ಇಂದಿನಿಂದ ಎರಡು ದಿನಗಳ ಮೋಟಾರ್‌ ಸ್ಫೋರ್ಟ್‌.


ಸಂಜೆವಾಣಿ ವಾರ್ತೆ
ಹೊಸಪೇಟೆ, ಸೆ.9 : ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾದ ಆಶ್ರಯದಲ್ಲಿ ವಿಜಯನಗರದ ಮೋಟಾರ್ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಎರಡು ದಿನಗಳ ಮೋಟಾರ್‌ ಸ್ಫೋರ್ಟ್‌ ಶನಿವಾರ ಮತ್ತು ಭಾನುವಾರ ತಾಲ್ಲೂಕಿನ ಐತಿಹಾಸಿಕ ಹಂಪಿಯ ಬೆಟ್ಟ ಗುಡ್ಡಗಳಲ್ಲಿ ನಡೆಯಲಿದ್ದು, ನೋಡುಗರ ಮೈನವಿರೇಳಿಸಲಿದೆ.
ಮೋಟಾರ್‌ ಸ್ಫೋರ್ಟ್ಸ್‌ನಲ್ಲಿ ಖ್ಯಾತನಾಮರಾದ ಅಶ್ವಿನ್ ನಾಯ್ಕ್, ಪಿ.ವಿ.ಎಸ್. ಮೂರ್ತಿ, ಮೂಸಾ ಶರೀಫ್‌, ಗಿರಿಜಾಶಂಕರ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ, ಮಹಿಳಾ ಚಾಲಕಿಯರು ಸಹ ತಮ್ಮ ಕೌಶಲ ತೋರಿಸಲಿದ್ದಾರೆ. ಸ್ಟಾಕ್ (ಪೆಟ್ರೋಲ್ ಮತ್ತು ಡೀಸೆಲ್); ಜಿಮ್ನಿ, ಥಾರ್ 2020 ಸಹಿತ ಹಲವು ಕಂಪನಿಗಳು ಸ್ಪರ್ಧೆಯಲ್ಲಿ ತಮ್ಮ ವಾಹನಗಳನ್ನು ಪಣಕ್ಕೆ ಇರಿಸಿವೆ.
ಶುಕ್ರವಾರ ಸಂಜೆ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಮೋಟರ್‌ ಸ್ಫೋರ್ಟ್‌ಗೆ ಚಾಲನೆ ನೀಡಲಾಯಿತು. 60ಕ್ಕೂ ಅಧಿಕ ಜೀಪ್‌ ಮತ್ತು ಇತರ ವಾಹನಗಳು ಪಾಲ್ಗೊಳ್ಳಲಿದ್ದು, ಜಂಬುನಾಥ ರಸ್ತೆ, ರಾಜಾಪುರ ರಸ್ತೆ ಸಹಿತ ಹಲವೆಡೆ ನುರಿತ ಚಾಲಕರು ತಮ್ಮ ಕೌಶಲ ಮೆರೆಯಲಿದ್ದಾರೆ.
ಈ ಹಿಂದೆ ನಡೆದಿದ್ದ ಕಾರ್ಯಕ್ರಮಗಳು ಸಹ ಯಶಸ್ವಿಯಾದ  ಹಿನ್ನೆಲೆಯಲ್ಲಿ ಉತ್ಸಾಹದಿಂದ ಮತ್ತೊಮ್ಮೆ ವಾಹನಗಳ ಸಾಹಸ ಕ್ರೀಡೆ ಹಮ್ಮಿಕೊಂಡಿದ್ದಾರೆ.
ನಾಳೆ ಸಂಜೆ 5 ಗಂಟೆಗೆ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

One attachment • Scanned by Gmail