ಇಂದಿನಿಂದ ಆಸ್ಟ್ರೇಲಿಯಾ ಓಪನ್ ಟೂರ್ನಿ

ಸಿಡ್ನಿ: ತಾರಾ ಬ್ಯಾಡ್ಮಿಂಟನ್ ಆಟಗಾರ ಎಚ್.ಎಸ್.ಪ್ರಣಯ್ ಲಯವನ್ನು ಮರಳಿ ಪಡೆಯಲು ಪ್ರಯತ್ನ ಪಡುತ್ತಿದ್ದು ಭಾರತ ಇಂದಿನಿಂದ ಆಸ್ಟ್ರೇಲಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಣಸಲಿದೆ.
ಟೂರ್ನಿಯಲ್ಲಿ ಐದನೆ ಸೀಡ್ ಆಟಗಾರನಾಗಿರುವ ಪ್ರಣಯ್ ಕಳೆದ ಎರಡು ಟೂರ್ನಿಗಳಿಂದ ಕಳಪೆ ಪ್ರದರ್ಶನ ನೀಡಿದ್ದಾರೆ. ಕಳೆದ ತಿಂಗಳು ನಡೆದ ಥಾಯ್‍ಲ್ಯಾಂಡ್ ಓಪನ್ ಟೂರ್ನಿಯಲ್ಲಿ ಸಹ ಆಟಗಾರ ಮೀರಾಬಾ ಲುವಾಂಗ್ ವಿರುದ್ಧ ಸೋತಿದ್ದರು.
ಸಿಂಗಾಪುರ ಓಪನ್‍ನಲ್ಲಿ ವಿಶ್ವದ 11ನೇ ರ್ಯಾಂಕ್ ಆಟಗಾರ ಕೆಂಟಾ ನಿಶಿಮೊಟೊ ವಿರುದ್ಧ ಸೋತಿದ್ದರು.
ಇದೀಗ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಪ್ರಣಯ್ ಉತ್ತಮ ಪ್ರದಶ್ನ ನೀಡಲೇಬೇಕಾದ ಒತ್ತಡವನ್ನು ಎದುರಿಸುತ್ತಿದ್ದಾರೆ. ಬ್ರೇಜಿಲ್‍ನ ಇಗೋರ್ ಕೊಯೆಲೊ ವಿರುದ್ಧ ಸೆಣಸಲಿದ್ದಾರೆ.
ಇಂಡೋನೇಷ್ಯಾದ ಸಮೀರ್ ವರ್ಮಾ ಚಿಕೊ ಔರಾ ವಿರುದ್ಧ ಸೆಣಸಲಿದ್ದಾರೆ. ಇನ್ನುಳಿದಂತೆ ಪುರುಷರ ಸಿಂಗಲ್ಸ್‍ನಲ್ಲಿಘಿ, ರವಿ, ಮಿಥುನ್ ಮಂಜುನಾಥ್ ಸೆಣಸಲಿದ್ದಾರೆ.
ಮಹಿಳಾ ಸಿಂಗಲ್ಸ್‍ನಲ್ಲಿ ಅಕ್ಷರಿ ಕಶ್ಯಪ್,ಆಸ್ಮಿತಾ ಚಾಲಿಹಾ, ಅನುಪಮಾ ಉಪಾಧ್ಯಾಯ, ಮಾಳವಿಕಾ ಬಾನಸೂದ್, ಕೆಯೂರಾ ಮೊಪಾಟಿ ಕಣದಲ್ಲಿದ್ದಾರೆ.
ಮಿಶ್ರ ಡಬಲ್ಸ್‍ನಲ್ಲಿ ಸುಮಿತ್ ರೆಡ್ಡಿ, ಸಿಕ್ಕಿರೆಡ್ಡಿ, ತರುಣ್ ಕೊನಾ, ಶ್ರೀಕೃಷ್ಣ, ಆಯೂಶ್ ರಾಜ್ ಗುಪ್ತಾ ಮತ್ತು ಶೃತಿ ಸೆಣಸಲಿದ್ದಾರೆ.