ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ ಆರಂಭ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ರಾಜ್ಯದ ಎಲ್ಲಡೆಯಂತೆ  ಗಣಿನಾಡು ಬಳ್ಲಕಾರಿ ಜಿಲ್ಲೆಯ 16 ಕೇಂದ್ರಗಳಲ್ಲಿ ದ್ವಿತೀಯ ಪಿಯು ಪರೀಕ್ಷೆ ಆರಂಭಗೊಂಡಿದೆ. ಜಿಲ್ಲೆಯ 15  ಸಾವಿರದ 813 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದಾರೆ.
ಬಲಕ್ಳಾರಿ ತಾಲೂಕಿನಲ್ಲಿ 10,  ಸಿರುಗುಪ್ಪ ಮತ್ತು ಸಂಡೂರು ತಾಲೂಕಿನಲ್ಲಿ ತಲಾ ಎರೆಡು ಹಾಗು ಕಂಪ್ಲಿ ಮತ್ತು ಕುರುಗೋಡು ತಾಲೂಕಿನಲ್ಲಿ ತಲಾ ಒಂದು ಪರೀಕ್ಷಾ ಕೇಂದ್ರ ತೆರೆದಿದೆ.
ಜಿಲ್ಲೆಯ 19 ಸರ್ಕಾರಿ, 47 ಖಾಸಗಿ ಸೇರಿದಂತೆ  74 ಕಾಲೇಜುಗಳ 12 ಸಾವಿರದ 194 ಹೊಸಬರು, 2808 ಪುನರಾವರ್ತಿತ ಮತ್ತು 811 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಇಂದು ಕನ್ನಡ ಭಾಷಾ ಪರೀಕ್ಷೆ ನಡೆಯಿತು. ಮಾಧ್ಯಮದ ಪ್ರತಿನಿಧಿಗಳಿಗೆ ಪರೀಕ್ಷಾ ಕೇಂದ್ರ ಪ್ರವೇಶಕ್ಕೆ ನಿರ್ಭಂಧ ವಿಧಿಸಿದೆ.
ಬಳ್ಳಾರಿ ಕರ್ನಾಟಕ ಪಬ್ಲಿಕ್ ಶಾಲೆ(ಗರ್ಲ್ಸ್ ಕಾಲೇಜ್) ಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಸಿದ್ದರಾಗಿದ್ದ ವಿದ್ಯಾರ್ಥಿಗಳು