ಇಂಡೇನ್ ಕಾಲೇಜು: ಡಾ. ಆಶಾರಾಣಿಗೆ ಸನ್ಮಾನ

ಬೀದರ್:ನ.13: ಇಲ್ಲಿಯ ಚಿದ್ರಿಯಲ್ಲಿ ಇರುವ ಇಂಡೇನ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ‘ಬೀದರ್ ಜಿಲ್ಲೆಯ ಕಾವ್ಯ: ಒಂದು ಅಧ್ಯಯನ’ ಪ್ರೌಢ ಪ್ರಬಂಧಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ಹಾಗೂ ಉತ್ತಮ ಸೇವಾ ಪ್ರಶಸ್ತಿಗೆ ಭಾಜನರಾದ ಮಹಾವಿದ್ಯಾಲಯದ ಉಪ ಪ್ರಾಚಾರ್ಯೆ ಡಾ. ಆಶಾರಾಣಿ ಸಂತೋಷ ಗಿರಿ ಅವರನ್ನು ಸನ್ಮಾನಿಸಲಾಯಿತು.
ಜಾಸ್ಮಿನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಜಿಜ್ ಖಾನ್ ಅವರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.
ಈ ಭಾಗದಲ್ಲಿ ಸಂಶೋಧನೆಗೆ ಬಹಳಷ್ಟು ಅವಕಾಶಗಳು ಇವೆ. ಹೀಗಾಗಿ ವಿದ್ಯಾರ್ಥಿಗಳು ಸಂಶೋಧನೆಯತ್ತ ಒಲವು ತೋರಬೇಕು ಎಂದು ಹೇಳಿದರು.
ಇಂಡೇನ್ ಶಿಕ್ಷಣ ಮಹಾವಿದ್ಯಾಲಯವು ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿದೆ. ಕಾಲೇಜಿನಲ್ಲಿ ಓದಿದ ಬಹಳಷ್ಟು ಮಂದಿ ಶಿಕ್ಷಕರಾಗಿ ಆಯ್ಕೆಯಾಗಿದ್ದು, ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.
ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಶಿವಶರಣಪ್ಪ ಹುಗ್ಗೆಪಾಟೀಲ ಮಾತನಾಡಿ, ಪರಿಶ್ರಮ ವಹಿಸಿದರೆ ಯಶಸ್ಸು ಖಂಡಿತ ಸಾಧ್ಯವಿದೆ. ಜಿಲ್ಲೆಯ ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ತೋರಬೇಕು. ಜಿಲ್ಲೆಗೆ ಹೆಸರು ತರಬೇಕು ಎಂದು ಸಲಹೆ ಮಾಡಿದರು.
ಬೀದ???ನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಉಪನ್ಯಾಸಕಿ ಡಾ. ವಿದ್ಯಾ ಪಾಟೀಲ, ಮಕ್ಕಳ ತಜ್ಞ ಡಾ. ಸೋಮಶೇಖರ ಭಾಲ್ಕೆ, ಇಂಡೇನ್ ಕಾಲೇಜು ಕಾರ್ಯದರ್ಶಿ ಶೋಹೆಬ್ ಅಹಮ್ಮದ್ ಉಪಸ್ಥಿತರಿದ್ದರು. ಚನ್ನಮ್ಮ ಸೋಲಪೂರೆ ಪ್ರಾರ್ಥನೆ ಗೀತೆ ಹಾಡಿದರು.