ಇಂದಿನಿಂದ ಚುನಾವಣಾ ನೀತಿ ಸಂಹಿತೆ ಜಾರಿ: ಡಿಸಿ

ಸಂಜೆವಾಣಿ ನ್ಯೂಸ್
ಮೈಸೂರು: ಮಾ.18:- ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾದ ಹಿನ್ನೆಲೆ ನೀತಿ ಸಂಹಿತೆ ಜಾರಿಗೊಂಡಿದ್ದು, ಈ ಬಾರಿ 17799ಮಂದಿ ಯುವ ಮತದಾರರು ನೊಂದಾಣಿಯಾಗಿದ್ದು ಲೋಕದ ಭವಿಷ್ಯ ಬರೆಯಲಿದ್ದಾರೆ.
ಈ ಕುರಿತು ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಮೈಸೂರು ಜಿಲ್ಲಾಧಿಕಾರಿಯೂ ಆಗಿರುವ ಚುನಾವಣಾಧಿಕಾರಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಚುನಾವಣಾ ನೀತಿ ಸಂಹಿತೆ ಕುರಿತು ಮಾಹಿತಿ ನೀಡಿದ್ದು ಹೀಗೆ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ 2072337 ಮತದಾರರಿದ್ದಾರೆ. ಮಡಿಕೇರಿ, ವಿರಾಜಪೇಟೆ, ಪಿರಿಯಾಪಟ್ಟಣ, ಹುಣಸೂರು, ಚಾಮುಂಡೇಶ್ವರಿ, ಕೃಷ್ಣರಾಜ, ಚಾಮರಾಜ, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಕ್ಷೇತ್ರವಾಗಿದೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 2202 ಮತಗಟ್ಟೆಗಳು ಸ್ಥಾಪನೆ ಮಾಡಿದ್ದು, ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾದ ದಿನದಿಂದಲೇ ನೀತಿ ಸಂಹಿತೆ ಜಾರಿಯಲ್ಲಿರಲಿದೆ ಎಂದು ಹೇಳಿದರು.
ಮಾ.28ರಂದು ಚುನಾವಣಾ ಅಧಿಸೂಚನೆ ಪ್ರಕಟಗೊಂಡಿದ್ದು, ಏ.4ರವರೆಗೆ ನಾಮಪತ್ರಗಳನ್ನು ಸಲ್ಲಿಸಲು ಅವಕಾಶವಿರಲಿದೆ. ಏ.5ರಂದು ನಾಮಪತ್ರಗಳ ಪರಿಶೀಲನೆ, ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಏ.8ಕೊನೆಯ ದಿನವಾಗಿರಲಿದೆ. ಎ.26ರಂದು ಚುನಾವಣೆ ನಡೆಯಲಿದೆ. ಜೂ.4ರಂದು ಮತಗಳ ಎಣಿಕೆ ನಡೆಯಲಿದೆ. ಜೂ.6ಕ್ಕೆ ಚುನಾವಣೆ ಮುಕ್ತಾಯವಾಗಲಿದೆ ಎಂದರು.
ನಗರ ಪೆÇಲೀಸ್ ಆಯುಕ್ತ ರಮೇಶ್ ಬಾನೋತ್ ಮಾತನಾಡಿ, ಮೈಸೂರು ನಗರ ವ್ಯಾಪ್ತಿಗೆ ನರಸಿಂಹರಾಜ, ಕೃಷ್ಣರಾಜ, ಚಾಮರಾಜ ವಿಧಾನಸಭೆ ಕ್ಷೇತ್ರಗಳ ಎಲ್ಲಾ ಮತಗಟ್ಟೆಗಳು ಒಳಪಡುತ್ತವೆ. ಚಾಮುಂಡೇಶ್ವರಿ ಕ್ಷೇತ್ರದ 167 ಮತಗಟ್ಟೆಗಳು ಹಾಗು ವರುಣ ಕ್ಷೇತ್ರದ 8 ಮತಗಟ್ಟೆಗಳು ಸಹ ನಗರ ಪೆÇಲೀಸ್ ಇಲಾಖೆಯ ವ್ಯಾಪ್ತಿಯಲ್ಲಿವೆ. ನಗರ ವ್ಯಾಪ್ತಿಯ 971 ಮತಗಟ್ಟೆಗಳ ಪೈಕಿ 220 ಕ್ರಿಟಿಕಲ್ ಬೂತ್, 751 ಸಾಮಾನ್ಯ ಬೂತ್‍ಗಳಾಗಿವೆ. ನಗರದ 10 ಕಡೆ ಚೆಕ್ ಪೆÇೀಸ್ಟ್ ಸ್ಥಾಪಿಸಿದ್ದು, 24ತಾಸು ತಪಾಸಣೆ ನಡೆಸಲಾಗುವುದೆಂದರು.
