ಇಂದಿನಿಂದ ಗಡವಂತಿ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಆರಂಭ

ಹುಮನಾಬಾದ:ಜ.10: ತಾಲೂಕಿನ ಗಡವಂತಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ಜ.10 ರಿಂದ ಜ. 17 ರ ವರೆಗೆ ಶ್ರೀ ವೀರಭದ್ರೇಶ್ವ ಜಾತ್ರೆಯ ಅಂಗವಾಗಿ ಜ.10 ರಂದು ಶ್ರೀ ವೀರಭದ್ರೇಶ್ವರ ಹಾಗೂ ಭದ್ರಕಾಳಿ ದೇವರಿಗೆ ಎಣ್ಣೆ ಹಚ್ಚುವ ಮಜ್ಜನ ಕಾರ್ಯ ಜ. 11 ರಿಂದ ಜ.17 ರ ವರೆಗೆ ದಿನಾಲು ಬೆಳಿಗ್ಗೆ ವೀರಭದ್ರ ದೇವರಿಗೆ ಮಹಾ ರುದ್ರಾಭಿಷೆಕ ಜರುಗುವುದು.
ಜ.11 ರಾತ್ರಿ 8:00 ಗಂಟೆಗೆ ಗ್ರಾಮಸ್ಥರಿಂದ ಕೋಲಾಟ, ಜ.12 ರಂದು ಸಾಯಂಕಾಲ 5 ರಿಂದ ಹೊನಲು ಬೆಳಕಿನ ಗಲಿ ಕ್ರೀಕೆಟ, ಜ.13 ರಂದು ಬೆಳಿಗ್ಗೆ 9 ಗಂಟೆಯಿಂದ ಕಲಬುರಗಿಯಿಂದ ನುರಿತ ತಜ್ಞರಿಂದ ಉಚಿತ ಆರೋಗ್ಯ ತಪಾಷಣೆ ಶಿಭಿರದಲ್ಲಿ ನರರೋಗ ತಜ್ಞರು, ಜನರಲ್ ಫಿಜಷನ್, ರೆಡಿಯೋಲೋಜಿಸ್ಟ, ಮಕ್ಕಳ ತಜ್ಞರು, ಮೂತ್ರಪಿಂಡ ತಜ್ಞರು, ಸಂಧಿವಾತ ತಜ್ಞರು, ಚರ್ಮರೋಗ ಮತ್ತು ಕುಷ್ಟಯೋಗ ತಜ್ಞರು, ಹೃದಯರೋಗ ತಜ್ಞರು, ಶ್ವಾಸಕೋಶ ತಜ್ಞರು, ಮುಂತಾದ ನುರಿತ ತಜ್ಞರಿಂದ ವೈದ್ಯಕೀಯ ಶಿಭಿರದ ಪಾಲ್ಗೊಳ್ಳಲಿದ್ದಾರೆ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು. ಶ್ರೀ ವೀರಭದ್ರೇಶ್ವರ ದೇವಸ್ಥಾನ ಪಂಚ ಕಮಿಟಿ ಅಧ್ಯಕ್ಷರು ಬಸವರಾಜ ವಿಭೂತಿ ಮನವಿ ಮಾಡಿದ್ದಾರೆ. ಅಂದು ಸಾಯಂಕಾಲ 6 ಗಂಟೆಯಿಂದ ಬಾಬುರಾವ ಧನಶೆಟ್ಟಿ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಮಕ್ಕಳ ಸಂಸ್ಕ್ರತೀಕ ಚಟುವಟಿಕೆ ಜ.14 ರಂದು ವೀರಭದ್ರದೇವರ ಶಲ್ಯ ಸುಡುವ ಕಾರ್ಯಕ್ರಮ ಜ.15 ರಂದು ಗ್ರಾಮಸ್ಥರಿಂದ ಸಂಸ್ಕ್ರತಿಕ ಚಟುವಟಿಕೆಗಳು ಜ.16 ರಂದು ಅಗ್ನಿ ಪೂಜೆ, ಸಾಯಂಕಾಲ ಸ್ವಾಮಿ ವೀವೇಕಾನಂದ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಜ.17 ರಂದು ಸಾಯಂಕಾಲ 5:00 ಗಂಟೆಗೆ ರಥೋತ್ಸವ ಕಾರ್ಯಕ್ರಮ ಜರುಗುವುದು ಜಾತ್ರಗೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆದು ಪುನಿತರಾಗಬೇಕೆಂದು ಶ್ರೀ ವೀರಭದ್ರೇಶ್ವರ ದೇವಸ್ಥಾನ ಪಂಚ ಕಮಿಟಿ ಅಧ್ಯಕ್ಷರು ಬಸವರಾಜ ವಿಭೂತಿ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