ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ.

ಸಂಜೆವಾಣಿವಾರ್ತೆ ‌ಹರಪನಹಳ್ಳಿ.ಮಾ.1; ಇಂದಿನಿಂದ ದ್ವೀತಿಯ ಪಿ.ಯು.ಸಿ. ಪರೀಕ್ಷೆ ಆರಂಭವಾಗಿದ್ದು, ಒಟ್ಟು 2600ಕ್ಕು ಹೆಚ್ಚು ವಿದ್ಯಾರ್ಥಿಗಳು ಕನ್ನಡ ಪರೀಕ್ಷೆಯನ್ನು ಬರೆದರು.ಪಟ್ಟಣದ ಹಿರೇಮೆಗಳಗೇರಿ ಪಾಟೀಲ್ ಸಿದ್ದನಗೌಡ ಪದವಿ ಪೂರ್ವ ಕಾಲೇಜು, ಎಸ್‍ಯುಜೆಎಂ ಪಿಯು ಕಾಲೇಜು, ಎಸ್‍ಎಸ್‍ಎಚ್‍ಜೈನ ಪಿಯು ಕಾಲೇಜು, ಸರ್ಕಾರಿ ಜ್ಯೂನಿಯರ್ ಕಾಲೇಜು ಹಾಗೂ ಅರಸೀಕೆರೆಯ ಎಸ್‍ಎಂಕೆಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಒಟ್ಟು ತಾಲೂಕಿನ 5 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದರು.ಬೆಳಿಗ್ಗೆ 10ರಿಂದ ಪರೀಕ್ಷೆ ಪ್ರಾರಂಭವಾಗಿದ್ದು, ಪರೀಕ್ಷಾ ಕೊಠಡಿಗೆ ತೆರಳು ತಮ್ಮ ನೊಂದಾಣಿ ಸಂಖ್ಯೆಯನ್ನು ಹುಡುಕಾಡಲು ಸ್ವಲ್ಪ ಸಮಯ ಪರದಾಡಿದರು, ನಂತರ ಆಯಾ ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಕೊಠಡಿಗಳಿಗೆ ಕಳಿಸಿದರು.ಪರೀಕ್ಷಾ ಕೇಂದ್ರದ ಸುತ್ತಲೂ 200ಮೀಟರ್ ನಿಷೇದಾಜ್ಞೆಯನ್ನು ಹಾಕಲಾಗಿದ್ದು, ಸೂಕ್ತ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.