
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.12: ಇಂದಿನಿಂದ ಜಿಲ್ಲೆಯಲ್ಲಿ ಅನಧಿಕೃತವಾಗಿ ಬ್ಯಾನರ್ ಅಳವಡಿಕೆ ಮತ್ತು ಮತದಾರರಿಗೆ ಉಡುಗೊರೆ ನೀಡುವುದನ್ನು ನಿಷೇಧಿಸಿದೆ. ಈ ಬಗ್ಗೆ ಇಂದು ರಾಜಕೀಯ ಪಕ್ಷಗಳ ನಾಯಕರ ಸಭೆ ಕರೆದು ತಿಳಿಸುತ್ತಿದೆ ಎಂದು ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಹೇಳಿದ್ದಾರೆ.
ಅವರಿಂದು ನಗರದಲ್ಲಿ ಬಳ್ಳಾರಿ ಪತ್ರಕರ್ತರ ಒಕ್ಕೂಟ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಈ ವಿಷಯ ತಿಳಿಸಿದರು.
ಕಳೆದ ವಾರ ಚುನಾವಣಾ ಸಿದ್ದತೆಯ ಸಭೆ ಬೆಂಗಳೂರಿನಲ್ಲಿ ಚುನಾವಣಾ ಆಯೋಗದ ಮುಖ್ಯ ಆಯುಕ್ತರಿಂದ ಸಭೆ ನಡೆಯಿತು. ಸಭೆಯಲ್ಲಿ ಹೇಳಿದಂತೆ ಇತರೇ ರಾಜ್ಯಗಳಂತೆ ಕರ್ನಾಟಕದಲ್ಲಿ ಗಲಭೆ ವಿಚಾರ ಕಡಿಮೆ. ಆದರೆ ಇಲ್ಲಿ ಅಭ್ಯರ್ಥಿಗಳಿಂದ ಚುನಾವಣಾ ಅಮಿಷದ ವೆಚ್ಚದ ಬಗ್ಗೆ ತೀವ್ರ ಆಕ್ಷೇಪ ಇದೆ. ಇದನ್ನು ನಿಯಂತ್ರಿಸಲು ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲು ಸೂಚಿಸಿದೆ.
ಹೀಗಾಗಿ ಸೀರೆ ಮೊದಲಾದ ಸಾಮಾಗ್ರಿಗಳನ್ನು ರಾಜಕೀಯ ಪಕ್ಷಗಳು ಮತದಾರರಿಗೆ ಹಂಚುವ ಬಗ್ಗೆ ದೂರುಗಳು ಬಂದಿದೆ.
ಅದೇರೀತಿ ಅನಧಿಕೃತ ಪ್ಲೆಕ್ಸ್, ಬ್ಯಾನರ್ ಗಳ ಬಗ್ಗೆ ದೂರುಗಳಿದ್ದು, ನಿನ್ನೆ ರಾತ್ರಿ ನಗರದಲ್ಲಿ ಶೇ 80 ರಷ್ಟು ಬ್ಯಾನರ್ ತೆಗೆದಿದೆ. ಇಡೀ ಜಿಲ್ಲೆಯಲ್ಲಿ ಬ್ಯಾನರ್ ತೆರವುಗೊಳಿಸುತ್ತಿದೆಂದರು.
ಆಡಳಿತರೂಡ ಪಕ್ಷಕ್ಕೆ ಹೆಚ್ಚು ಆಕ್ಷೇಪ ಮಾಡಿಲ್ಲ ಎಂಬ ಪ್ರಶ್ನೆಗೆ ಆ ರೀತಿ ಮಾಡಿಲ್ಲ. ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆಗೂ ಅವಕಾಶ ನೀಡಿತ್ತು. ಪಕ್ಷ ಬೇಧ ಮಾಡಲ್ಲ ಎಂದರು.
