ಇಂಡಿ ಶಾಸಕ ಪಾಟೀಲರಿಗೆ ಕೋವಿಡ್ ಸೋಂಕು

(ಸಂಜೆವಾಣಿ ವಾರ್ತೆ)
ಇಂಡಿ :ಎ.19:ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಕೋವಿಡ್-19 ಪಾಸಿಟೀವ್ ದೃಡಪಟ್ಟ ಹಿನ್ನಲೆಯಲ್ಲಿ ಅವರನ್ನು ಬೆಂಗಳೂರಿನ ಅಪೆÇೀಲೋ ಆಸ್ಪತ್ರೆಯಲ್ಲಿ ಐಶೋಲೆಷನ್ ವಾರ್ಡದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,ಆರೋಗ್ಯವಾಗಿದ್ದಾರೆ.ಆರೋಗ್ಯದ ಹಿತದೃಷ್ಠಿಯಿಂದ ಸಾರ್ವಜನಿಕರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅವರನ್ನು ಭೇಟಿಯಾವುದಕ್ಕೆ ಬರಬಾರದು ಎಂದು ಆಪ್ತಮೂಲಗಳು ತಿಳಿಸಿವೆ.
ಕಡ್ಡಾಯವಾಗಿ ಮಾಸ್ಕಧರಿಸಿ :
ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಮುಂಜಾಗ್ರತೆಯಿಂದ ಇರವುದು ಉತ್ತಮ.ಅವಶ್ಯವಿದ್ದರೆ ಮಾತ್ರ ಮನೆಯಿಂದ ಹೊರಬರಬೇಕು.ಜಾಗ್ರತಿವಹಿಸುವುದರ ಜೊತೆಗೆ ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.ಕ್ಷೇತ್ರದ ಜನರು ಬಹಳಷ್ಟು ಜಾಗ್ರತಿ ವಹಿಸಬೇಕು.ತಮ್ಮ ಸಮಸ್ಯೆಗಳು ತುರ್ತಾಗಿ ಏನಾದರು ಇದ್ದರೆ ಮುಖಾಮುಖಿಯಾಗಿ ಭೇಟಿಯಾಗದೆ ದೂರವಾಣಿ ಇಲ್ಲವೆ ಶಾಸಕರ ಜನಸಂಪರ್ಕ ಕಾರ್ಯಾಲಯದ ಆಪ್ತಸಹಾಯಕರಿಗೆ ಕರೆ ಮಾಡಿ ತಮ್ಮ ಕುಂದುಕೊರತೆಗಳನ್ನು ತಿಳಿಸಿದರೆ ತಕ್ಷಣ ತಮ್ಮ ಸಮಸ್ಯೆಗಳನ್ನು ಬಗೆಹರಿಸಲಾಗುವುದು.ಕೊರೋನಾ 2 ನೇ ಅಲೆ ಹೆಚ್ಚಾಗುತ್ತಿರುವುದರಿಂದ ಜಾಗ್ರತಿ ವಹಿಸಬೇಕು. ಮಾಸ್ಕ,ಸಾಮಾಜಿಕ ಅಂತರ,ಕೈ ತೊಳೆದುಕೊಳ್ಳುವುದರ ಮೂಲಕ ಸ್ವಚ್ಚತೆ ಕಾಪಾಡಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಸಲಹೆ ನೀಡಿದ್ದಾರೆ.ತಾಲೂಕು ಆಡಳಿತ ಕೊರೋನಾ ರೋಗದ ಕುರಿತು ಜನರಲ್ಲಿ ಜಾಗ್ರತಿ ಮೂಡಿಸಬೇಕು ಎಂದು ತಿಳಿಸಿದ್ದಾರೆ.