ಇಂಡಿ ಶಾಖಾ ಕಾಲುವೆಗೆ ನೀರು ಬಿಡುಗಡೆ : ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ

ವಿಜಯಪುರ, ಮೇ.03: ಇಂಡಿ ಶಾಖಾ ಕಾಲುವೆ ಕಿ.ಮೀ. 22.00 ರಿಂದ 172.00 ರವರೆಗೆ ನೀರು ಹರಿಸುವ ಸಮಯದಲ್ಲಿ ಗೇಟಗಳಿಗೆ ಧಕ್ಕೆ ಮಾಡದಂತೆ ಮುಂಜಾಗ್ರತಾ ಕ್ರಮ ವಹಿಸುವ ಸಲುವಾಗಿ ಎಡ-ಬಲ 100 ಮೀಟರ್ ವ್ಯಾಪ್ತಿಯಲ್ಲಿ ದಿನಾಂಕ : 01-05-2023 ರಿಂದ 10-05-2023ರವರೆಗೆ ನಿಷೇಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಆದೇಶ ಹೊರಡಿಸಿದ್ದಾರೆ.
ಇಂಡಿ ಏತ ನೀರಾವರಿ ಯೋಜನೆ ಕಾಲುವೆ ಕಿ.ಮೀ. 12.00 ರಿಂದ 97.3ರವರೆಗೆ ನೀರು ಹರಿಸುವ ಸಮಯದಲ್ಲಿ ವಾರಾಬಂದಿ ಪ್ರಕಾರ ಗೇಟ್ ಬಂದ ಮಾಡಿದಾಗ ಗೇಟ್‍ನ್ನು ಧಕ್ಕೆ ಮಾಡುವುದು, ಈ ಹಿಂದೆ ಸಿಬಂದಿಯವರೊಂದಿಗೆ ಅನುಚಿತವಾಗಿ ವರ್ತಿಸಿರುವ ಘಟನೆ ಜರುಗಿರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಯಾವುದೇ ಅಹಿತಕರ ಘಟನೆ ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಿಸಲಾಗಿದ್ದು, ಈ ಸಂದರ್ಭದಲ್ಲಿ ಇಂಡಿ ಏತ ನೀರಾವರಿ ಯೋಜನೆ ಕಾಲುವೆಯ ಕೊನೆಯ ಭಾಗದಲ್ಲಿ ಕಿ.ಮೀ.22 ರಿಂದ 172ರವರೆಗೆ ಕಾಲುವೆ ವ್ಯಾಪ್ತಿಯ ದಡದ 100 ಮೀಟರ್ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾರ್ವಜನಿಕರು ಎರಡು ಜನಕ್ಕಿಂತ ಹೆಚ್ಚಾಗಿ ಗುಂಪು-ಗುಂಪಾಗಿ ಓಡಾಡುವುದುನ್ನು ನಿಷೇಧಿಸಿದೆ. ಸದರಿ ಕಾಲುವೆಯ 100 ಮೀಟರ್ ಪ್ರದೇಶದಲ್ಲಿ ಜನರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು ನಿಷೇಧಿಸಿ ಆದೇಶಿಸಲಾಗಿದೆ.