ಬಳ್ಳಾರಿ ನಗರ ಮತ್ತು ಗ್ರಾಮೀಣ ಕ್ಷೇತ್ರಗಳು ಅತಿ ಹೆಚ್ಚು ಹಣ ಹರಿದಾಡುವ ಕ್ಷೇತ್ರಗಳೆಂದು ಗುರುತಿಸಿದೆ. ಇಂತಹದನ್ನು ಪತ್ತೆಹಚ್ಚಲು 14 ತಂಡಗಳನ್ನು ರಚಿಸಿದೆ.
ಇಂದಿನಿಂದ ಯಾವುದೇ ಪಕ್ಷ ಉಡುಗೊರೆ ಕೊಡುವುದು ಕಂಡು ಬಂದರೆ ಕ್ರಮ ಜರುಗಲಿದೆ. ಈಗಾಗಲೇ ನೀಡಿರುವ ಬಗ್ಗೆ ಸಂಬಂಧಿಸಿದ ಇಲಾಖೆಗಳಿಂದ ಪರಿಶೀಲನೆ ಮಾಡಲಿದೆಂದರು.
1191 ಮತಗಟ್ಟೆ:
ಜಿಲ್ಲೆಯಲ್ಲಿ ಚುನಾವಣೆಗೆ 103 ಸೆಕ್ಟರಲ್ ಆಫೀಸರ್ ಗಳನ್ನು ನೇಮಕ ಮಾಡಿದೆ ಮತದಾನಕ್ಕೆ
1191 ಮತಗಟ್ಟಿಗಳನ್ನು ಸ್ಥಾಪಿಸುತ್ತಿದೆ. 11 ಲಕ್ಷದ 33 ಸಾವಿರ ಮರದಾರರರು ಇದ್ದಾರೆಂದು ಮಾಹಿತಿ ನೀಡಿದರು. ಬಿಸಿಲು, ಮತಗಟ್ಟೆಗಳಲ್ಲಿ ಶೌಚಾಲಯ ಸೌಲಭ್ಯ ಇಲ್ಲ ಎಂಬ ದೂರುಗಳಿರುವುದರಿಂದ ಅವನ್ನು ಸರಿಪಡಿಸಲಿದೆಂದು ಹೇಳಿದರು.
ಮಜ್ಜಿಗೆ:
ಬಿಸಿಲ ತಾಪಮಾನ ಹೆಚ್ಚು ಇರುವ ಸಾಧ್ಯತೆ ಇರುವುದರಿಂದ ಮತದಾನಕ್ಕೆ ಬರುವವರಿಗೆ ಮಧ್ಯಾಹ್ನ ಮಜ್ಜಿಗೆ ಕೊಡುವ ಬಗ್ಗೆ ಚಿಂತನೆ ಇದೆ
ಮತಗಟ್ಟೆಗೆ ಬರಲು ಆಗದ ದೈಹಿಕವಾಗಿ ಅಸಮರ್ಥರಿರುವ 80 ವರ್ಷ ಮೇಲ್ಪಟ್ಟ, ಶೇ 40ಕ್ಕಿಂತಲೂ ಅಂಗವಿಕಲತೆ ಇರುವ ಜನತೆಗೆ ಅಂಚೆ ಮತದಾನಕ್ಕೆ ಅವಕಾಶ ನೀಡುವ ಬಗ್ಗೆ ವರದಿ ಸಿದ್ದತೆ ಮಾಡಲಿದೆ. ಶೇ 65 ಕ್ಕಿಂತ ಮತದಾನ ಕಡಿಮೆ ಆಗಿರುವ ಕಡೆ ಮತದಾನದ ಜಾಗೃತಿ ಮಾಡಲಿದೆಂದರು
ರಾಜ್ಯದಲ್ಲಿಯೇ ಹೆಚ್ಚು:
ಮತದಾರರ ಪಟ್ಟಿಗೆ ಯುವ ಮತದಾರರನ್ನು ಸೇರಿಸುವ ಕಾರ್ಯ ನಮ್ಮ ಜಿಲ್ಲೆ ಮೊದಲ ಸ್ಥಾನದಲ್ಲಿದೆ. 31 ಸಾವಿರ ಯುವ ಮತದಾರರನ್ನು ಸೇರಿಸಿದ್ದು ಇದು
ಶೇ 2.87 ಆಗಿದೆ. ಸಹಾಯಕ ಆಯುಕ್ತ ಹೇಮಂತ್ ಅವರು ಕಳೆದ ಮೂರು ತಿಂಗಳಿಂದ ಕಾಲೇಜುಗಳಲ್ಲಿ ನೋಂದಣಿ ಮಾಡಿಸಿ ಈ ಯಶಸ್ವಿಗೆ ಕಾರಣವಾಗಿದೆ.ಬರುವ ಎಪ್ರಿಲ್ ಒಂದಕ್ಕೆ 18 ವರ್ಷ ತುಂಬುವ ಇನ್ನೂ ನಾಲ್ಕು ಸಾವಿರ ಯುವ ಜನತೆಯನ್ನು ನೋಂದಣಿ ಮಾಡುವ ಗುರಿ ಇದೆ ಹೇಳಿದರು.
