ಇಂದಿನಿಂದ ಕೇಂದ್ರ ಯೋಜನೆಗಳ ಫಲಾನುಭವಿಗಳ ಸಮಾವೇಶ

ಬೀದರ,ಜು 1 : ಇಂದು ಮತ್ತು ನಾಳೆ ( ಜು 2) ಎರಡು ದಿವಸಗಳ ಕಾಲ ಜಿಲ್ಲೆಯ ನಾಲ್ಕುವಿಧಾನಸಭಾ ಕ್ಷೇತ್ರಗಳಲ್ಲಿ, ಪ್ರಧಾನಮಂತ್ರಿನರೇಂದ್ರ ಮೋದಿಯವರ ನೇತೃತ್ವದ ಕೇಂದ್ರಸರ್ಕಾರದ ವಿವಿಧ ಯೋಜನೆಗಳಡಿ ಲಾಭ ಪಡೆದುಕೊಂಡ ಫಲಾನುಭವಿಗಳ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗಿದೆ
ಎಂದು ಕೇಂದ್ರ ಸಚಿವರಾದ ಭಗವಂತ ಖೂಬಾ ಅವರು ಮಾಹಿತಿ
ನೀಡಿದ್ದಾರೆ.
ಈ ಸಮಾವೇಶದ ಮೂಲಕ ಕೇಂದ್ರ ಸರ್ಕಾರವು ಜನತೆಯಒಳಿತಿಗಾಗಿ ಜಾರಿಗೆ ತಂದಿರುವ ಯೋಜನೆಗಳನ್ನು ಮನವರಿಕೆ ಮಾಡುವ ಕೆಲಸ ಮಾಡಲಾಗುವುದು.
ಇಂದು ಬೀದರ ನಗರ ಹಾಗೂ ಗ್ರಾಮಾಂತರ ಮಂಡಲದ
ವತಿಯಿಂದ ಬೆಳಿಗ್ಗೆ 10 ಗಂಟೆಗೆ, ನಗರದ ಎಸ್.ಆರ್.ಎಸ್ ಫಂಕ್ಷನ್
ಹಾಲ್‍ನಲ್ಲಿ ಸಮಾವೇಶ ಪ್ರಾರಂಭವಾಗಿದ್ದು, ಬೀದರ ದಕ್ಷಿಣ ಮಂಡಲದಲ್ಲಿ ಮಧ್ಯಾಹ್ನ 2ಗಂಟೆಗೆ ಮನ್ನಾಏಖೇಳಿ ಗ್ರಾಮದ ಮಹಾದೇವ ಮಂದಿರ ಹತ್ತಿರ ಜರುಗಲಿದೆ.ನಾಳೆ ( ಜುಲೈ 2) ಬಸವಕಲ್ಯಾಣ ನಗರ ಹಾಗೂ
ಗ್ರಾಮಾಂತರ ವತಿಯಿಂದ ಬೆಳಿಗ್ಗೆ 10 ಗಂಟೆಗೆ ಬಸವಕಲ್ಯಾಣ
ನಗರದ ಸಾಹೀಲ್ ಕಲ್ಯಾಣ ಮಂಟಪದಲ್ಲಿ ಹಾಗೂ ಮಧ್ಯಾಹ್ನ 2
ಗಂಟೆಗೆ ಹುಮನಾಬಾದ ಮಂಡಲದ ವತಿಯಿಂದ ಮಾಣಿಕನಗರದ ಶಿವಚಂದ್ರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ.
ಈ ಎರಡು ದಿನಗಳಲ್ಲಿ 4 ವಿಧಾನಸಭಾ ಕ್ಷೇತ್ರಗಳಲ್ಲಿನಡೆಯಲಿರುವ ಫಲಾನುಭವಿಗಳ ಸಮಾವೇಶಕ್ಕೆ ಆಯಾಕ್ಷೇತ್ರದ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೇಂದ್ರ ಸಚಿವ ಭಗವಂತಖೂಬಾ ಅವರು ಮನವಿ ಮಾಡಿಕೊಂಡಿದ್ದಾರೆ.
ಈ ಸಮಾವೇಶಗಳಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಶಿವಾನಂದಮಂಠಾಳಕರ್ ಹಾಗೂ ಆಯಾ ಕ್ಷೇತ್ರದ ಪಕ್ಷದಶಾಸಕರುಗಳಾದ ಡಾ. ಶೈಲೇಂದ್ರ ಬೆಲ್ದಾಳೆ, ಶರಣು ಸಲಗಾರ, ಡಾ.ಸಿದ್ದು ಪಾಟೀಲ್, ಪಕ್ಷದ ಮುಂಖಂಡರುಗಳಾದ ಮಲ್ಲಿಕಾರ್ಜುನಕುಂಬಾರ, ಅರಿಹಂತ ಸಾವಳೆ, ವಿಜಯಕುಮಾರ ಪಾಟೀಲ್ ಗಾದಗಿ,
ರಾಜಶೇಖರ ನಾಗಮೂರ್ತಿ, ಜಗನ್ನಾಥ ಪಾಟೀಲ್ ಸಿರಕಟನಳ್ಳಿ, ಶಶಿ
ಹೊಸಳ್ಳಿ, ರಾಜೇಂದ್ರ ಪೂಜಾರಿ, ರಾಜರೇಡ್ಡಿ ಶಾಬಾದ, ಪಿರಪ್ಪ ಯರನಳ್ಳಿ, ಲುಂಬಿಣಿ ಗೌತಮ, ಮಹೇಶ್ವರ ಸ್ವಾಮಿ, ಅಶೋಕವಕಾರೆ, ಅರವಿಂದ ಮುತ್ಯಾ, ಸುರೇಶ ಬಿರಾದರ, ಪಂಡಿತ ನಾಗರಾಳೆ ಹಾಗೂ ಕಾರ್ಯಕರ್ತರು ಮತ್ತು ಫಲಾನುಭವಿಗಳು ಭಾಗವಹಿಸಲಿದ್ದಾರೆ.