ಇಂದಿನಿಂದ ಕಾಲೇಜು ಆರಂಭ

ಕೊಟ್ಟೂರು, ನ.17: ಕೊರೋನಾ ಸೋಂಕು ಕಾಣಿಸಿಕೊಂಡ‌ ಐದಾರು ತಿಂಗಳ ಬಳಿಕ ಪಟ್ಟಣದ ಪದವಿ ಕಾಲೇಜು ತರಗತಿಗಳು ಇಂದಿನಿಂದ ಆರಂಭವಾಗಿವೆ.
ಕಾಲೇಜುಗಳು ಆರಂಭವಾದರೂ ವಿದ್ಯಾರ್ಥಿಗಳು ಕಾಲೇಜಿನ ಕಡೆ ಮುಖಮಾಡಿರುವವರ ಪ್ರಮಾಣ ಕಡಿಮೆ ಇದ್ದು.ಪಟ್ಟಣದ ಕೊಟ್ಟೂರೇಶ್ವರ ಕಾಲೇಜಿನಲ್ಲಿ ಪ್ರತಿ ವಿದ್ಯಾರ್ಥಿಗಳಿಗೆ ಕಾಲೇಜಿನ ಆವರಣದಲ್ಲಿ ಕೋರೋನಾ ಪರೀಕ್ಷೆ ಮಾಡಿಸಲಾಯಿತು. ಪ್ರಾಚಾರ್ಯ ಮಂಜುನಾಥ ಮಾತನಾಡಿ, ಕಾಲೇಜಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.