
ವಿಜಯಪುರ,ಫೆ 22: ಭೀಮಾತೀರದಲ್ಲಿ ಈಗಷ್ಟೇ ಎರಡು ಕುಟುಂಬಗಳ ದ್ವೇಷ ಹೋಗಲಾಡಿಸಲು ಎಡಿಜಿಪಿ ಅಲೋಕ ಕುಮಾರ ಸಂಧಾನ ನಡೆಸಿದ ಬೆನ್ನಲ್ಲಿಯೇ ಹಾಡುಹಗಲೇ ಉರ್ದು ಶಾಲಾ ಶಿಕ್ಷಕಿಯನ್ನು ದುಷ್ರ್ಕಮಿಗಳು ಭೀಕರ ಹತ್ಯೆ ನಡೆಸಿದ್ದಾರೆ.ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಅಂಜುಮನ್ ಕಾಲೇಜು ರಸ್ತೆಯಲ್ಲಿ ಈ ಘಟನೆ ನಡೆದಿದೆ.
ದಿಲಶಾದ್ ಹವಾಲ್ದಾರ್ (31) ಹತ್ಯೆಯಾದ ದುರ್ದೈವಿ ಯಾಗಿದ್ದಾರೆ. ಮಗನ ಮೇಲೂ ಹರಿತವಾದ ಆಯುಧ ದಿಂದ ಸಹ ಹಲ್ಲೆ ನಡೆಸಲಾಗಿದೆ.
ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಇಂಡಿ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇಂಡಿ ಶಹರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಘಟನೆ ಹಿನ್ನೆಲೆ:
ಕೊಲೆಯಾದ ದಿಲಸಾದ್ ಹವಾಲ್ದಾರ್ ಹಾಗೂ ಪಕ್ಕದ ಮನೆಯಲ್ಲಿ ವಾಸವಿದ್ದ ಬಾದಶಾದ್ ಶೇಖ ನಡುವೆ ಸ್ನೇಹ ಬೆಳೆದು ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಪತಿ ಬಿಟ್ಟು ಮಹಾರಾಷ್ಟ್ರ ದ ಸೋಲಾಪುರದಲ್ಲಿಮಾಡಿಕೊಂಡಿದ್ದನು. ಆದರೆ ಇವರ ಸಂಬಂಧದಲ್ಲಿ ಯಾವುದೇ ಪ್ರಗತಿ ಕಾಣದೇ ಇದ್ದರೂ ಪತಿ ಬಾದಶಾ ಶೇಖ ಬೇರೆಯೊಬ್ಬರ ಜತೆ ಮದುವೆಯಾಗಿದ್ದರು.ಬಾದಾಶಾ ಶೇಖ ಹಾಗೂ ದಿಲ್ ಸಾದ ಹವಾಲ್ದಾರ ದಂಪತಿಗೆ 18 ವರ್ಷದ ಮಗನಿದ್ದನು. ಸಂಜೆ ಮನೆಗೆ ಬಂದಿದ್ದ ಪತಿ ಅನೈತಿಕ ಸಂಬಂಧ ಬಗ್ಗೆ ಪ್ರಶ್ನೆ ಮಾಡಿದ್ದನು.ಇದೇ ವಿಚಾರವಾಗಿ ಪತಿ ಬದಶಾಹ ಪತ್ನಿ ಜತೆ ಜಗಳ ತೆಗೆದು ಚಾಕುವಿಂದ ಇರಿದಿದ್ದಾನೆ. ಇದನ್ನು ಬಿಡಿಸಲು ಬಂದ ಮಗನನ್ನು ಚಾಕುವಿನಿಂದ ಇರಿದ್ದಿದ್ದಾನೆ. ಅದೃಷ್ಟವಶಾತ್ ಮಗ ಬದುಕಿದರೆ ತಾಯಿ ಸಾವನ್ನಪ್ಪಿದ್ದಾಳೆ.
ಸ್ಥಳಕ್ಕೆ ಇಂಡಿ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇಂಡಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿಈ ಪ್ರಕರಣ ದಾಖಲಾಗಿದೆ.