ಇಂಡಿ ಪ್ರತ್ಯೇಕ ಜಿಲ್ಲೆಗೆ ಶೇಖರ ನಾಯಕ ಆಗ್ರಹ

ಇಂಡಿ:ಡಿ.20:ಜಿಲ್ಲಾ ಕೇಂದ್ರಕ್ಕೆ ಯೋಗ್ಯವಾದ ಭೌಗೋಳಿಕ ಪ್ರದೇಶ ಮತ್ತು ಸರಕಾರಿ ಕಚೇರಿಗಳು ಹೊಂದಿರುವದರಿಂದ ಇಂಡಿ ಜಿಲ್ಲೆಯಾಗಿಸಬೇಕು ಎಂದು ಸರಕಾರಕ್ಕೆ ಮಾಜಿ ತಾ.ಪಂ ಅಧ್ಯಕ್ಷ ಶೇಖರ ನಾಯಕ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಂಡಿ ಪತ್ಯೇಕ ಜಿಲ್ಲೆ ರಚನೆ ಶಾಸಕ ಯಶವಂತರಾಯಗೌಡ ಪಾಟೀಲರ ಬೇಡಿಕೆ ನ್ಯಾಯಸಮ್ಮತವಾಗಿದೆ ಜಿಲ್ಲೆಯಲ್ಲಿ ಇಂಡಿ ಕ್ಷೇತ್ರವಾರು ಜನಸಂಖ್ಯೆ ಹೆಚ್ಚಿಗೆ ಇರುವರಿಂದ ಹಾಗೂ ಭೋಗೋಳಿಕ ಪ್ರದೇಶ ಕೂಡಾ ಸಾಕಷ್ಟು ಜನಸಂಖ್ಯೆ 50ಸಾವಿರ ಹೊಂದಿರುವ ಜಿಲ್ಲೆಯಲ್ಲಿಯೇ ಎರಡನೆ ದೊಡ್ಡಪಟ್ಟಣವಾಗಿದೆ. ಇಂಡಿ, ಸಿಂದಗಿ, ದೇವರಹಿಪ್ಪರಗಿ,ಚಡಚಣ, ಆಲಮೇಲ ತಾಲೂಕುಗಳ ಸಾರ್ವಜನಿಕರು ದೂರದ ವಿಜಯಪೂರ ಜಿಲ್ಲಾಧಿಕಾರಿಗಳ ಕಛೇರಿಗೆ ಅಲೇದಾಡುವ ಕಷ್ಟಕರ ಪರಸ್ಥಿತಿಯಾಗಿದೆ. ಸುಗಮ ಆಡಳಿತಕ್ಕಾಗಿ ಅಭಿವೃದ್ದಿಯ ಹಿತದೃಷ್ಠಿಯಿಂದ ದೊಡ್ಡ ಜಿಲ್ಲೆ ಪ್ರತ್ಯೇಕಿಸಿ ಹೊಸದಾಗಿ ಇಂಡಿ ತಾಲೂಕು ಜಿಲ್ಲೆಯನ್ನಾಗಿ ಮಾಡಬೇಕು. ಈಗಾಗಲೆ ವಿಸ್ತೀರ್ಣ ಹಾಗೂ ಜನಸಂಖ್ಯೆಯಲ್ಲಿ ಕಿರಿದಾದ ಪಟ್ಟಣ ವಿಜಯನಗರ ಜಿಲ್ಲೆ ಮಾಡಿರುವುದು ಉದಾಹರಣೆಯಾಗಿದ್ದು ಒಂದು ವೇಳೆ ಜಿಲ್ಲೆ ಮಾಡದಿದ್ದರೆ ರಾಜ್ಯವ್ಯಾಪಿ ಉಗ್ರಹೋರಾಟ ಮಾಡಲಾಗುವುದು ಎಂದು ಸರಕಾರಕ್ಕೆ ಆಗ್ರಹಿಸಿದ್ದಾರೆ.