ಚೆಕ್ ಪೋಸ್ಟ್:
ಕರ್ನೂಲ್ ಮತ್ತು ಅನಂತಪುರಂ ಜಿಲ್ಲೆಗಳ ಅಧಿಕಾರಿಗಳಿಂದ ಮದ್ಯ ಮತ್ತು ನಗದು ಹಣ ಹರಿದಾಟ ತಡೆಯಲು ಅವರ ಜಿಲ್ಲೆಗಳ ಗಡಿಭಾಗದಲ್ಲಿ ಚೆಕ್ ಪೋಸ್ಟ್ ಹಾಕಲು ಕೋರಿದೆ. ಅಷ್ಟೇ ಅಲ್ಲದೆ ನಮ್ಮ ಜಿಲ್ಲೆಗಳಲ್ಲೂ ಚೆಕ್ ಪೋಸ್ಟ್ ಮಾಡಲಿದೆಂದರು.
ಕನಿಷ್ಟ ಶೇ 82 ರಷ್ಟು ಮತದಾನ:
ಕಳೆದ ಬಾರಿ ಜಿಲ್ಲೆಯಲ್ಲಿ ಶೇ 72 ರಷ್ಟು ಮತದಾನ ಆಗಿತ್ತು. ಈ ಬಾರಿ ಶೇ 82 ರಷ್ಟು ಮತದಾನ ಮಾಡಿಸುವ ಗುರಿ ಹೊಂದಿದೆಂದರು.
1.15 ಲಕ್ಷ ಮತದಾರರು ಡಿಲಿಟ್:
ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ
ಒಂದು ಲಕ್ಷದ 15 ಸಾವಿರ ಮತದಾರರನ್ನು ಮತದಾರರ ಪಟ್ಟಿಯಿಂದ ಕೈ ಬಿಟ್ಟಿದೆ.
ರದ್ದಾದ ಮತದಾರರಲ್ಲಿ ಕಂಪ್ಲಿ ಮತ್ತು ಸಂಡೂರು ಕ್ಷೇತ್ರದಲ್ಲಿ ಹೆಚ್ಚು ಕಂಡು ಬಂದಿದೆ. ಎರೆಡು ಕಡೆ ಹೆಸರು ಇದ್ದವರು 50 ಸಾವಿರ ಇದ್ದರು ಅಂತಹವರನ್ನು ಮತ್ತು ತೀರಿಕೊಂಡವರ ಪ್ರಮಾಣ ಪತ್ರ ಪಡೆದು ಕನಿಷ್ಟ 30 ಸಾವಿರ ಜನರನ್ನು ತೆಗೆದಿದೆ.
ಇದಲ್ಲದೆ ಸ್ಥಳಾಂತರಗೊಂಡವರು ಇದ್ದರು ಅಂತವರು ಹೆಚ್ಚಾಗಿ ಜಿಂದಾಲ್ ಮತ್ತು ಎನ್ ಎಂಡಿಸಿ ಪ್ರದೇಶದಲ್ಲಿ ಇದ್ದರು ಎಂದರು. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ವಿಲೇವಾರಿ ನಡೆದಿದೆಂದು ಹೇಳಿದರು.