ಇಂದಿನಿಂದ ಐದು ದಿನ ನವೋದಯ ಶ್ರೀವಾರಿ ಪೂಜಾ ಕಾರ್ಯಕ್ರಮ

ರಾಯಚೂರು.ಆ.೦೧- ನವೋದಯ ಶಿಕ್ಷಣ ಸಂಸ್ಥೆ ಆವರಣದ ಶ್ರೀವಾರಿ ಕುಂಭಾಭಿಷೇಕ ಮತ್ತು ಪವಿತ್ರೋತ್ಸವ ಕಾರ್ಯಕ್ರಮ ಇಂದಿನಿಂದ ಐದು ದಿನಗಳ ಕಾಲ ನಡೆಯಲಿದೆ.
ತಿರುಪತಿ ತಿರುಮಲ ಅರ್ಚಕರಿಂದ ವಿಧಿ ವಿಧಾನಗಳ ಮೂಲಕ ಪೂಜಾ ಕೈಂಕರ್ಯ ನಡೆಯಲಿವೆ. ಇಂದು ಮೊದಲ ದಿನ ಬೆಳಗಿನ ಜಾವ ೬ ಗಂಟೆ ಸುಪ್ರಭಾತದೊಂದಿಗೆ ಪೂಜಾ ಕಾರ್ಯ ನಡೆಯಿತು. ನಂತರ ತೋಮಲ ಸೇವೆ, ಅರ್ಚನೆ ಮತ್ತು ನೈವೇದ್ಯ ಕಾರ್ಯಕ್ರಮ ನಡೆಸಲಾಯಿತು. ೯ ಗಂಟೆಗೆಯಿಂದ ಆಚಾರ್ಯಾದಿ ದೀಕ್ಷಾ ಸ್ವೀಕರಣ, ವಾಸ್ತು ಹೋಮ ಮತ್ತು ಆಕಲ್ಯಷ ಹೋಮ ನಡೆಸಲಾಯಿತು. ಸಂಜೆ ೬ ಗಂಟೆಯಿಂದ ಅಂಕುರಾರ್ಪಣ, ಅಗ್ನಿ ಪ್ರತಿಷ್ಟಾಪನಾ ಮತ್ತು ಕಳಪಕಾರ್ಷಣಂ ಕಾರ್ಯಕ್ರಮ ನಡೆಯಲಿದೆ.
ಐದು ದಿನಗಳು ವಿವಿಧ ಪೂಜಾ ಕಾರ್ಯಕ್ರಮಗಳ ನಡೆಯಲಿವೆ. ಆ.೪ ರಂದು ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾಗಿದೆ. ಶ್ರೀ ವೆಂಕಟೇಶ್ವರ ಸ್ವಾಮಿಗಳ ಭಕ್ತ ಸಮೂಹ ಪೂಜಾ ಕಾರ್ಯಕ್ರದಲ್ಲಿ ಪಾಲ್ಗೊಂಡು ಶ್ರೀ ಸ್ವಾಮಿಗಳ ಭಕ್ತಿಗೆ ಪಾತ್ರರಾಗಲು ನವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಸ್.ಅರ್.ರೆಡ್ಡಿ ಅವರು ಕೋರಿದ್ದಾರೆ.