ಇಂಡಿ: ಮತ ಎಣಿಕೆ ಆರಂಭ

ಇಂಡಿ.,ಡಿ.30-ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಆದರ್ಶ ವಿದ್ಯಾಲಯದಲ್ಲಿ ತಾಲ್ಲೂಕಿನ 38 ಗ್ರಾಮ ಪಂಚಾಯತಿಗಳ ಮತ ಎಣಿಕೆ ಕಾರ್ಯ ಇಂದು ಬೆಳಿಗ್ಗೆ 8 ಗಂಟೆಗೆ ಆರಂಭವಾಯಿತು.
ಬೆಳಿಗ್ಗೆ 8 ಗಂಟೆಗೆ ಆರಂಭವಾದ ಮತ ಎಣಿಕೆ ಮೊದಲ ಸುತ್ತಿನಲ್ಲಿ 16 ಗ್ರಾಮ ಪಂಚಾಯತಿಗಳ ಮತ ಎಣಿಕೆ ನಡೆಯಿತು. 11 ಗಂಟೆಯಾದರೂ ಯಾವುದೇ ವಾರ್ಡನ್ ಫಲಿತಾಂಶ ಹೊರ ಬೀಳಲಿಲ್ಲ.
ಕಂದಾಯ ಉಪ ವಿಭಾಗಾಧಿಕಾರಿ ರಾಹುಲ್ ಶಿಂಧೆ ನೇತೃತ್ವದಲ್ಲಿ, ಪ್ರೊಬೇಷನರಿ ಎಸ್ಪಿ ಪ್ರತ್ವೀಕ ಶಂಕರ, ಡಿವೈಎಸ್ಪಿ ಸುಲ್ಫಿ, ಸಿಪಿಐ ರಾಜಶೇಖರ ಬಡದೇಸಾರ ಅವರ ಬಂದೋಬಸ್ತ್ ನಲ್ಲಿ ಮತ ಎಣಿಕೆ ಕಾರ್ಯ ಸುಸೂತ್ರವಾಗಿ ನಡೆಯಿತು.
ಮತ ಎಣಿಕೆ ಸಿಬ್ಬಂದಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ ಉಪ್ಪಿಟ್ಟು, ಚಹಾ, ಮಧ್ಯಾಹ್ನ ಶಾವಿಗೆ ಪಾಯಸ, ಚಪಾತಿ, ವೆಚ್ ಕಡಾಯಿ, ಮೂವ್ ದಾಲ್ ಮತ್ತು ಅನ್ನಸಾರು ವ್ಯವಸ್ಥೆ ಕಲ್ಪಿಸಲಾಗಿತ್ತು.