ಇಂಡಿ ಮಿನಿ ವಿಧಾನಸೌಧಕ್ಕೆ ಲಿಫ್ಟ ಸೌಲಭ್ಯಕ್ಕಾಗಿ ಸದನದಲ್ಲಿ ಧ್ವನಿ ಎತ್ತಿದ ಶಾಸಕ

(ಸಂಜೆವಾಣಿ ವಾರ್ತೆ)
ಇಂಡಿ :ಮಾ.25: ಪಟ್ಟಣದ ಮಿನಿ ವಿಧಾನಸೌಧಕ್ಕೆ ಲಿಫ್ಟ ಹಾಗೂ ಸ್ವಚ್ಚತೆಯ ಬಗ್ಗೆ ಶಾಸಕ ಯಶವಂತರಾಯಗೌಡ ಪಾಟೀಲ ಅ„ವೇಶನದಲ್ಲಿ ಕಂದಾಯ ಸಚಿವರ ಗಮನ ಸೇಳೆದಿದ್ದು,ಮಿನಿ ವಿಧಾನಸೌಧಕ್ಕೆ ಸ್ವಚ್ಚತೆಗಾಗಿ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಜಿಲ್ಲಾ„ಕಾರಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಲಿಫ್ಟ ಸೌಲಭ್ಯ ಹಾಗೂ ಉಪ ವಿಭಾಗಾ„ಕಾರಿಗಳ ಕಚೇರಿ,ತಹಶೀಲ್ದಾರ ಕಾರ್ಯಾಲಯದ ಪಿಠೋಪಕರಣ ಅಳವಡಿಸಲು ಒಟ್ಟು 56.26 ಲಕ್ಷ ರೂ.ಗಳ ಅಂದಾಜು ಪಟ್ಟಿ ಜಿಲ್ಲಾ„ಕಾರಿಗಳಿಂದ ಸ್ವೀಕೃತವಾಗಿದ್ದು,ಆಡಳಿತಾತ್ಮಕ ಅನುಮೋದನೆ ನಿಡುವ ಬಗ್ಗೆ ಪರಿಶೀಲನೆಯಲ್ಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಅವರು ಉತ್ತರ ನೀಡಿದ್ದಾರೆ.
ಪಟ್ಟಣದಲ್ಲಿ 10 ಕೋಟಿ ವೆಚ್ಚದಲ್ಲಿ 3 ಮಹಡಿಗಳ ಮಿನಿ ವಿಧಾನಸೌಧ ನಿರ್ಮಾಣವಾಗಿದ್ದು,ಮಿನಿ ವಿಧಾನಸೌಧದಲ್ಲಿ ಮಹಿಳೆಯರಿಗೆ ವೃದ್ದರು,ಅಂಗವಿಕಲರಿಗೆ ಅನುಕೂಲವಾಗಲು ಲಿಫ್ಟಯಂತ್ರ ಇಲ್ಲದೆ ಇರುವುದರಿಂದ ಮೇಲಿನ ಮಹಿಡಿಗಳಿಗೆ ಸಾರ್ವಜನಿಕರು ಕಚೇರಿಗಳಿಗೆ ಹೋಗಲು ತೊಂದರೆಯಾಗುತ್ತಿದೆ.ಅಲ್ಲದೆ ಮಿನಿ ವಿಧಾನಸೌಧ ನಿರ್ವಹಣೆ ಇಲ್ಲದೆ ಇರುವುದರಿಂದ ಸಾರ್ವಜನಿಕರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಅನಾನುಕೂಲವಾಗುತ್ತಿದೆ ಎಂದು ಸದನದ ಗಮನ ಸೇಳೆದಿದ್ದಾರೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಮಿನಿ ವಿಧಾನಸೌಧಕ್ಕೆ ಲಿಫ್ಟ ಸೌಲಭ್ಯ ಹಾಗೂ ಉಪ ವಿಭಾಗಾ„ಕಾರಿಗಳ ಕಚೇರಿ ಪಿಠೋಪಕರಣ ಅಳವಡಿಸಲು 25.65 ಲಕ್ಷ ರೂ.ಗಳು, ತಹಶೀಲ್ದಾರ ಕಾರ್ಯಾಲಯಕ್ಕೆ ಪಿಠೋಪಕರಣ ಅಳವಡಿಸಲು 30.61 ಲಕ್ಷ,ರೂಗಳು ಸೇರಿದಂತೆ ಒಟ್ಟು 56.26 ಲಕ್ಷಗಳ ಅಂದಾಜು ಪಟ್ಟಿ ಜಿಲ್ಲಾ„ಕಾರಿಗಳಿಂದ ಸ್ವೀಕೃತವಾಗಿದ್ದು,ಆಡಳಿತಾತ್ಮಕ ಅನುಮೋದನೆ ನಿಡುವ ಬಗ್ಗೆ ಪರಿಶೀಲನೆಯಲ್ಲಿದೆ. ಮಿನಿ ವಿಧಾನಸೌಧ ಸ್ವಚ್ಚತೆ ,ನಿರ್ವಹಣೆಗಾಗಿ ಜಿಲ್ಲಾ„ಕಾರಿಗಳಿಗೆ ಪ್ರತ್ಯಾಯೋಜಿಸುವ ಅ„ಕಾರದನ್ವಯ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕ ಮಾಡಿಕೊಳ್ಳುಲು ಅವಕಾಶ ಕಲ್ಪಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಅವರು ಉತ್ತರಿಸಿದ್ದಾರೆ.