ಇಂದಿನಿಂದ ಕರಕುಶಲ ಮೇಳ

ಬೆಂಗಳೂರು,ಏ.೨ ಯುಗಾದಿ ಹಬ್ಬದ ಶಾಪಿಂಗ್ ಅಂಗವಾಗಿ ಕರಕುಶಲ ಮೇಳ ಇಂದಿನಿಂದ ಹಮ್ಮಿಕೊಳ್ಳಲಾಗಿದೆ
ಚಿತ್ರಕಲಾ ಪರಿಷತ್ತಿನಲ್ಲಿ ಇಂದಿನಿಂದ ಪ್ರಾರಂಭವಾಗಿರುವ ಬೆಂಗಳೂರು ಉತ್ಸವ ? ಕರಕುಶಲ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ನಟಿ ಗ್ರೀಷ್ಮಾ ಶ್ರೀಧರ್ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಮೇಳದ ಆಯೋಜಕ ಅಫ್ತಾಬ್ ಉಪಸ್ಥಿತರಿದ್ದರು. ಈ ಮೇಳ ಏಪ್ರಿಲ್ ೧೧ ರ ವರಗೆ ನಡೆಯಲಿದೆ.
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿವಿಧ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.