ರಾಯಚೂರು, ಸೆ. ೨೪- ಇಂದಿನಿಂದ ಅಕ್ಟೋಬರ್ ೧೫ರವರೆಗೆ ಬೋಧನಾ ಪ್ರಬುದ್ಧತೆ ಪ್ರತಿಭೆ ಪೋಷಣೆ ಸಮಾಜ ಪರಿವರ್ತನೆ ಎಂಬ ಧ್ಯೇಯ ವ್ಯಾಕ್ಯದಡಿ ದೇಶದಾದ್ಯಂತ ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಷನ್ ಅಭಿಯಾನ ಆರಂಭಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಸಲೀಂ ಪಾಷ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಸಮಾಜದಲ್ಲಿ ಅಧ್ಯಾಪಕರ ಸ್ಥಾನಮಾನ ಬೋಧನೆ ಪ್ರಬುದ್ಧತೆ ಮತ್ತು ಪ್ರತಿಭಾ ಪೋಷಣೆಗೆ ಸಾಮಾಜಿಕ ಬದಲಾವಣೆ ಕ್ರಾಂತಿ ನಾಯಕರಾಗುವ ಕಡೆ ಇಡೀ ಶೈಕ್ಷಣಿಕ ವ್ಯವಸ್ಥೆ ಗಮನ ಸೆಳೆಯಲು ಎಐಐಟಿಎ ನಿರ್ಧರಿಸಿದೆ.
ಅಕ್ಟೋಬರ್ ೧ ರಂದು ಕಲುಬುರ್ಗಿಯಲ್ಲಿ ರಾಜ್ಯ ಸಮ್ಮೇಳನ ಹಮ್ಮಿಕೊಂಡಿರುವ ರಾಷ್ಟ್ರವ್ಯಾಪಿ ಅಂಗವಾಗಿ ಕರ್ನಾಟಕ ಘಟಕ ಅಂದು ಕಲ್ಬುರ್ಗಿ ಹಿದಾಯತ್ ಸೆಂಟರ್‌ನಲ್ಲಿ ಬೋಧನಾ ಪ್ರಬುಧ್ಧತೆ, ಪ್ರತಿಭಾ ಪೋಷಣೆ, ಸಮಾಜ ಪರಿವರ್ತನೆ, ಶೀರ್ಷಿಕೆಯಡಿ, ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನ ನಡೆಸಲಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಕಲ್ಬುರ್ಗಿ ಜಿಲ್ಲಾಧಿಕಾರಿ ಫೌಜಿಯಾ ತರನಂ ಸಮ್ಮೇಳನಾ ಉದ್ಘಾಟಿಸಲಿದ್ದಾರೆ. ಉರ್ದು ವಿವಿ ವಿಶೇಷ ಕರ್ತವ್ಯ ಅಧಿಕಾರಿ ಮೌಲಾನಾ ಅಜಾದ್, ಶಿಕ್ಷಣ ತಜ್ಙ ಡಾ. ಮೊಹ್ಮದ್ ಸಿದ್ಧಿಕಿ, ಶಿಕ್ಷಣ ತಜ್ಙ ಸೈಯದ್ ತನ್ಮೀರ್ ಅಹ್ಮದ್ ಭಾಗವಹಿಸಲಿದ್ದಾರೆ.
ರಾಷ್ಟ್ರೀಯ ಅಧ್ಯಕ್ಷ ಅಬ್ದುಲ್ ರಹೀಂ ಶೇಖ್ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯಾಧ್ಯಕ್ಷ ಎಂ.ಆರ್. ಮಾನ್ವಿ, ಕಾರ್ಯದರ್ಶಿ ಯಾಸೀನ್ ಭಿಕ್ಬಾ ಸೇರಿದಂತೆ ಇತರ ಭಾಗವಹಿಸಲಿದ್ದಾರೆ ಎಂದರು.