ್ಕಾರಗಳು ನೆರವೇರಲಿದ್ದು, 11 ರಂದು ಮಾದೇಶ್ವರ ಸ್ವಾಮಿಗೆ ಎಣ್ಣೆ ಮಜ್ಜನ ಸೇವೆ, 12 ರಂದು ನರಕ ಚತುರ್ತಿ ಅಂಗವಾಗಿ ವಿಷೇಶ ಸೇವೆಗಳು ಹಾಗೂ ಉತ್ಸವಾದಿಗಳು, 13 ರಂದು ಅಮಾವಾಸ್ಯೆಯ ಪ್ರಯುಕ್ತ ಹಾಲರುವೆ ಉತ್ಸವ ಹಾಗೂ ಬೇಡಗಂಪಣ ಸಮುದಾಯದ ವಿಧಿ ವಿದಾನದಲ್ಲಿ ಉತ್ಸವಾದಿಗಳು ಬಿಳಿ ಆನೆ ಉತ್ಸವ ಹಾಗೂ ವಿಷೇಶ ಪೂಜಾ ಪುನಸ್ಕಾರಗಳು ಸೆ 14 ರಂದು ಬೆಳಿಗ್ಗೆ 8.50 ರಿಂದ 9.50 ರೊಳಗೆ ಸಲ್ಲುವ ಶುಭ ಮಹೋರ್ತದಲ್ಲಿ ಸಲ್ಲುವ ಸುಭ ಲಗ್ನದಲ್ಲಿ ಮಾದೆಶ್ವರ ಸ್ವಾಮಿಯ ಮಹಾ ರಥೋತ್ಸವವು ಜರುಗುವ ಮೂಲಕ ಮಾದೇಶ್ವರ ಸ್ವಾಮಿಯ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ತೆರೆ ಎಳೆಯಲಾಗುತ್ತದೆ.
ದೀಪಾವಳಿ ಜಾತ್ರೆಗೆ ಬರುವ ಭಕ್ತರಿಗೆ ವಿಷೇಶ ಸೌಕರ್ಯ :
ಪ್ರಸಿದ್ದ ಧಾರ್ಮಿಕ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರ ಸ್ವಮಿ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆಯಿಂದ ಬರುವ ಎಲ್ಲಾ ಭಕ್ತಾಧಿಗಳ ಅನುಕೂಲಕ್ಕಾಗಿ ನೆರಳಿನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ನಿರಂತರ ಅನ್ನ ದಾಸೊಹದ ವ್ಯವಸ್ಥೆ, ಹಾಗೂ ದೇವಾಲಯದ ಮುಂಬಾಗ , ಶಾಲಾ ಆವರಣದಲ್ಲಿ, ಸಾಲೂರು ಮಠದಲ್ಲಿ ಭಕ್ತಾಧಿಗಳು ತಂಗು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಹಾಗೆಯೇ ಶ್ರೀ ಕ್ಷೇತ್ರಕ್ಕೆ ರಾಜ್ಯದ ನಾನಾ ಭಾಗಗಳಿಂದ ಕಾಲ್ನಡಿಗಗೆಯಲ್ಲಿ ಬರುವಂತಹ ಭಕ್ತರಿಗೆ ತಾಳು ಬೆಟ್ಟದಿಂದ ಶ್ರೀ ಕ್ಷೇತ್ರದ ವೆರೆಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಅಲ್ಲಲ್ಲಿ ಭಕ್ತಾಧಿಗಳು ತಂಗಲು ವ್ಯವಸ್ಥೆಯನ್ನು ಕ್ಲಪಿಸಲು ಯೋಜನೆಯನ್ನು ರೂಪಿಸಲಾಗಿದೆ.
ಕರ್ನಾಟಕ ಹಾಗೂ ತಮಿಳುನಾಡಿನಿಂದ ಸಾರಿಗೆ ವ್ಯವಸ್ಥೆ :
ದೀಪಾವಳಿ ಜಾತ್ರಾ ಮಹೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯವಲ್ಲದೆ ನೆರೆ ರಾಜ್ಯವಾದ ತಮಿಳುನಾಡು ರಾಜ್ಯದಿಂದಲೂ ಸಹ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಳು ಬರುವುದರಿಂದ ತಮಿಳುನಾಡಿನಿಂದ 150 ರಿಂದ 200 ಸಾರಿಗೆ ವಾಹನ ಹಾಗೂ ಕರ್ನಾಟಕ ರಾಜ್ಯ ಸಾರಿಗೆ ನಿಗಮವು 450 ಸಾರಿಗೆ ವಾಹನಗಳನ್ನು ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಜಾತ್ರೆ ಮಹೋತ್ಸವಕ್ಕೆ ಬರುವಂತಹ ಜನಕ್ಕೆ ಅನುಗುಣವಾಗಿ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಘಟಕ ವ್ಯವಸ್ಥಾಪಕರು ತಿಳಿಸಿದ್ದಾರೆ.