ನಗರದಲ್ಲಿ 731 ರೌಡಿಶೀಟರ್‍ಗಳಿದ್ದು, 583ಮಂದಿ ಮೇಲೆ ಈಗಾಗಲೇ ನಿಗಾ ವಹಿಸಲಾಗಿದೆ. 69ಮಂದಿಯನ್ನು ಗಡಿಪಾರು ಮಾಡಲು ಕ್ರಮ ಕೈಗೊಳ್ಳಲಾಗಿದೆ. ನಿರ್ಭೀತ ಚುನಾವಣೆ ಸಂಬಂಧ ಈಗಾಗಲೇ ಸಿ ಆರ್ ಪಿಎಫ್‍ನ ಒಂದು ತುಕಡಿ ಮೈಸೂರಿಗೆ ಆಗಮಿಸಿ ಪಥಸಂಚಲನ ನಡೆಸಿದ್ದು, ಶೀಘ್ರದಲ್ಲಿ ಮತ್ತಷ್ಟು ತುಕಡಿಗಳನ್ನು ಕಳುಹಿಸಿಕೊಡುವಂತೆ ಕೋರಲಾಗಿದೆ. ನಗರದಲ್ಲಿ 1077 ಮಂದಿ ಪರವಾನಗಿ ಮೇಲೆ ಶಸ್ತ್ರಾಸ್ತ್ರ ಹೊಂದಿದ್ದಾರೆ. ಈ ಪೈಕಿ ತೀವ್ರ ಅನಿವಾರ್ಯತೆ ಇರುವವರನ್ನು ಹೊರತುಪಡಿಸಿ ಉಳಿದವರ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗುವುದು.
ಮಾದರಿ ನೀತಿ ಸಂಹಿತೆ ಜಾರಿ ಹಾಗೂ ಅಭ್ಯರ್ಥಿಗಳ ವೆಚ್ಚದ ಮೇಲೆ ನಿಗಾವಹಿಸಲು 8 ತಂಡಗಳನ್ನು ರಚಿಸಲಾಗಿದ್ದು, ಈ ಪೈಕಿ 241 ಮಂದಿ ಸೆಕ್ಟರ್ ಅಧಿಕಾರಿ, 50ಮಂದಿ ಫೈಯಿಂಗ್ ಸ್ಕಾ?ವಡ್, ಸ್ಥಳ ಕಾಣ್ಗಾವಲು ತಂಡ 42, ವಿಡಿಯೋ ಚಿತ್ರೀಕರಣ ತಂಡ 23, ವಿಡಿಯೋ ವಿಕ್ಷಣೆಯ ತಂಡ 12, ಲೆಕ್ಕ ಪರಿಶೋದನಾ ತಂಡ 11 ಹಾಗೂ 15 ಮೇಲ್ವಿಕ್ಷಣ ತಂಡ ಕಾರ್ಯ ನಿರ್ವಹಿಸಲಿವೆ ಎಂದು ತಿಳಿಸಿದರು.
1017120 ಪುರುಷ ಹಾಗೂ 1055035 ಮಹಿಳಾ ಹಾಗೂ 182 ಇತರೆ ಮತದಾರರು ಸೇರಿ ಒಟ್ಟು 2072337 ಮಂದಿ ಮತದಾರರಿದ್ದಾರೆ.
ಸೋಷಿಯಲ್ ಮೀಡಿಯಾ ಮೇಲೂ ಕಣ್ಣು
ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸೋಷಿಯಲ್ ಮೀಡಿಯಾಗಳ ಮೇಲೂ ತೀವ್ರ ನಿಗಾವಹಿಸಿದ್ದು, ಯಾರ ಪರವಾಗಿ ಅಥವಾ ಪ್ರಚೋದಕಾರಿ ಭಿತ್ತಿಪತ್ರ ಹಾಗೂ ಬರಹಗಳನ್ನು ಬರೆಯುವವರ ಮೇಲೂ ತೀವ್ರಾನಿಗಾವಹಿಸಲಾಗುವುದು ಎಂದು ರಾಜೇಂದ್ರ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಎಂ.ಗಾಯಿತ್ರಿ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಸೀಮಾಲಾಟ್ಕರ್, ನಗರ ಪೆÇಲೀಸ್ ಆಯುಕ್ತ ರಮೇಶ್ ಬಾನೋತ್ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.