ಇಂದಿನಿಂದ ಚಿತ್ರ ಮಂದಿರ ಬಾಗಿಲು ಬಂದ್

ಬೆಂಗಳೂರು,ಏ.೨೧- ರಾಜ್ಯದಲ್ಲಿ ಕೋರೋನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ರಾತ್ರಿಯಿಂದ ಮತ್ತಷ್ಟು ಬಿಗಿ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಂಡಿದ್ದು ಚಿತ್ರಮಂದಿರದ ಬಾಗಿಲು ಬಂದ್ ಮಾಡಲಾಗಿದೆ
ಹಿನ್ನೆಲೆಯಲ್ಲಿ ಚಿತ್ರ ಮಂದಿರ ಮತ್ತು ಮಲ್ಟಿಪ್ಲೆಕ್ಸ್ ಗಳನ್ನು ಸಂಪೂರ್ಣವಾಗಿ ಮುಚ್ಚಿ ನೆನ್ನೆ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ ಹೀಗಾಗಿ ಇಂದಿನಿಂದ ರಾಜ್ಯದಾದ್ಯಂತ ಚಿತ್ರಮಂದಿರಗಳು ಮತ್ತೆ ಸಂಪೂರ್ಣ ಬಂದ್ ಆಗಲಿವೆ.

ದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ರಾಜ್ಯದಲ್ಲಿ ಎರಡನೇ ಬಾರಿಗೆ ಚಿತ್ರಮಂದಿರಗಳನ್ನು ಬಂದ್ ಮಾಡಲಾಗಿದೆ. ಕಳೆದ ವರ್ಷ ಮೊದಲಬಾರಿಗೆ ಚಿತ್ರಮಂದಿರಗಳಲ್ಲಿ ಹಲವು ತಿಂಗಳ ಕಾಲ ಬಂದ್ ಮಾಡಲಾಗಿತ್ತು
ರಾಜ್ಯದಲ್ಲಿ ಮತ್ತೆ ಸೋಂಕು ಕಡಿಮೆಯಾದ ಹಿನ್ನೆಲೆಯಲ್ಲಿ ಚಿತ್ರಮಂದಿರಗಳ ಪುನರಾರಂಭಕ್ಕೆ ಅವಕಾಶ ಮಾಡಿಕೊಡಲಾಗಿತ್ತು ಇದೀಗ ಮತ್ತೆ ಏರಿಕೆಯಾದ ಹಿನ್ನೆಲೆಯಲ್ಲಿ ಚಿತ್ರಮಂದಿರದ ಬಾಗಿಲು ಬಂದ್ ಮಾಡಲಾಗಿದೆ.
ಇದರ ಜತೆಗೆ ರಂಗಮಂದಿರಗಳು, ಆಡಿಟೋರಿಯಮ್ ಗಳು, ಮಾಲ್ ಗಳು, ಮನೊರಂಜನಾತ್ಮಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳು ಸಹ ಬಂದ್ ಆಗಲಿವೆ.
ಅಂದಹಾಗೆ ಏಪ್ರಿಲ್ ೩ ರಂದು ಹೊರಡಿಸಲಾಗಿದ್ದ ಆದೇಶದಲ್ಲಿ ಚಿತ್ರಮಂದಿರಗಳಲ್ಲಿ ಶೇ.೫೦ ಪ್ರೇಕ್ಷಕರಿಗಷ್ಟೆ ಸಿನಿಮಾ ವೀಕ್ಷಿಸಲು ಅವಕಾಶ ನೀಡಲಾಗಿತ್ತು. ಹೊಸ ಮಾರ್ಗಸೂಚಿ ಮೇ ೪ ರವರೆಗೆ ಜಾರಿಯಲ್ಲಿರಲಿದೆ.
ಮೇ ತಿಂಗಳ ಮೂರರಂದು ಮುಂದಿನ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಮತ್ತು ತಾಂತ್ರಿಕ ಸಲಹಾ ಸಮಿತಿ ಪರಿಶೀಲನೆ ನಡೆಸಲಿದ್ದು ಆನಂತರ ಚಿತ್ರಮಂದಿರಗಳ ಬಾಗಿಲು ಹಾಕಬೇಕು ಅಥವಾ ಬೇಡವೇ ಎನ್ನುವ ಕುರಿತು ನಿರ್ಧಾರ ಮಾಡಲು ಸರ್ಕಾರ ಮುಂದಾಗಿದೆ