ಜಾತ್ರಾ ಮಹೋತ್ಸವದ ಅಂಗವಾಗಿ ವಿಷೇಶ ಸಭೆ :
ಮಲೆ ಮಹದೇಶ್ವರ ಬೆಟ್ಟ ನಾಗಮಲೆ ಭವನದಲ್ಲಿ. ಮಲೆ ಮಹದೇಶ್ವರ ಬೆಟ್ಟ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ರವರು ದೀಪಾವಳಿ ಹಬ್ಬದ ಪೂರ್ವಸಭೆ ವಿವಿಧ ಇಲಾಖೆ ಅಧಿಕಾರಿಗಳ ನಡೆಯಿತು. ಸಭೆಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ರವರು ಮಾತನಾಡಿ ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಪಾದಯಾತ್ರೆ ಭಕ್ತಾದಿಗಳಿಗೆ ತಾಳ ಬೆಟ್ಟದಲ್ಲಿ ಪ್ರಾಧಿಕಾರದ ವತಿಯಿಂದ ದಾಸೋಹ ವ್ಯವಸ್ಥೆ:
ಕಾಡಿನ ಮಧ್ಯ ಭಾಗಗಳಲ್ಲಿ ತಾತ್ಕಾಲಿಕವಾಗಿ ಕುಡಿಯುವ ನೀರಿನ ವ್ಯವಸ್ಥೆ. ಕೌದಳ್ಳಿಯಿಂದ ಬೆಟ್ಟಕ್ಕೆ ಬರುವ ದ್ವಿಚಕ್ರ ವಾಹನ ಸವಾರರಹಾಗೂ ಆಟೋ ಸವಾರರನ್ನು ಕೌದಳ್ಳಿಯಲ್ಲಿ ನಿಲ್ಲಿಸಿ. ಅಲ್ಲಿಂದ ಮಲೆ ಮಾದೇಶ್ವರ ಬೆಟ್ಟಕ್ಕೆ ಕೆ ಎಸ್ ಆರ್ ಟಿ ಸಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ದಾಸೋಹ ಭವನದಲ್ಲಿ ಹಿರಿಯ ವಿಕಲಚೇತರಿಗೆ ಹಾಗೂ ವಯಸ್ಸಾದವರಿಗೆ ದಾಸೋಹದ ವ್ಯವಸ್ಥೆ. ಶ್ರೀ ಸ್ವಾಮಿಯ ದರ್ಶನ. ಮಲೆ ಮಾದೇಶ್ವರ ಬೆಟ್ಟ ವಿದ್ಯುತ್ ಅಲಂಕಾರ. ನೆರಳಿನ ವ್ಯವಸ್ಥೆ. ಕುಡಿಯುವ ನೀರಿನ ವ್ಯವಸ್ಥೆ. ಸ್ವಚ್ಛತೆ ಅವಸ್ಥೆ. ಬೆಟ್ಟ ಸುತ್ತಮುತ್ತ ಪೆÇಲೀಸ್ ಬಂದೋಬಸ್ತು.
ಸಾರಿಗೆ ವ್ಯವಸ್ಥೆ ಕೆಲವು ಆಯ್ದ ಸ್ಥಳದಲ್ಲಿ ಮೊಬೈಲ್ ಟಾಯ್ಲೆಟ್, ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ನಮ್ಮ ಪ್ರಾಧಿಕಾರದ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಬೇಕು ಮತ್ತು ಬರುವ ಭಕ್ತಾದಿಗಳನ್ನು ಪ್ರೀತಿ ವಿಶ್ವಾಸದಿಂದ ಕಾಣಬೇಕು ಸ್ವಾಮಿಯ ದರ್ಶನವನ್ನು ಸುಗಮವಾಗಿ ಮಾಡಿಸಬೇಕು ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳಿಗಾಗಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಉಪ ಕಾಯ9ದರ್ಶಿ ಚಂದ್ರಶೇಖರ್. ಮಲೆ ಮಾದೇಶ್ವರ ಬೆಟ್ಟ ಸರ್ಕಲ್ ಇನ್ಸ್ಪೆಕ್ಟರ್ ನಂಜುಂಡಸ್ವಾಮಿ. ಹನೂರು ತಾಲೂಕು ಆರೋಗ್ಯ ಅಧಿಕಾರಿ ಡಾಕ್ಟರ್ ಪ್ರಕಾಶ್. ಮಾದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಕಾರ್ಯ ಕಿರಣ್, ಚೆಸ್ಕಾಂ ಇಲಾಖೆ ಅಧಿಕಾರಿ ಶಂಕರ್. ಮಹೇಶ್. ಹಾಗೂ ಇನ್ನಿತರರು ಹಾಜರಿದ್ದರು.