ಇಂದಿನಿಂದ ಕೂಡ್ಲಿಗಿಯಲ್ಲಿ ಜಾನುವಾರು ಸಂತೆ. ಜಾನುವಾರುಗಳ ಅದ್ದೂರಿ ಮೆರವಣಿಗೆ ಮೂಲಕ ಸಂತೆಬಯಲಿಗೆ.

ಕೂಡ್ಲಿಗಿ.ಜ.6: ಪಟ್ಟಣದಲ್ಲಿ ಇದೇ ಮೊದಲ ಬಾರಿಗೆ ನೂತನವಾಗಿ ಪ್ರತಿ ಬುಧವಾರ ಜಾನುವಾರು ಸಂತೆ ನಡೆಸಲು ಮುಂದಾಗಿ ಇಂದಿನಿಂದ ಇದಕ್ಕೆ ಚಾಲನೆ ನೀಡಲು ಇಂದು ಬೆಳಿಗ್ಗೆ ಪಟ್ಟಣದ ಶ್ರೀ ಪೇಟೆಬಸವೇಶ್ವರ ದೇವಸ್ಥಾನದಿಂದ ಜಾನುವಾರುಗಳ ಅದ್ದೂರಿ ಮೆರವಣಿಗೆ ಪ್ರಮುಖ ಬೀದಿಗಳ ಮೂಲಕ ಜರುಗಿ ಶ್ರೀ ಕೊತ್ತಲಅಂಜನೇಯ ಸ್ವಾಮಿಯ ಸಂತೆ ಬಯಲಿಗೆ ಸಾಗಿದವು. ಪಟ್ಟಣದ ಬೆಂಗಳೂರು ರಸ್ತೆಯ ಶ್ರೀ ಕೊತ್ತಲಅಂಜನೇಯ ಸ್ವಾಮಿಯ ಬಯಲು ಮೈದಾನವು ಸುಮಾರು 9ಎಕರೆ ವ್ಯಾಪ್ತಿಯ ಬಯಲು ಜಾಗವಿದ್ದು ಈ ಸ್ಥಳದಲ್ಲಿ ಪ್ರತಿ ಶುಕ್ರವಾರ ತರಕಾರಿ ಸಂತೆ ನಡೆಯುತ್ತಿದ್ದು ಇದೆ ಸ್ಥಳದಲ್ಲಿ ಜಾನುವಾರು ಸಂತೆ ನಡೆಸುವ ಬಗ್ಗೆ ಪಟ್ಟಣದ ಮುಖಂಡರು ಹಿರಿಯರು ತೀರ್ಮಾನಿಸಿ ಕೂಡ್ಲಿಗಿ ಕ್ಷೇತ್ರದ ಶಾಸಕರು, ಪಟ್ಟಣ ಪಂಚಾಯತಿ ಆಡಳಿತ ಮಂಡಳಿ ಮತ್ತು ತಾಲೂಕು ಆಡಳಿತ ಮಂಡಳಿ ಗಮನಕ್ಕೆ ತಂದು ಪ್ರತಿ ಬುಧವಾರ ಜಾನುವಾರು ಸಂತೆ ನಡೆಸಲು ತೀರ್ಮಾನಿಸಿ ಇದೆ ಮೊದಲು ಪ್ರಾರಂಭವಾಗಲಿರುವ ಜಾನುವಾರು ಸಂತೆ ಚಾಲನೆಗೆ ಇಂದು ಬೆಳಿಗ್ಗೆ ಶ್ರೀ ಪೇಟೆ ಬಸವೇಶ್ವರ ದೇವಸ್ಥಾನದಿಂದ ಜಾನುವಾರುಗಳಿಗೆ ಸಿಂಗರಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಜಾನುವಾರು ಸಂತೆ ಬಯಲಿಗೆ ಸಾಗಿತು.
ತಾಲೂಕಿನ ಎಂ ಬಿ ಅಯ್ಯನಹಳ್ಳಿಯ ರಸ್ತೆ ಬದಿ ಕುರಿ ಮತ್ತು ದನಗಳ ಸಂತೆ ಯಾವುದೇ ಪರವಾನಿಗೆ ಇಲ್ಲದೆ ನಡೆಯುತ್ತಿದ್ದು ಚಿಕ್ಕಜೋಗಿಹಳ್ಳಿ ಉಪ ಮಾರುಕಟ್ಟೆಯಲ್ಲಿ ನಡೆಸಲು ಮುಂದಾದರು ಅಲ್ಲಿ ವ್ಯಾಪಾರಕ್ಕೆ ಜನರು ಹೋಗಿ ಬರಲು ಆಗುವುದಿಲ್ಲ ಎಂಬುವ ಜನತೆ ಅಭಿಪ್ರಾಯಯ ಅರಿತ ತಾಲೂಕು ಕೇಂದ್ರದ ಕೆಲಮುಖಂಡರು ಕೂಡ್ಲಿಗಿ ತಾಲೂಕು ಕೇಂದ್ರದಲ್ಲಿ ಸಂತೆನಡೆಯುವ ಬಯಲುಜಾಗದಲ್ಲಿ ಜಾನುವಾರು ಸಂತೆ ಮಾಡುವಬಗ್ಗೆ ಜನಪ್ರತಿನಿದಿನಗಳು ಮತ್ತು ಅಧಿಕಾರಿಗಳ ಜೊತೆ ಪ್ರಸ್ತಾಪಿಸಿದಾಗ ಅಲ್ಲಿಂದ ತಾತ್ಕಾಲಿಕ ಗ್ರೀನ್ ಸಿಗ್ನಲ್ ದೊರೆತ ಹಿನ್ನೆಲೆಯಲ್ಲಿ ಇಂದಿನಿಂದ ಜಾನುವಾರು ಸಂತೆ ನಡೆಸಲು ಮುಂದಾಗಿದ್ದು ಬೇರೆ ಕಡೆ ಹೋಗಿ ಬರುವ ಬದಲು ತಾಲೂಕಿನ ರೈತರು ಕೂಡ್ಲಿಗಿಯಲ್ಲಿ ನಡೆಯುವ ದನ ಕುರಿಗಳ ಸಂತೆಯಲ್ಲಿ ಭಾಗವಹಿಸಿ ಖರೀದಿಮಾಡುವಲ್ಲಿ ಅನುಕೂಲವಾಗಿದೆ ಎಂದು ಹೇಳಬಹುದಾಗಿದೆ.