ಇಂಡೋನೇಷಿಯಾ ವಿಮಾನ ಪತನ : ಅವಶೇಷ ಪತ್ತೆ


ಜಕಾರ್ತ, ಜ. ೧೦- ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ರಾಡಾರ್ ಸಂಪರ್ಕ ಕಡಿತಗೊಂಡು ಸಮುದ್ರದಲ್ಲಿ ಪತನವಾಗಿದ್ದ ಇಂಡೋನೇಷಿಯಾದ ವಿಮಾನದ ಅವಶೇಷಗಳನ್ನು ನೌಕಾಪಡೆಯ ಸಿಬ್ಬಂದಿ ಪತ್ತೆ ಮಾಡಿದ್ದಾರೆ
ಶ್ರೀವಿಜಯ ವಿಮಾನಯಾನ ಸಂಸ್ಥೆಗೆ ಸೇರಿದ ವಿಮಾನದಲ್ಲಿ ೧೨ ಸಿಬ್ಬಂದಿ ಸೇರಿದಂತೆ ೬೨ ಮಂದಿ ಪ್ರಯಾಣಿಕರು ಇದ್ದರು. ಪ್ರಯಾಣಿಕರೆಲ್ಲಾ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ವಿಮಾನದ ಅವಶೇಷಗಳು ಪತ್ತೆಯಾದ ಸಮುದ್ರದ ಭಾಗಕ್ಕೆ ೧೦ ಹಡಗುಗಳನ್ನು ನೌಕಾಪಡೆ ಸಿಬ್ಬಂದಿ ರಕ್ಷಣೆಗಾಗಿ ಕಳಿಸಿಕೊಟ್ಟಿದೆ.
ಪಶ್ಚಿಮ ಕಾಲಿಮಂಥನ್ ನಿಂದ ಪಾಂಟಿಯಾನಿಕ್ ಗೆ ವಿಮಾನ ಹೊರಟಿತ್ತು ವಿಮಾನನಿಲ್ದಾಣದಿಂದ ಟೇಕಾಫ್ ಆಗಿ ೪ ನಿಮಿಷದಲ್ಲಿ ರಾಡರ್ ಸಂಪರ್ಕದಿಂದ ಕಡಿತಗೊಂಡಿತ್ತು ಅದರ ಹುಡುಕಾಟ ನಡೆಸಿದಾಗ ಪತನವಾಗಿರುವುದು ಖಚಿತವಾಗಿತ್ತು.
ವಿಮಾನ ಇಂಡೋನೇಷಿಯಾದ ಜಕಾರ್ತದ ಸಮುದ್ರದಲ್ಲಿ ಸಂಪರ್ಕ ಕಡಿತಗೊಂಡಿದ್ದು ಪತನವಾಗಿರುವ ಶಂಕೆ ವ್ಯಕ್ತಪಡಿಸಲಾಗಿತ್ತು.ಇದೀಗ ಆ ಪ್ರದೇಶದಲ್ಲಿ ಅವಶೇಷ ಪತ್ತೆ ಮಾಡಲಾಗಿದೆ
ವಿಮಾನದ ಸಂಪರ್ಕ ಕಡಿತಗೊಂಡ ಬಳಿಕ ರಕ್ಷಣಾಕಾರ್ಯ ಭರದಿಂದ ಸಾಗಿದ್ದು ಸಮುದ್ರದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿವೆ ಎಂದು ಹೇಳಲಾಗಿದೆ.ವಿಮಾನದಲ್ಲಿದ್ದ ೬೨ ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ವಿಮಾನ ಪತನವಾಗಿರುವ ಅವಶೇಷಗಳು ಪತ್ತೆಯಾಗಿವೆ. ಇನ್ನೂ ಎರಡು ಕಡೆ ಸಿಗ್ನಲ್ ಗಳನ್ನು ಗುರುತಿಸಲಾಗಿದೆ. ಬ್ಲಾಕ್ ಬಾಕ್ಸ್ ಸಿಕ್ಕ ನಂತರ ವಿಮಾನ ಪತನಕ್ಕೆ ನಿಖರವಾದ ಕಾರಣ ತಿಳಿಯಲಿದೆ ಎಂದು ಇಂಡೋನೇಷಿಯಾದ ರಕ್ಷಣಾ ಪಡೆಯ ಮುಖ್ಯಸ್ಥ ಬೇಗಸ್ ಪುರುಹಿಟೆ ಹೇಳಿದ್ದಾರೆ.
ಸಮುದ್ರದಲ್ಲಿ ಪತ್ತೆಯಾಗಿರುವ ಅವಶೇಷಗಳು ಶ್ರೀವಿಜಯ ವಿಮಾನಯಾನ ಸಂಸ್ಥೆಗೆ ಸೇರಿರುವುದೇ ಅಥವಾ ಬೇರೆಯದೇ ಎನ್ನುವುದನ್ನು ಪತ್ತೆ ಮಾಡುವ ಕೆಲಸ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಆಕ್ರಂದನ
ಬೋಯಿಂಗ್ ೭೩೭-೫೦೦ ಶ್ರೀವಿಜಯ ವಿಮಾನಯಾನ ಸಂಸ್ಥೆಗೆ ಸೇರಿದ ವಿಮಾನ ಪತನವಾದ ವಿಷಯ ತಿಳಿಯುತ್ತಿದ್ದಂತೆ ವಿಮಾನದಲ್ಲಿದ್ದ ಪ್ರಯಾಣಿಕರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ವಿಮಾನ ಪತನವಾಗಿರುವ ಮಾಹಿತಿ ಖಚಿತಪಟ್ಟಿದೆ ಅಲ್ಲದೆ ಅವಶೇಷಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಕುಟುಂಬದ ಸದಸ್ಯರ ಆಕ್ರಂದನ ಹೆಚ್ಚಾಗಿದೆ.