ಇಂದಿನಿಂದ ಚೌಡೇಶ್ವರಿ ಜಾತ್ರಾ ಮಹೋತ್ಸವ

ಇಂಡಿ :ಜೂ.5:ಪಟ್ಟಣದದಲ್ಲಿ ಶ್ರೀ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವ ಇಂದಿನಿಂದ ಜೂ.5 ರಿಂದ ಪ್ರಾರಂಭವಾಗಲಿದೆ ಎಂದು ಜಾತ್ರಾ ಮಹೋತ್ಸವ ಸಮಿತಿಯ ಸತೀಶ ಕುಂಬಾರ ತಿಳಿಸಿದ್ದಾರೆ.
5 ರಂದು ಬೆಳಿಗ್ಗೆ 6 ಗಂಟೆಗೆ ಶ್ರೀ ಚೌಡೇಶ್ವರಿ ದೇವಿಗೆ ಅಭಿಷೇಕ ಮತ್ತು ಮಹಾ ಮಂಗಳಾರತಿ,ರಾತ್ರಿ 12 ಗಂಟೆಗೆ ಶ್ರೀ ಚೌಡೇಶ್ವರಿ ದೇವಿಯಿಂದ ಬಾಳ ಬಟ್ಟಲು ಮೆರವಣೆಗೆ, ಊರು ಸುತ್ತಿ ಪ್ರದಕ್ಷಣೆ ಹಾಕುವದು, ಭೂತ ಪೇಥಗಳ ಸಂಹಾರ ಮಾಡುವದು ಕಾರ್ಯಕ್ರಮ ನಡೆಯುತ್ತವೆ.
6 ರಂದು ಬೆಳಗ್ಗೆ 9 ಗಂಟೆಗೆ ಚೌಡೇಶ್ವರಿ ಗುಡಿಯಿಂದ ಹೊರಟು ಬಜಾರದಲ್ಲಿ ಮಜ್ಜಿಗೆ ಮಾಡಿ, ಅಗ್ಗಿ ಹಾಯುವದುಊರ ಗೌಡರ ಮನೆಗೆ ಹೋಗಿ ಮತ್ತು ನಗರದ ಎಲ್ಲ ಭಕ್ತರ ಮನೆಗೆ ಹೋಗಿಉಡಿ ತುಂಬಿಕೊಂಡು ಬರುವಳು. ಹರಕೆಗಳನ್ನು ಹೇಳಿ ಶುಭ ಹಾರೈಸುತ್ತ ರಾತ್ರಿ 8 ಗಂಟೆಗೆ ಗುಡಿಗೆ ಆಗಮನ ನಡೆಯುವದು.
7 ರಂದು ಮಧ್ಯಾಹ್ನ 1 ಗಂಟೆಗೆ ಕುಂಬಾರ ಓಣಿ ದೇವಿ ಗುಡಿ ಮುಂದುಗಡೆ, ಬಡಿಗೇರ ಓಣಿ, ಶಾಂತೇಶ್ವರ ದೇವಸ್ಥಾನದ ಮುಂದುಗಡೆ, ಬಜಾರ,ಚವಡಿ ಮತ್ತು ಹುಷೇನ ಬಾಷಾ ದರ್ಗಾದ ಮುಂದುಗಡೆ ಭಕ್ತರ ಜೊತೆ ಕೋಲಾಟಾಡುವಳು, ಗಂಗಿ ಶಿತಾಳ ಮುಗಿಸಿಕೊಂಡು ದೇವಸ್ಥಾನಕ್ಕೆ ಆಗಮನ.
8 ರಂದು ರಾತ್ರಿ 9 ಗಂಟೆಗೆ ಗೋಪಾಲ ಹೂಗಾರ ಮತ್ತು ಗೋಪಾಲ ಹಿಂಚಗೇರಿ ಇವರ ಕಲಾ ಸಿಂಚನ ತಂಡದಿಂದ ಹಾಸ್ಯ ಮತ್ತು ರಸಮಮಂಜರಿ ಕಾರ್ಯಕ್ರಮ ಜರುಗುವದು.
ಡೊಳ್ಳು, ಹಲಿಗೆ,ಗೊಂಬೆ ಕುಣಿತ ಚಿತ್ರ ವಿಚಿತ್ರ ಮದ್ದು ಸುಡುವದು ಸಕಲ ವಾಧ್ಯ ವೈಭವಗಳೊಂದಿಗೆ ಭವ್ಯ ಮೆರವಣೆಗೆ ನಡೆಯುವದು ಎಂದು ಕುಂಬಾರ ತಿಳಿಸಿದ್ದಾರೆ.
ಮಲ್ಲು ದೇವರ, ಚೆನ್ನು ದೇವರ, ಶ್ರೀಕಾಂತ ಕೂಡಿಗನೂರ, ಮಂಜುನಾಥ ದೇವರ, ಕೂಡ್ಲಪ್ಪ ಕುಂಟೋಜಿ, ಸಂತೋಷ ಬಡಿಗೇರ, ರಾಜು ಕಂಬಾರ,ಶಿವೂಗೆಪ್ಪ ಕುಂಬಾರ, ಪ್ರಕಾಶ ಕುಂಬಾರ, ದೇವೆಂದ್ರ ಕುಂಬಾರ, ಮಲ್ಲು ಕುಂಬಾರ ಮತ್ತಿತರಿದ್ದರು.